ಸಿನಿವಾಣಿ

ಅವಳು ನಾಯಿಯಾಗಿ ಹುಟ್ಟಿದರೂ ಪರವಾಗಿಲ್ಲ! ಸಮಂತಾ ಬಗ್ಗೆ ಶೋಭಿತಾ ಪೋಸ್ಟ್​ ವೈರಲ್​

ಹೈದರಾಬಾದ್​: ನಟಿ ಸಮಂತಾ ಮಾಜಿ ಪತಿ ನಟ ನಾಗಚೈತನ್ಯ ಜತೆ ನಿಶ್ಚಿತಾರ್ಥ ಮಾಡಿಕೊಂಡಾಗಿನಿಂದ ನಟಿ ಶೋಭಿತಾ ಧೂಳಿಪಲ ಭಾರಿ ಸುದ್ದಿಯಲ್ಲಿದ್ದಾರೆ. ಆಕೆ ಸ್ಟಾರ್​ ಹೀರೋಯಿನ್​ ಅಲ್ಲದಿದ್ದರೂ ನಾಗಚೈತನ್ಯ ಕಾರಣಕ್ಕೆ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಶೋಭಿತಾ ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಕೆಲವೇ ಸಿನಿಮಾಗಳಲ್ಲಿ ಮತ್ತು ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಆದರೆ, ಸಿನಿಮಾಗಳಲ್ಲಿ ಸಿಗದ ಕ್ರೇಜ್ ನಿಶ್ಚಿತಾರ್ಥದ ನಂತರ ಹೆಚ್ಚಾಗಿದೆ. ಶೋಭಿತಾರನ್ನು ಗೂಗಲ್​ನಲ್ಲಿ ಹುಡುಕಾಡುವವರ ಸಂಖ್ಯೆಯು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಟ್ರೆಂಡ್​​ ಆಗಿದ್ದಾರೆ. ನಾಗಚೈತನ್ಯ ಅವರು ತೆಲುಗು ಸಿನಿಮಾ ರಂಗದ ಸ್ಟಾರ್​ ನಟರಲ್ಲಿ ಒಬ್ಬರು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಸ್ಟಾರ್​ ನಟಿ ಸಮಂತಾರನ್ನು ಪ್ರೀತಿಸಿ ಮದುವೆಯಾದರು. ಆದರೆ, ಭಿನ್ನಾಭಿಪ್ರಾಯಗಳ ಕಾರಣದಿಂದ ಇಬ್ಬರು ಬೇರೆಯಾದರು. ಇದೀಗ ಶೋಭಿತಾ ಅವರ ನಾಗಚೈತನ್ಯ ಬಾಳಿಗೆ ಎರಡನೇ ಪತ್ನಿಯಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈ ಕಾರಣದಿಂದ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನಾಗಚೈತನ್ಯ ಜತೆ ಶೋಭಿತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ, ಈ ಬಗ್ಗೆ ನಾಗಚೈತನ್ಯ ಆಗಲಿ ಶೋಭಿತಾ ಆಗಲಿ ಬಹಿರಂಪಡಿಸಿರಲಿಲ್ಲ. ಆಗಸ್ಟ್​ 8ರಂದು ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಡೇಟಿಂಗ್​ ವದಂತಿಗೆ ಇಬ್ಬರು ಅಧಿಕೃತ ಮುದ್ರೆಯನ್ನು ಒತ್ತಿದರು. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥದ ಸುದ್ದಿ ಹೊರಬೀಳುತ್ತಿದ್ದಂತೆ ನಾಗಚೈತನ್ಯ ಮಾಜಿ ಪತ್ನಿ ಸಮಂತಾ ಕೂಡ ಸುದ್ದಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ.

ಈ ಎಲ್ಲ ಬೆಳವಣಿಗೆ ನಡುವೆ ಇದೀಗ ಶೋಭಿತಾ ಅವರ ಹಳೆಯ ಇನ್​ಸ್ಟಾಗ್ರಾಂ ಪೋಸ್ಟ್‌ಗಳು ಒಂದೊಂದಾಗಿ ವೈರಲ್ ಆಗುತ್ತಿವೆ. ತನ್ನ ಸಹೋದರಿ ಸಮಂತಾ ಬಗ್ಗೆ ಈ ಹಿಂದೆ ಅವರು ಮಾಡಿದ ಕಾಮೆಂಟ್‌ಗಳು ಈಗ ವೈರಲ್ ಆಗುತ್ತಿವೆ. ಅದರಲ್ಲಿ ಒಂದು ಪೋಸ್ಟ್​ ಸಮಂತಾ ಹೆಸರಿನ ಕಾರಣಕ್ಕೆ ಹೆಚ್ಚಿನ ಗಮನ ಸೆಳೆದಿದೆ. "ನನ್ನ ಏಕೈಕ ಆಸೆ ನನ್ನ ತಂದೆ ಮತ್ತು ತಾಯಿಗೆ ಪ್ರತಿ ಜೀವನದಲ್ಲಿ ಮಗಳಾಗಿ ಹುಟ್ಟಬೇಕು. ಅದನ್ನು ಬಿಟ್ಟು ಬೇರೇನೂ ನನಗೆ ಮುಖ್ಯವಲ್ಲ. ನನ್ನ ತಂಗಿ ನಾಯಿಯಾಗಿ ಹುಟ್ಟಿದರೂ ಪರವಾಗಿಲ್ಲ ಅಥವಾ ಏನಾದರೂ ಆಗಲಿ, ನಾನು ಮಾತ್ರ ನನ್ನ ತಂದೆ-ತಾಯಿಗೆ ಪ್ರತಿ ಜನ್ಮದಲ್ಲಿಯೂ ಮಗಳಾಗಿರಬೇಕು ಎಂದು ಶೋಭಿತಾ ಈ ಹಿಂದೆ ಬರೆದುಕೊಂಡಿದ್ದರು. ಇದೀಗ ಮತ್ತೆ ಆ ಪೋಸ್ಟ್​ ವೈರಲ್​ ಆಗುತ್ತಿದೆ.

ಶೋಭಿತಾ ಪೋಸ್ಟ್​ ನೋಡಿದ ಕೆಲವರು ಗೊಂದಲಕ್ಕೆ ಒಳಗಾಗಿದ್ದಾರೆ. ಸಮಂತಾಗೆ ನಾಯಿಯಂತೆ ಹುಟ್ಟಲು ಹೇಳಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಆದರೆ, ಶೋಭಿತಾ ಹೇಳಿರುವುದು ನಟಿ ಸಮಂತಾ ಬಗ್ಗೆ ಅಲ್ಲ, ಅವರ ಸಹೋದರಿ ಸಮಂತಾ ಬಗ್ಗೆ. ಶೋಭಿತಾಗೆ ಸಮಂತಾ ಹೆಸರಿನ ಸಹೋದರಿ ಇದ್ದಾರೆ. ಆಕೆಗೆ ಈಗಾಗಲೇ ಮದುವೆಯಾಗಿದೆ. ಅಂದಹಾಗೆ ಶೋಭಿತಾ ಧೂಳಿಪಾಲ ಅವರು 1992, ಮೇ 31ರಂದು ಆಂಧ್ರಪ್ರದೇಶದ ತೆನಾಲಿಯಲ್ಲಿ ಜನಿಸಿದರು. ಆಕೆಯದ್ದು ತೆಲುಗು ಕುಟುಂಬ. ತಾಯಿ ಶಾಂತಾ ಕಾಮಾಕ್ಷಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ತಂದೆ ವೇಣುಗೋಪಾಲ್ ರಾವ್ ಮರ್ಚೆಂಟ್ ನೇವಿಯಲ್ಲಿ ಇಂಜಿನಿಯರ್ ಆಗಿದ್ದರು. ಸಮಂತಾ ಧೂಳಿಪಾಲ ಎಂಬುದು ಅವರ ತಂಗಿಯ ಹೆಸರಾಗಿದೆ.

2021ರಲ್ಲಿ ವಿಚ್ಛೇದನ ಸುದೀರ್ಘ ಡೇಟಿಂಗ್​ ಬಳಿಕ 2017ರಲ್ಲಿ ಸಮಂತಾ ಮತ್ತು ನಾಗಚೈತನ್ಯ ವಿವಾಹವಾದರು. ಸಮಂತಾ ಕೂಡ ಪತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಅಭಿಮಾನಿಗಳಿಂದ ಆದರ್ಶ ದಂಪತಿಗಳೆಂದು ಪರಿಗಣಿಸಲ್ಪಟ್ಟ ಸಮಂತಾ ಮತ್ತು ನಾಗಚೈತನ್ಯ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ಡಿವೋರ್ಸ್​ ಘೋಷಣೆ ಮಾಡಿದರು. 2021ರಲ್ಲಿ ವಿಚ್ಛೇದನ ಪಡೆದ ನಂತರ, ಸಮಂತಾ ಚಲನಚಿತ್ರಗಳಲ್ಲಿ ಸಕ್ರಿಯರಾದರು.

ಸಮಂತಾರಿಂದ ದೂರವಾದ ಬಳಿಕ ನಾಗಚೈತನ್ಯ ನಟಿ ಶೋಭಿತಾ ಅವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರೂ ಜೊತೆಯಾಗಿ ಹಲವು ಬಾರಿ ವಿದೇಶ ಪ್ರವಾಸ ಕೂಡ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಚೈತನ್ಯ ಆಗಲಿ ಶೋಭಿತಾ ಆಗಲಿ ತಮ್ಮ ಪ್ರೀತಿಯ ಬಗ್ಗೆ ಒಮ್ಮೆಯೂ ಬಾಯ್ಬಿಟ್ಟಿರಲಿಲ್ಲ. ಆದರೆ, ಇದೀಗ ತಮ್ಮ ಸಂಬಂಧಕ್ಕೆ ನಿಶ್ಚಿತಾರ್ಥದ ಮೂಲಕ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ. (ಏಜೆನ್ಸೀಸ್​)