ಸಿನಿವಾಣಿ

ಇಲ್ಲಿ ಬೆಳೆಯುವುದು ಸುಲಭವಲ್ಲ

vinaymk1969

ನವದೆಹಲಿ: ಬಾಲಿವುಡ್​ನಲ್ಲಿ ಸುಶಾಂತ್ ಆತ್ಮಹತ್ಯೆ ಬೆನ್ನಲ್ಲೇ ನೆಪೋಟಿಸಂ ವಿಚಾರವಾಗಿ ಸಾಕಷ್ಟು ಹೊಸ ಹೊಸ ಬದಲಾವಣೆಗಳಾಗುತ್ತಿವೆ. ನಿತ್ಯ ಒಂದಿಲ್ಲೊಂದು ಚರ್ಚೆಗಳು ನಡೆಯುತ್ತಿವೆ. ಒಂದಷ್ಟು ಕಲಾವಿದರು ಚಿತ್ರರಂಗದಲ್ಲಿ ತಾವು ಅನುಭವಿಸಿದ ಯಾತನೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ನಟಿ ತಾಪ್ಸೀ ಪನ್ನು ಸಹ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ.

ಹೊಸಬರು ಚಿತ್ರರಂಗದಲ್ಲಿ ಏಳ್ಗೆ ಕಾಣುವುದು ಅಷ್ಟು ಸುಲಭವಿಲ್ಲ ಎಂದಿದ್ದಾರೆ. ‘ಸಿನಿಮಾರಂಗದಲ್ಲಿ ಸ್ಪರ್ಧೆ ಹೆಚ್ಚು. ಗಾಡ್​ಫಾದರ್ ಇಲ್ಲದೆ, ಬದುಕುಳಿಯುವುದು ಕಷ್ಟಸಾಧ್ಯ. ನೆಪೋಟಿಸಿಂನಿಂದ ನಾನು ಐದಾರು ಸಿನಿಮಾಗಳನ್ನು ಕಳೆದುಕೊಂಡಿದ್ದೇನೆ. ಆದರೆ, ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರಿಗೆ ಇದ್ಯಾವುದು ಕಷ್ಟ ಅನಿಸುವುದೇ ಇಲ್ಲ. ಸಾಲು ಸಾಲು ಸಿನಿಮಾ ಅವಕಾಶಗಳು ಅವರ ಬಳಿ ಮೊದಲೇ ಬಂದಿರುತ್ತವೆ. ಬೇರೆಯವರ ಬಳಿ ಹೋಗಿ ಸಿನಿಮಾಕ್ಕಾಗಿ ಬೇಡುವ ಪ್ರಮೇಯವೇ ಸೃಷ್ಟಿಯಾಗುವುದಿಲ್ಲ’ ಎಂದಿದ್ದಾರೆ.

ಸದ್ಯ ಬಾಲಿವುಡ್​ನಲ್ಲಿ ನಾಯಕಿ ಪ್ರಧಾನ ಸಿನಿಮಾಗಳ ಮೂಲಕವೇ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ ತಾಪ್ಸೀ. ನಾಯಕರ ಹಿಂದೆ ಬೀಳದೆ, ತಮ್ಮದೇ ಶೈಲಿಯ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಅವರ ‘ಪಿಂಕ್’, ‘ಬದ್ಲಾ’, ‘ಥಪ್ಪಡ್’ ಈ ಸಿನಿಮಾಗಳೇ ಸಾಕ್ಷಿ.