ಮುಂಬೈ: ಸೂರ್ಯವಂಶ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಇಶಾ ಕೊಪ್ಪಿಕರ್, ಅನೇಕ ವರ್ಷಗಳ ಬಳಿಕ ಶಿವರಾಜ್ ಕುಮಾರ್ ನಟನೆಯ ಕವಚ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರು.
ಕನ್ನಡದಲ್ಲಿ ಅಭಿನಯಿಸಿದ್ದು ಬೆರಳಣಿಕೆ ಚಿತ್ರವಾದರು ಸಹ ಇಶಾ ಪರಿಚಯ ಕನ್ನಡಿಗರಿಗಿದೆ. ಅದಕ್ಕೆ ಕಾರಣ ಸೂರ್ಯವಂಶ ಹಾಗೂ ರವಿಚಂದ್ರನ್ ಅಭಿನಯದ ಓ ನನ್ನ ನಲ್ಲೆ ಚಿತ್ರದಲ್ಲಿನ ಅವರ ಅಮೋಘ ಅಭಿನಯ.
ಅನೇಕ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಇಶಾ ಸದ್ಯ ತಮಿಳಿನ ಅಯಲಾನ್ ಮತ್ತು ಹಿಂದಿ ಅಸ್ಸಿ ನಬೆ ಪೂರೆ ಸೌ ಚಿತ್ರದಲ್ಲಿ ನಟಿಸಿದ್ದು ಬಿಡುಗಡೆ ಆಗಬೇಕಿದೆ. ಸದ್ಯ ಇಶಾ ಅವರು ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ.
ಇದು ಮಾಮೂಲಿ ಫೋಟೋಶೂಟ್ ಅಲ್ಲ. 45 ವರ್ಷದ ಇಶಾ ಅವರು ಈ ವಯಸ್ಸಿನಲ್ಲೂ ಮಾದಕ ಫೋಟೋಶೂಟ್ ಮಾಡಿಸಿದ್ದಾರೆ. ಬಿಕಿನಿ ಉಡುಗೆಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದು, ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇಶಾ ಅವರ ಮಾದಕ ಫೋಟೋಗಳು ವೈರಲ್ ಆಗಿವೆ. (ಏಜೆನ್ಸೀಸ್)