Dada Sourav Ganguly Biopic 
ಸಿನಿವಾಣಿ

'Dada -The Sourav Ganguly Story' ಫಸ್ಟ್​ ಲುಕ್​ ರಿಲೀಸ್; ಇದಕ್ಕಿಂತ AI ಉತ್ತಮ ಕೆಲಸ ಮಾಡ್ತಿತ್ತು ಎಂದು ನೆಟ್ಟಿಗರಿಂದ ಟೀಕೆ

ಪ್ರಮುಖ ಮುಖ್ಯಾಂಶಗಳು

  • ಸೌರವ್ ಗಂಗೂಲಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಯ್ತು ಬಯೋಪಿಕ್ ಪೋಸ್ಟರ್
  • ದಾದಾ ಸೌರವ್​ ಗಂಗೂಲಿ ಪಾತ್ರ ನಿರ್ವಹಿಸುತ್ತಿರುವ ಬಾಲಿವುಡ್​ ನಟ ರಾಜ್​​ಕುಮಾರ್​ ರಾವ್
  • 2002ರ ಲಾರ್ಡ್ಸ್ ಮೈದಾನದ ಐತಿಹಾಸಿಕ ಜರ್ಸಿ ಬಿಚ್ಚಿ ಹಾರಿಸುವ ಕ್ಷಣದ ಪೋಸ್ಟರ್​ ರಿಲೀಸ್
Dada Sourav Ganguly Biopic: ಭಾರತೀಯ ಕ್ರಿಕೆಟ್​ ಆಟಗಾರ ಸೌರವ್​ ಗಂಗೂಲಿ ಅವರ ಜೀವನಾಧಾರಿತ ಸಿನಿಮಾ ದಾದಾ ದಿ ಸೌರವ್ ಗಂಗೂಲಿ ಸ್ಟೋರಿ' ಚಿತ್ರದ ಫಸ್ಟ್​ಲುಕ್​ ರಿಲೀಸ್​ ಆಗಿದೆ. ನಟ ರಾಜ್​ ಕುಮಾರ್​ ರಾವ್​ ಸೌರವ್​ ಪಾತ್ರ ನಿರ್ವಹಿಸುತ್ತಿದ್ದಾರೆ.

ರಾಜ್​ಕುಮಾರ್​ ರಾವ್​​ ನಟನೆ

ಸೌರವ್​ ಗಂಗೂಲಿಯವರ 54ನೇ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಫಸ್ಟ್​ ಪೋಸ್ಟರ್​ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಸೌರವ್​ ಅವರು ದಾದಾ ಅಂದರೆ ಸೌರವ್​ ಗಂಗೂಲಿ ಪಾತ್ರದಲ್ಲಿ ಮಿಂಚಲಿದ್ದಾರೆ. ಒಂದು ಕಡೆ ಈ ಲುಕ್​ ಕಂಡು ಸೌರವ್​​​​​​​ ಭಾವುಕರಾಗಿದ್ದಾರೆ. ಮತ್ತೊಂದು ಕಡೆ ಈ ಪೋಸ್ಟರ್​​ ಟೀಕೆಗೆ ಗುರಿಯಾಗಿದೆ
ಏನಿದು ಜರ್ಸಿ ಘಟನೆ?
2002 ರಲ್ಲಿ ಇಂಗ್ಲೆಂಡ್ ವಿರುದ್ಧದ ನ್ಯಾಟ್‌ವೆಸ್ಟ್ ಟ್ರೋಫಿ ಗೆಲುವಿನ ನಂತರ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ನಿಂತು ಸೌರವ್ ಗಂಗೂಲಿ ತಮ್ಮ ಜರ್ಸಿ ಬಿಚ್ಚಿ ಗಾಳಿಯಲ್ಲಿ ಹಾರಿಸಿ ಸಂಭ್ರಮಿಸಿದ ಐತಿಹಾಸಿಕ ಕ್ಷಣವನ್ನು ಮರುಸೃಷ್ಟಿಸಿದ್ದಾರೆ. ಇದನ್ನು ಕಂಡ ನೆಟ್ಟಿಗರು ಕಿಡಿಕಾರಿದ್ದಾರೆ. ಇದಕ್ಕಿಂತ ಎಐ ಟೂಲ್ ಆದ ಚಾಟ್‌ಜಿಪಿಟಿಯೇ ಉತ್ತಮವಾಗಿ ಪೋಸ್ಟರ್ ವಿನ್ಯಾಸ ಮಾಡುತ್ತಿತ್ತು ಎಂದು ಟೀಕೆ ಮಾಡಿದ್ದಾರೆ.
ವಿಎಫ್​​ಎಕ್ಸ್ ದರಿದ್ರವಾಗಿದೆ!
"ಈ ಪೋಸ್ಟರ್ ನೋಡಿ,ರಾಜ್‌ಕುಮಾರ್ ರಾವ್ ನೋಡಿದರೆ ಲಾರ್ಡ್ಸ್ ಮೈದಾನದಲ್ಲಿ ಮ್ಯಾಚ್ ಗೆದ್ದ ತರ ಕಾಣ್ತಿಲ್ಲ, ಬದಲಿಗೆ ಜಿಯೋಮಾರ್ಟ್‌ನಲ್ಲಿ 10% ಡಿಸ್ಕೌಂಟ್ ಸಿಕ್ಕಿದ್ದಕ್ಕೆ ಖುಷಿ ಪಡ್ತಿರೋ ತರ ಕಾಣ್ತಿದ್ದಾರೆ! ನಮ್ಮ ದಾದಾ ಅಲ್ಲಿ ಸಿಂಹದ ತರ ಜರ್ಸಿ ಹಾರಿಸ್ತಾ ಇದ್ದರೆ, ಇವನು ನೋಡಿದರೆ ಬಸ್ ಹಿಡಿಯೋಕೆ ಕೈ ತೋರಿಸ್ತಿರೋ ತರ ಇದ್ದಾನೆ. ಎಂತಾ ದರಿದ್ರ ವಿಎಫ್‌ಎಕ್ಸ್ ಮತ್ತು ಲುಕ್​ ಇದು. ನೋಡೋಕೆ ಅಸಹ್ಯವಾಗಿದೆ ಎಂದು ಹೇಳಿದರು.

ಸೌರವ್​ ಗಂಗೂಲಿ ಪಾತ್ರಕ್ಕೆ ಸೂಕ್ತವಲ್ಲ

ರಾಜ್‌ಕುಮಾರ್ ಖಂಡಿತವಾಗಿಯೂ ಒಬ್ಬ ಅತ್ಯುತ್ತಮ ನಟ, ಆದರೆ ಸೌರವ್​ ಗಂಗೂಲಿ ಅವರ ಜೀವನ ಚರಿತ್ರೆ ಪಾತ್ರಕ್ಕೆ ಅವರು ಸೂಕ್ತವಾಗಿ ಹೊಂದಿಕೊಳ್ಳುತ್ತಿಲ್ಲ ಎಂದು ಕೆಲವರು ಕಾಸ್ಟಿಂಗ್ ನಿರ್ದೇಶಕರ ಆಯ್ಕೆಯನ್ನೇ ಪ್ರಶ್ನಿಸಿದ್ದಾರೆ.

ನೆಟ್ಟಿಗರಿಂದ ಟೀಕೆ

ಒಂದೊಮ್ಮೆ ರಾಜ್‌ಕುಮಾರ್ ರಾವ್ ಅವರು ಗಂಗೂಲಿ ಅವರ ಆ ಡೌನ್-ದಿ-ಗ್ರೌಂಡ್ ಸಿಕ್ಸ್ ಮತ್ತು ಗಡ್-ಲೆವೆಲ್ ಕವರ್ ಡ್ರೈವ್ ಶಾಟ್‌ಗಳನ್ನು ಪರ್ಫೆಕ್ಟ್ ಆಗಿ ನಟಿಸಿದರೆ ಸಿನಿಮಾ ಆಟೋಮ್ಯಾಟಿಕ್ ಆಗಿ ಬ್ಲಾಕ್‌ಬಸ್ಟರ್ ಆಗುತ್ತದೆ. ಆಫ್-ಸೈಡ್‌ನ ದೇವರ ಕಥೆಯನ್ನು ನಮ್ಮ ಕಾಲದ ಅತ್ಯುತ್ತಮ ನಟ ನಟಿಸುತ್ತಿರುವುದನ್ನು ನೋಡಲು ಕಾಯಲು ಸಾಧ್ಯವಿಲ್ಲ ಎಂದಿದ್ದಾರೆ.
ಸೌರವ್ ಗಂಗೂಲಿ ಅಂದು ಖುಷಿಯಲ್ಲಿ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್‌ಕುಮಾರ್ ಆಘಾತಕ್ಕೊಳಗಾಗಿರುವಂತೆ ಕಂಡಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ
ದಾದಾ ದಿ ಸೌರವ್ ಗಂಗೂಲಿ ಸ್ಟೋರಿ' ಸಿನಿಮಾವನ್ನು ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನ ಮಾಡುತ್ತಿದ್ದು, 2027ರ ಮೇ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ತಂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ, (ಏಜೆನ್ಸೀಸ್​).