ಬೆಂಗಳೂರು: ಜಗ್ಗೇಶ್ ಅಭಿನಯದ ‘ತೋತಾಪುರಿ’ ಚಿತ್ರದ ಮೊದಲ ಭಾಗ ಇಷ್ಟರಲ್ಲಿ ಬಿಡುಗಡೆಯಾಗಬೇಕಿತ್ತು. ಯಾಕೆ ತಡವಾಯಿತು ಎಂದು ಬಿಡಿಸಿ ಹೇಳಬೇಕಿಲ್ಲ. ಈಗ ಚಿತ್ರವು ಮುಂದಿನ ಕೆಲವು ದಿನಗಳಲ್ಲಿ ಬಿಡುಗಡೆ ಯಾಗಲಿದ್ದು, ಮೊದಲ ಹಂತವಾಗಿ ಮೊದಲ ಹಾಡು ಬಿಡುಗಡೆಯಾಗಿದೆ.
‘ಬಾಗ್ಲು ತೆಗಿ ಮೇರಿ ಜಾನ್ ...’ ಎಂದು ಶುರುವಾಗುವ ಈ ಹಾಡಿನಲ್ಲಿ ಜಗ್ಗೇಶ್, ಅದಿತಿ, ವೀಣಾ ಸುಂದರ್ ಮುಂತಾದವರು ನಟಿಸಿದ್ದು, ವ್ಯಾಸರಾಜ ಸೋಸಲೆ, ಅನನ್ಯಾ ಭಟ್ ಮತ್ತು ಸುಪ್ರಿಯಾ ರಾಮ್ ಧ್ವನಿಯಾಗಿದ್ದಾರೆ. ನಾಯಕಿಗೆ ನಾಯಕ ಪ್ರೇಮ ನಿವೇದನೆ ಮಾಡುವ ಈ ಹಾಡಿಗೆ ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದು, ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಗಿದೆ.
ವಿಜಯಪ್ರಸಾದ್ ಸಾಹಿತ್ಯ ಬರೆದಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ‘ತೋತಾಪುರಿ’ ಚಿತ್ರದಲ್ಲಿ ಜಗ್ಗೇಶ್, ಅದಿತಿ, ಧನಂಜಯ್, ಸುಮನ್ ರಂಗನಾಥ್ ಮುಂತಾದವರು ಅಭಿನಯಿಸಿದ್ದು, ವಿಜಯಪ್ರಸಾದ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ.