Deepika Singh ಚಿತ್ರ Instagram
- ದೂರದರ್ಶನ ಉದ್ಯಮದಲ್ಲಿ ಕೆಲಸದ ಅವಧಿಯ ಕುರಿತಾದ ಚರ್ಚೆಗಳು ಸದಾಕಾಲ ನಡೆಯುತ್ತಲೇ ಇರುತ್ತವೆ
- ಮನರಂಜನಾ ಕ್ಷೇತ್ರದಲ್ಲಿ 'ಕೆಲಸ-ಜೀವನದ ಸಮತೋಲನ' ಎಂಬ ವಿಷಯವು ಮುನ್ನೆಲೆಗೆ ಬಂದಿದೆ
- ಕಿರುತೆರೆ ನಟಿ ದೀಪಿಕಾ ಸಿಂಗ್ ನೀಡಿದ ಹೇಳಿಕೆಯೊಂದು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ
Deepika Singh: ದೂರದರ್ಶನ ಉದ್ಯಮದಲ್ಲಿ ಕೆಲಸದ ಅವಧಿಯ ಕುರಿತಾದ ಚರ್ಚೆಗಳು ಸದಾಕಾಲ ನಡೆಯುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಮನರಂಜನಾ ಕ್ಷೇತ್ರದಲ್ಲಿ 'ಕೆಲಸ-ಜೀವನದ ಸಮತೋಲನ' ಎಂಬ ವಿಷಯವು ಮುನ್ನೆಲೆಗೆ ಬಂದಿದ್ದು, 8 ಗಂಟೆಗಳ ಶಿಫ್ಟ್‌ಗಳ ಅವಶ್ಯಕತೆಯ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಕಿರುತೆರೆ ನಟಿ ದೀಪಿಕಾ ಸಿಂಗ್ ನೀಡಿದ ಹೇಳಿಕೆಯೊಂದು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
8-ಗಂಟೆಗಳ ಕೆಲಸದ ಚರ್ಚೆಯಲ್ಲಿ ದೀಪಿಕಾ!
ಸಂದರ್ಶನವೊಂದರಲ್ಲಿ ಮಾತನಾಡಿದ ದೀಪಿಕಾ, ನಾನು 24 ನೇ ವಯಸ್ಸಿನಲ್ಲಿ ಉದ್ಯಮಕ್ಕೆ ಕಾಲಿಟ್ಟಿದ್ದೇನೆ. ಉದ್ಯಮದಲ್ಲಿ ಹಲವು ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿದ್ದರೂ ಸಹ, ಕೆಲಸದ ವಿಷಯದಲ್ಲಿ ತಮಗೆ ಇಂದಿಗೂ ತೃಪ್ತಿ ಸಿಕ್ಕಿಲ್ಲ ಎಂದು ಭಾವಿಸುತ್ತೇನೆ. ಆದಾಗ್ಯೂ, 12 ಗಂಟೆಗಳ ಪಾಳಿಯೊಳಗೆ ತನ್ನ ಕೆಲಸದ ದೃಶ್ಯಗಳು ಪೂರ್ಣಗೊಳ್ಳದಿದ್ದರೆ, ಸ್ವಇಚ್ಛೆಯಿಂದ ಹೆಚ್ಚಿನ ಕೆಲಸವನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.
ತಮ್ಮ ವೇಳಾಪಟ್ಟಿಯನ್ನು 13-14 ಗಂಟೆಗಳವರೆಗೆ ವಿಸ್ತರಿಸುತ್ತೇನೆ. ಇದರಿಂದ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಲು ಸಹಾಯ ಮಾಡುತ್ತದೆ ಎಂಬ ಅಭಿಪ್ರಾಯ ಸೂಚಿಸಿದ್ದಾರೆ.
ನಟನೆಯ ಮೇಲಿರುವ ಉತ್ಸಾಹವು ಆಗ್ಗಾಗೆ ಸಮಯದ ಬಗ್ಗೆ ಗಮನವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆದಾಗ್ಯೂ, ಕೆಲಸದ ಸಮಯವನ್ನು ಕಟುನಿಟ್ಟಾಗಿ ಸೀಮಿತಗೊಳಿಸಿದರೆ, ಇದು ಪ್ರದರ್ಶನದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದರ ಜೊತೆಗೆ ನಿರ್ದೇಶಕರಿಗೆ ದೃಶ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸ್ವಾತಂತ್ರ್ಯ ಸಿಗದೇ ಇರಬಹುದು ಎಂದು ಆತಂಕ ಹೊರಹಾಕಿದ್ದಾರೆ.
ದೀಪಿಕಾ ಅವರ ವೃತ್ತಿಜೀವನದ ಪಯಣ
ದೀಪಿಕಾ ಸಿಂಗ್ 2011 ರಲ್ಲಿ ದಿಯಾ ಔರ್ ಬಾತಿ ಹಮ್ನಲ್ಲಿ ಸಂಧ್ಯಾ ಪಾತ್ರದ ಮೂಲಕ ದೂರದರ್ಶನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಪಾತ್ರವು ಅವರನ್ನು ಉದ್ಯಮದಲ್ಲಿ ಬಲವಾದ ಉಪಸ್ಥಿತಿಯನ್ನು ಸ್ಥಾಪಿಸಲು ಸಹಾಯ ಮಾಡಿತು. ಅನೇಕ ನಟರಂತೆ, ಅವರು ಆರಂಭಿಕ ದಿನಗಳಲ್ಲಿ ಖ್ಯಾತಿಯನ್ನು ಪಡೆಯಲು ಬಹಳಷ್ಟು ಕಷ್ಟವನ್ನು ಅನುಭವಿಸಿದರು. ಪ್ರಸ್ತುತ, ಅವರು ಮಂಗಲ್ ಲಕ್ಷ್ಮಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಅಲ್ಲಿ ಅವರ ಅಭಿನಯವು ವೀಕ್ಷಕರಿಂದ ಮೆಚ್ಚುಗೆಯನ್ನು ಪಡೆಯುತ್ತಿದೆ (ಏಜೆನ್ಸೀಸ್).