ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ 2 ಸಿನಿಮಾ ಒಟಿಟಿಗೆ ಲಗ್ಗೆ ಇಡಲು ಸಜ್ಜು.
ನವೆಂಬರ್ 12ರಿಂದ ಒಟಿಟಿಯಲ್ಲಿ ಜೈಲರ್ 2 ಸಿನಿಮಾ ನೋಡಲು ಲಭ್ಯ.
ಅಮೆಜಾನ್ ಪ್ರೈಂನಲ್ಲಿ ಕನ್ನಡ, ತಮಿಳು ಸೇರಿದಂತೆ 5 ಭಾಷೆಯಲ್ಲಿ ಜೈಲರ್ 2 ಸಿನಿಮಾ ನೋಡಬಹುದು.
Jailer 2 OTT Release: ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ..ಸೂಪರ್ ಸ್ಟಾರ್ ರಜನಿ ಕಾಂತ್ ನಟನೆಯ ಜೈಲರ್ 2 ಸಿನಿಮಾ ರಿಲೀಸ್ ಆಗಿ 21 ದಿನ ಕಳೆದಿದ್ದು, 800 ಕೋಟಿಗೂ ಅಧಿಕಾ ಕಲೆಕ್ಷನ್ ಮಾಡಿ, ಭರ್ಜರಿ ಯಶಸ್ಸು ಗಳಿಸಿದೆ. ಈ ಹೊತ್ತಲ್ಲೇ ಸಿನಿಮಾ ತಂಡ ದೀಪಾವಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದೆ.
ಹೌದು, ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ 2 ಸಿನಿಮಾವನ್ನು ನೀವು ಥಿಯೇಟರ್ನಲ್ಲಿ ಮಾತ್ರವಲ್ಲ..ಇನ್ನೂ ಒಟಿಟಿಯಲ್ಲೂ ನೋಡಬಹುದಾಗಿದೆ. ಇದೇ ನ.12ರಿಂದ ಮೊಬೈಲ್, ಮನೆಯಲ್ಲಿನ ಟಿವಿಯಲ್ಲಿ ಫ್ಯಾಮಿಲಿ ಜೊತೆಗೆ ಕುಳಿತು..ಚಾಟ್ಸ್ ತಿನ್ನುತ್ತ ನಿಶ್ಚಿಂತೆಯಾಗಿ ನೋಡಬಹುದಾಗಿದೆ.
ಜೈಲರ್ 2 ಸಿನಿಮಾವನ್ನು ನ.12ರಂದು ಅಮೆಜಾನ್ ಪ್ರೈಮ್ನಲ್ಲಿ ನೋಡಬಹುದಾಗಿದೆ. ದೈತ್ಯ ಇ ಕಾಮರ್ಸ್ ಕಂಪನಿಯ ಭಾಗವಾದ ಪ್ರೈಮ್, 160 ಕೋಟಿಗೆ ಜೈಲರ್ 2 ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಯಲ್ಲಿ ನೋಡಬಹುದಾಗಿದೆ.
ನೀವು ಒಟಿಟಿ ಆವೃತ್ತಿಯಲ್ಲಿ ಥಿಯೇಟರ್ಗಿಂತ ಸುಮಾರು 30 ನಿಮಿಷಗಳಷ್ಟು ಹೆಚ್ಚಿನ ದೃಶ್ಯಗಳನ್ನು ನೋಡಬಹುದು. ಇದು ಇನ್ನೂ ಯೋಜಿಸುವ ಹಂತದಲ್ಲಿದೆ ಎಂದು ಸಿನಿಮಾ ತಂಡ ಬಹಿರಂಗಪಡಿಸಿದೆ. ಅಕಸ್ಮಾತ್ ದೃಢವಾದರೆ ಜೈಲರ್2 ಸಿನಿಮಾದ ಅನ್ಕಟ್ ವರ್ಷನ್ ಅನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಜೈಲರ್ 2 ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಜೈಲರ್ ಪಾರ್ಟ್ 1ಗಿಂದ ಪಾರ್ಟ್ 2 ತುಂಬಾ ಚೆನ್ನಾಗಿದೆ ಎಂದು ಸಿನಿಮಾ ಪ್ರೇಮಿಗಳು ವಿಮರ್ಶೆ ಹಂಚಿಕೊಂಡಿದ್ದರು. ಸದ್ಯ ಈ ಸಿನಿಮಾವು ಕಾಲಿವುಡ್ನಲ್ಲೇ ಬ್ಲಾಕ್ ಬ್ಲಸ್ಟರ್ ಹಿಟ್ ಕಂಡಿದೆ. ಈ ಮುಂದುವರಿದ ಭಾಗವು ತನ್ನ ಥಿಯೇಟರ್ ಪ್ರದರ್ಶನದ ಸಮಯದಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿತು. ಇದು ಪೊನ್ನಿಯಿನ್ ಸೆಲ್ವನ್ 2 ಅನ್ನು ಹಿಂದಿಕ್ಕಿ ಐದು ಪಟ್ಟು ಹೆಚ್ಚು ಗಳಿಕೆ ಕಂಡಿದೆ.ಈ ಚಿತ್ರವು ವಿಜಯ್ ಅವರ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾವನ್ನು ಸಹ ಹಿಂದಿಕ್ಕಿದೆ ವಿಶ್ವಾದ್ಯಂತ ಸಂಗ್ರಹವು ಸುಮಾರು ರೂ 440-460 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಈ ವರ್ಷ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ, ಇದರಲ್ಲಿ ಧುರಂಧರ್ ಅಗ್ರ ಸ್ಥಾನದಲ್ಲಿದೆ.
ಜೈಲರ್ 2 ಸಿನಿಮಾದಲ್ಲಿ ರಜನಿಕಾಂತ್ ನಿವೃತ್ತ ಜೈಲರ್ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ನಟಿಸಿದ್ದಾರೆ. ಕುಟುಂಬಸ್ಥರ ಮೇಲೆ ಆರೋಪಿಗಳು ಬೆದರಿಕೆ ಹಾಕಿದಾಗ ಶತ್ರುಗಳನ್ನು ಹೇಗೆ ಮಟ್ಟ ಹಾಕುತ್ತಾರೆ ಎನ್ನುವ ಸುತ್ತ ಕತೆ ಕಟ್ಟಲಾಗಿದೆ. ಈ ಚಿತ್ರದಲ್ಲಿ ಎಸ್ಜೆ ಸೂರ್ಯ, ಶಿವರಾಜ್ಕುಮಾರ್, ಸೂರಜ್ ವೆಂಜರಮೂಡು, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ರಮ್ಯಾ ಕೃಷ್ಣನ್, ನಮೋ ನಾರಾಯಣ ಮತ್ತು ಯೋಗಿ ಬಾಬು ಅವರಂತಹ ತಂಡವಿದೆ. ಮೋಹನ್ ಲಾಲ್, ಹೃತಿಕ್ ರೋಷನ್ ಮತ್ತು ವಿಜಯ್ ಸೇತುಪತಿ ಕೂಡ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ, (ಏಜೆನ್ಸೀಸ್).