ಸಿನಿವಾಣಿ

PHOTOS: ಜಂಬೂಸವಾರಿ ಸಂಪನ್ನ; ಅಂಬಾರಿ ಹೊತ್ತು ಸಾಗಿದ ಅಭಿಮನ್ಯುವಿಗೆ ಕಲಾತಂಡಗಳ ಸಾಥ್​

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ವೈಭವದ ಕೊನೇ ದಿನವಾದ ಜಂಬೂಸವಾರಿ ಈ ಬಾರಿ ಸರಳವಾಗಿ ನಡೆಯಿತು. ಕರೊನಾ ಹಿನ್ನೆಲೆಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಈ ಬಾರಿ ಜಂಬೂ ಸವಾರಿ 20 ನಿಮಿಷ ಮಾತ್ರ ನಡೆದಿದ್ದು, ಬಲರಾಮ ದ್ವಾರದ ಬಳಿ ಸಂಪನ್ನಗೊಂಡಿತು. ಅಭಿಮನ್ಯು ಆನೆ ಅಂಬಾರಿಯನ್ನು ಹೊತ್ತು ಸಾಗಿದ. ವಿವಿಧ ಕಲಾ ತಂಡಗಳು, ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಥ್​ ನೀಡಿದವು.

ಜಂಬೂಸವಾರಿ ಪ್ರಾರಂಭಕ್ಕೂ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ನಾಡಿನ ಜನರಿಗೆ ವಿಜಯದಶಮಿ ಹಬ್ಬದ ಶುಭಾಶಯ ಕೋರಿದರು.