ಸಿನಿವಾಣಿ

ದೇಹದ ಅಂಗಗಳ ಬಗ್ಗೆ ಅಶ್ಲೀಲವಾಗಿ ಮಾತನಾಡುವುದು… ಸೌಂದರ್ಯದ ಗಣಿ ಹನಿ ರೋಸ್​ ಶಾಕಿಂಗ್​ ಹೇಳಿಕೆ

ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್​ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್​ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅವರ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ಕೆಲ ತಮಿಳು ಮತ್ತು ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹನಿ ರೋಸ್​ ಬಿಜಿಯಾಗಿದ್ದಾರೆ.

ವಿನಯನ್ ನಿರ್ದೇಶನದ 'ಬಾಯ್ ಫ್ರೆಂಡ್' ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಹನಿ ರೋಸ್, ಚಿತ್ರರಂಗದಲ್ಲಿ 20 ಪೂರೈಸಿದ್ದಾರೆ. ಪ್ರಸ್ತುತ ಹನಿ ರೋಸ್ ರಾಚೆಲ್‌ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಸಿನಿಮಾ ಹೊರತಾಗಿ ಉದ್ಘಾಟನಾ ಸಮಾರಂಭಗಳಿಗೆ ಹನಿರೋಸ್​ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹನಿ ಭಾಗವಹಿಸಿದ ಎಲ್ಲ ಉದ್ಘಾಟನಾ ಸಮಾರಂಭಗಳಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ.

ಹನಿಯ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುವುದರ ಜತೆಗೆ, ಅವರ ವಿರುದ್ಧ ಸೈಬರ್ ದಾಳಿಗಳು ಹೆಚ್ಚಾಗುತ್ತಿವೆ. ಹಲವು ಬಾರಿ ಸೈಬರ್​ ದಾಳಿಕೋರರ ವಿರುದ್ಧ ಹನಿರೋಸ್​ ಸಾರ್ವಜನಿಕವಾಗಿ ಹರಿಹಾಯ್ದಿದ್ದಾರೆ. ಇದೀಗ ಸ್ಫೋಟಕ ಹೇಳಿಕೆ ನೀಡಿರುವ ಹನಿ ರೋಸ್​ ಬಾಡಿ ಶೇಮಿಂಗ್ ಕೊಲೆಯಂತೆ ಎಂದಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಇದು ತುಂಬಾ ಕೆಟ್ಟ ಕೆಲಸ ಮತ್ತು ಯಾರೂ ಇದನ್ನು ಮಾಡಬಾರದು ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಾಡಿ ಶೇಮಿಂಗ್​ ಮಾಡುವ ಕಾಮೆಂಟ್‌ಗಳನ್ನು ನಾವು ನೋಡಿದ್ದೇವೆ. ಆ ಕಿಡಿಗೇಡಿಗಳ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರು ಅವರ ಕೆಲಸವನ್ನು ಮಾಡಲಿ, ನಾನು ನನ್ನ ಕೆಲಸವನ್ನು ಮಾಡುತ್ತೇನೆ. ಬಾಡಿ ಶೇಮಿಂಗ್, ಅದು ನನ್ನ ವಿರುದ್ಧವಾಗಲಿ ಅಥವಾ ಬೇರೆಯವರ ವಿರುದ್ಧವಾಗಲಿ ತುಂಬಾ ಕೆಟ್ಟದು. ಕೊಲೆಯಷ್ಟೇ ಕೆಟ್ಟದು. ಸಾಧ್ಯವಾದರೆ ಅದನ್ನು ತಪ್ಪಿಸಿ ಎಂದು ಹನಿರೋಸ್​ ಹೇಳಿದ್ದಾರೆ.

ಇದೇ ವೇಳೆ ಹನಿ ರೋಸ್ ಅಭಿನಯದ ಹೊಸ ಚಿತ್ರ 'ರೇಚೆಲ್' ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರವನ್ನು ಚಾಕುವಿನ ಅಂಚಿನ ಮಹಿಳೆಯ ಕಥೆ ಎಂದು ವಿವರಿಸಲಾಗಿದೆ. ಈ ಚಿತ್ರವನ್ನು ಆನಂದಿನಿ ಬಾಲಾ ನಿರ್ದೇಶಿಸಿದ್ದಾರೆ. ಟೀಸರ್, ಹಿಂಸೆ ಮತ್ತು ರಕ್ತಪಾತದಿಂದ ಕೂಡಿದ ವಿಭಿನ್ನ ಅನುಭವವನ್ನು ನೀಡುತ್ತದೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)