ಬೆಂಗಳೂರು: ಏಪ್ರಿಲ್ನಲ್ಲಿ ‘ಕೃಷ್ಣ ಟಾಕೀಸ್’ ಮತ್ತು ‘ರಿವೈಂಡ್’ ಚಿತ್ರಗಳು ಬಿಡುಗಡೆಯಾಗಿದ್ದೇ ಕೊನೆ. ಆ ನಂತರ ಲಾಕ್ಡೌನ್ನಿಂದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಈಗ ಮೂರು ತಿಂಗಳ ನಂತರ ಅಮೇಜಾನ್ ಪ್ರೖೆಮ್ಲ್ಲಿ ಬುಧವಾರ ‘ಇಕ್ಕಟ್’ ಬಿಡುಗಡೆಯಾಗುತ್ತಿದೆ. ಕಳೆದ ವರ್ಷ ಲಾಕ್ಡೌನ್ ನಂತರ ಚಿತ್ರೀಕರಣಗೊಂಡ ಚಿತ್ರ ‘ಇಕ್ಕಟ್’. ಈಗ ಎರಡನೆಯ ಲಾಕ್ಡೌನ್ ಮುಗಿದ ನಂತರ ಬಿಡುಗಡೆಯಾಗುತ್ತಿದೆ.
ಡೈವೋರ್ಸ್ ಹಂತದವರೆಗೂ ಹೋಗಿದ್ದ ದಾಂಪತ್ಯ, ಲಾಕ್ಡೌನ್ನಿಂದ ಹೇಗೆ ಸರಿಹೋಗುತ್ತದೆ ಎಂಬುದು ಚಿತ್ರದ ಕಥೆ. ಒಂದು ಜೋಡಿಯ ಕಥೆಯನ್ನು ಹಾಸ್ಯದ ರೂಪದಲ್ಲಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಾಗಭೂಷಣ್, ಭೂಮಿ ಶೆಟ್ಟಿ ನಟಿಸಿದ್ದಾರೆ. ಮಿಕ್ಕಂತೆ ಸುಂದರ್, ಆನಂದ್ ನೀನಾಸಂ ಮುಂತಾದವರು ಈ ಚಿತ್ರದಲ್ಲಿದ್ದಾರೆ. ಇಶಮ್ ಮತ್ತು ಹಸೀನ್ ಖಾನ್ ಚಿತ್ರ ನಿರ್ದೇಶಿಸಿದ್ದಾರೆ.