Anasuya Bharadwaj : ಗಂಡು ಮತ್ತು ಹೆಣ್ಣು ನಡುವಿನ ಆಕರ್ಷಣೆ ಎಂಬುದು ಸಾಮಾನ್ಯವಾಗಿದೆ. ಅದು ಯಾವುದೇ ಕ್ಷೇತ್ರದಲ್ಲಿಯೂ ಇರುತ್ತದೆ. ಅದರಲ್ಲೂ ಸಿನಿಮಾ ಒಂದು ವರ್ಣರಂಜಿತ ಜಗತ್ತು. ಆದ್ದರಿಂದ ಇಲ್ಲಿ ನಟಿಯರಿಗೆ ವಿಶೇಷ ಗಮನವಿದೆ. ಅವಕಾಶಗಳ ಹೆಸರಿನಲ್ಲಿ ಹುಡುಗಿಯರನ್ನು ಮೋಹಿಸಲು ಸಾಕಷ್ಟು ಅವಕಾಶವಿದೆ. ಬದಲಾಗಿ, ನಾವು ಕಲೆಯನ್ನು ನಂಬುವ ಮತ್ತು ಅವರಿಗೆ ಅವಕಾಶಗಳನ್ನು ನೀಡುವ ದಿನಗಳು ಬರಬೇಕಿದೆ. ಆ ಹುಡುಗಿ ನಮ್ಮತ್ರ ಬರದಿದ್ದರೆ ಏನು? ನಟನೆ ಮಾಡಿದರೆ ಸಾಕು ಎಂದು ನಾಯಕ, ನಿರ್ದೇಶಕ ಮತ್ತು ನಿರ್ಮಾಪಕರು ಭಾವಿಸಬೇಕು. ಆಗ ಮಾತ್ರ ಅನೇಕ ಹುಡುಗಿಯರು ಚಿತ್ರರಂಗದಲ್ಲಿ ಶ್ರೇಷ್ಠರಾಗುತ್ತಾರೆ ಎಂದು ಖ್ಯಾತ ನಿರೂಪಕಿ ಮತ್ತು ನಟಿ ಅನಸೂಯಾ ಭಾರದ್ವಾಜ್ ಹೇಳಿದರು.
ಯಾವುದೇ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡುವ ಅನಸೂಯಾ, ಇತ್ತೀಚೆಗೆ ಚಿತ್ರರಂಗದಲ್ಲಿ ಹುಡುಗಿಯರ ಬಗ್ಗೆ ತಮಗಿರುವ ದೃಷ್ಟಿಕೋನ ಏನು ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದರು. ಅಲ್ಲದೆ, ಹುಡುಗಿಯರು ಹೇಗಿರಬೇಕು? ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಿದರು.
ಹಲವು ನಾಯಕರು ಮತ್ತು ನಿರ್ದೇಶಕರು ಅವಕಾಶಗಳ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಾನು ಕೂಡ ಅದೇ ಪರಿಣಾಮವನ್ನು ಎದುರಿಸಿದ್ದೇನೆ. ಒಬ್ಬ ಸ್ಟಾರ್ ಹೀರೋ ಕೇಳಿದಾಗ ನಾನು ಇಲ್ಲ ಅಂತ ಹೇಳಿದೆ. ಅದೇ ರೀತಿ ಒಬ್ಬ ದೊಡ್ಡ ನಿರ್ದೇಶಕ ಕೇಳಿದಾಗ, ನಾನು ನಯವಾಗಿಯೇ ನಿರಾಕರಿಸಿದೆ. ಅದರಿಂದಾಗಿ, ನಾನು ಸಿನಿಮಾ ಅವಕಾಶಗಳನ್ನು ಕಳೆದುಕೊಂಡೆ. ಹುಡುಗಿಯರು ಹಾಗೆ ಹೇಳುವುದರ ಜೊತೆಗೆ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಹೊಂದಿರಬೇಕು.
ಪ್ರಪೋಸಲ್‌ಗಳು ಬರುತ್ತಲೇ ಇರುತ್ತವೆ. ನಾನು 9ನೇ ತರಗತಿಯಲ್ಲಿದ್ದಾಗ ನನಗೆ ಒಬ್ಬ ಪ್ರಪೋಸ್ ಮಾಡಿದ ನಾನು ಇಲ್ಲ ಅಂತ ಹೇಳಿದೆ. ಅಲ್ಲದೆ, ಇಂಡಸ್ಟ್ರಿಗೆ ಬಂದ ನಂತರವೂ ನನಗೆ ಕೆಲ ಪ್ರಪೋಸಲ್‌ಗಳು ಬಂದವು. ಆಗಲೂ ನಾನು ಇಲ್ಲ ಅಂತ ಹೇಳಿದೆ. ಈಗಲೂ ನಾನು ಇಲ್ಲ ಅಂತ ಹೇಳುತ್ತೇನೆ. ಅವರು ಬಯಸಿದ್ದನ್ನು ಕೊಡುವುದು ನನಗೆ ಇಷ್ಟವಿಲ್ಲ. ಹಾಗೆ ಮಾಡಿದರೆ ಏನಾಗುತ್ತದೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಅದರ ಬದಲು ಕಲೆಯ ಆಧಾರದ ಮೇಲೆ ಪಾತ್ರಗಳನ್ನು ನೀಡುವುದು ಉತ್ತಮ. ಅವಳು ಬರದಿದ್ದರೆ ಏನು... ಆ ಪಾತ್ರ ಚೆನ್ನಾಗಿ ಬರುತ್ತದೆ ಎಂದು ನೀವು ಯೋಚಿಸಬೇಕು. ಆಗ ಮಾತ್ರ ಅನೇಕ ಹುಡುಗಿಯರು ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ ಎಂದು ಅನಸೂಯಾ ಹೇಳಿದರು.
ಅನೇಕ ಜನರು ಹಲವು ಭರವಸೆಗಳೊಂದಿಗೆ ಚಿತ್ರರಂಗಕ್ಕೆ ಬರುತ್ತಾರೆ. ಆದರೆ, ಇಲ್ಲಿನ ಪರಿಸ್ಥಿತಿ ವಿಭಿನ್ನವಾಗಿದೆ. ಅವರು ಅವಕಾಶಗಳನ್ನು ಪಡೆಯಲು ಸುಲಭ ಮಾರ್ಗಗಳನ್ನು ಹುಡುಕುತ್ತಾರೆ. ಆದರೆ, ಅದು ತಪ್ಪು. ಸರಿಯಾದದ್ದನ್ನು ಮಾಡಿ. ಹತ್ತು ಜನರು ತಪ್ಪು ಮಾಡುತ್ತಿದ್ದಾರೆ, ನಾನು ಕೂಡ ತಪ್ಪು ಮಾಡುತ್ತೇನೆ ಎಂದು ಹೇಳುವುದು ಸರಿಯಲ್ಲ. ನೀವು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು. ಸುಲಭ ಮಾರ್ಗವನ್ನು ತೆಗೆದುಕೊಳ್ಳುವ ಬದಲು, ನಿಮ್ಮ ಕಠಿಣ ಪರಿಶ್ರಮ ಮತ್ತು ಕಲೆಯನ್ನು ನಂಬಿ ಪ್ರಯತ್ನಿಸಿ. ಅಂತಹ ಜನರನ್ನು ಪ್ರೋತ್ಸಾಹಿಸುವ ದಿನಗಳು ಬರಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಅನಸೂಯಾ ಅವರ ಪೋಸ್ಟ್‌ಗಳು ಎಷ್ಟು ವೈರಲ್ ಆಗುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಆಗಾಗ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತುಂಬಾ ಹಾಟ್ ಫೋಟೋಗಳನ್ನು ಹರಿಬಿಡುವುದರಿಂದ ಕೆಲವರು ಅನಸೂಯಾ ಅವರ ಡ್ರೆಸ್ಸಿಂಗ್ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳನ್ನು ಸಹ ಮಾಡುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಸೂಯಾ, ನನ್ನನ್ನು ಇಷ್ಟಪಡುವವರಿಗೆ ನಾನು ಇನ್‌ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತೇನೆ. ನಾನು ಯಾವುದೇ ರೀತಿಯ ಫೋಟೋಗಳನ್ನು ಹಂಚಿಕೊಳ್ಳುತ್ತೇನೆ. ಅದು ನನ್ನ ಆಯ್ಕೆ. ನಾನು ಏನು ಧರಿಸಬೇಕು? ನಾನು ಬಿಕಿನಿ ಧರಿಸಬೇಕೇ ಅಥವಾ ಸಂಪೂರ್ಣ ಬಟ್ಟಯನ್ನು ಧರಿಸಬೇಕೆ? ಎಂಬುದು ನನ್ನ ಆಯ್ಕೆ. ಆದರೆ, ಕೆಲವರು ನೆಗೆಟಿವ್ ಕಾಮೆಂಟ್‌ಗಳ ಮೂಲಕ ನನಗೆ ತೊಂದರೆ ನೀಡುತ್ತಿದ್ದಾರೆ ಅಷ್ಟಕ್ಕೂ ನನ್ನ ಬಗ್ಗೆ ನಿಮ್ಮ ಅಸಮಾಧಾನವೇನು ಎಂದು ಪ್ರಶ್ನೆ ಮಾಡುವ ಮೂಲಕ ಅನಸೂಯಾ ನೆಟ್ಟಿಗರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್)