ತಮನ್ನಾ ವೃತ್ತಿಜೀವನದಲ್ಲಿ ಇದುವರೆಗೂ ಅತೀ ಹೆಚ್ಚು ಸಂಭಾವನೆ ಅಂತ ಪಡೆದಿದ್ದು 90 ಲಕ್ಷವಂತೆ. ಅಷ್ಟೊಂದು ಹಣ ಪಡೆಯುವ ಸಂದರ್ಭದಲ್ಲಿ ಯಶಸ್ಸು ಮತ್ತು ಜನಪ್ರಿಯತೆ ... ಈ ಎರಡೂ ವಿಷಯಗಳಲ್ಲೂ ಅವರು ಟಾಪ್ನಲ್ಲಿದ್ದರು. ಈಗ ಅವೆರಡೂ ಸಹಜವಾಗಿಯೇ ಕಡಿಮೆಯಾಗಿವೆ. ಆದರೂ ‘ಅಂಧಾಧುನ್’ನ ತೆಲುಗು ರೀಮೇಕ್ನಲ್ಲಿ ನಟಿಸುವುದಕ್ಕೆ ಅವರು ಒಂದೂವರೆ ಕೋಟಿ ಸಂಭಾವನೆ ಪಡೆದಿರುವುದು ವಿಶೇಷ.
ಈ ಚಿತ್ರದಲ್ಲಿ ತಮನ್ನಾ ಅವರದ್ದು ನೆಗೆಟಿವ್ ಶೇಡ್ ಇರುವ ಪಾತ್ರ. ಮೂಲ ಚಿತ್ರದಲ್ಲಿ ತಬು ಮಾಡಿದ ಪಾತ್ರವನ್ನು ಯಾರಿಂದ ಮಾಡಿಸಬೇಕು ಎಂಬ ಹುಡುಕಾಟ ನಡೆದಾಗ, ತಮನ್ನಾ ಹೆಸರು ಎಲ್ಲರಿಗೂ ಓಕೆ ಆಗಿದೆ. ಹೇಳಿಕೇಳಿ ನೆಗೆಟಿವ್ ಶೇಡ್ ಇರುವ ಪಾತ್ರವಾದ್ದರಿಂದ ಒಂದೂವರೆ ಕೋಟಿ ಕೇಳಿದರಂತೆ ತಮನ್ನಾ. ಚಿತ್ರತಂಡದವರಿಗೆ ಓಕೆ ಆದ ಕಾರಣ, ಡೀಲ್ ಓಕೆ ಆಗಿದೆ. ಅಲ್ಲಿಗೆ, ತಮನ್ನಾ ತೆಲುಗಿನಲ್ಲಿ ತಬು ಪಾತ್ರಕ್ಕೆ ಜೀವ ತುಂಬುವುದಕ್ಕೆ ಹೊರಟಿದ್ದಾರೆ. ಇದು ಸಾಧ್ಯವಾ? ಕಾದು ನೋಡಿ.