ಸಿನಿವಾಣಿ

ಬೆತ್ತಲೆಯಾಗಿ ನಟಿಸುವುದನ್ನು ನಿಲ್ಲಿಸುವುದಿಲ್ಲ ನನಗೆ ನಾಚಿಕೆಯೂ ಇಲ್ಲ ಎಂದು ಖ್ಯಾತ ನಟಿ!

ಲಾಸ್​ ಏಂಜಲೀಸ್​: ಹಾಲಿವುಡ್​ನಲ್ಲಿ 2009ರಲ್ಲಿ ಬಿಡುಗಡೆಯಾದ ಝಾಂಬಿ ಆಫ್​ ಮಾಸ್ ಡಿಸ್ಟ್ರಕ್ಷನ್​ ಹೆಸರಿನ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಲು ಶುರು ಮಾಡಿದ ಬ್ಯೂಟಿ ಸಿಡ್ನಿ ಸ್ವೀನಿ ಇದೀಗ ಹಲವು ಚಿತ್ರಗಳಲ್ಲಿ ತಮ್ಮ ಗ್ಲಾಮರಸ್​ ಪಾತ್ರಗಳಿಂದಲೇ ಸಖತ್​ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಸಿಡ್ನಿ ಸ್ವೀನಿ ನೀಡಿದ ಹೇಳಿಕೆಯಂತೂ ಎಲ್ಲರ ಹುಬ್ಬೇರಿಸಿದೆ.

ಕಳೆದ ಕೆಲವು ವರ್ಷಗಳಿಂದ ಹಾಲಿವುಡ್ ಸಿನಿಮಾ, ಟಿವಿ ಸೀರಿಸ್ ಹಾಗೂ ವೆಬ್ ಸೀರಿಸ್​ಗಳಲ್ಲಿ ನಟಿಸುತ್ತಿರುವ ಸಿಡ್ನಿ ಸ್ವೀನಿ 26ರ ಹರೆಯದಲ್ಲಿ ಹಾಲಿವುಡ್ ಅಭಿಮಾನಿಗಳ ಕನಸಿನ ಕನ್ಯೆ ಎನಿಸಿಕೊಂಡಿದ್ದಾರೆ. ಅದರಲ್ಲೂ ಬೆತ್ತಲೆಯಾಗಿ ನಟಿಸುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದಾರೆ. ಇತ್ತೀಚೆಗಷ್ಟೇ, ಬೆತ್ತಲೆ ನಟನೆಗೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ಪ್ರಶ್ನೆ ಎತ್ತಿದಾಗ, ಸಿಡ್ನಿ ಸ್ವೀನಿ ಕೊಟ್ಟ ಉತ್ತರವು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.

ಸಿಡ್ನಿ ಸ್ವೀನಿ ನಟಿಸಿದ ಎನಿ ಒನ್ ಬಟ್ ಯೂ, ಮೇಡಮ್ ವೆಬ್ ಹಾಗೂ ಇಮ್ಯಾಕ್ಯುಲೇಟ್ ಹಾಲಿವುಡ್ ಚಲನಚಿತ್ರಗಳೆಲ್ಲವೂ ಆಕೆಗೆ ಅಪಾರ ಅಭಿಮಾನಿಗಳನ್ನು ತಂದುಕೊಟ್ಟಿದೆ. ಸಿಡ್ನಿ ಸ್ವೀನಿ ಅಮೆರಿಕದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಹಾಲಿವುಡ್ ಅಭಿಮಾನಿಗಳಿಗೆ ಮೋಸ್ಟ್ ವಾಂಟೆಡ್ ನಾಯಕಿಯಾಗಿದ್ದಾರೆ. ಅದರಲ್ಲೂ ಸಿಡ್ನಿ ಸ್ವೀನಿ ಎಷ್ಟು ಕುಖ್ಯಾತಿಯನ್ನು ಪಡೆದಿದ್ದಾರೆ ಅಂದರೆ ಸಿನಿಮಾಗಳು ಅಥವಾ ಟಿವಿ ಸರಣಿಯಲ್ಲಿ ಸರಸ ಸಲ್ಲಾಪದ ದೃಶ್ಯಗಳು ಹಾಗೂ ಬೆತ್ತಲೆಯಾಗಿಯೂ ನಟಿಸುವುದರಲ್ಲಿ ತುಂಬಾ ಫೇಮಸ್​. ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಸಿಡ್ನಿ ಸ್ವೀನಿ ನೀಡಿರುವ ಉತ್ತರ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ನಾನು ಯಾವಾಗಲೂ ನನ್ನ ನಿರ್ದೇಶಕರನ್ನು ನಂಬುತ್ತೇನೆ. ಕಥೆಗೆ ಬೇಕಾದ ದೃಶ್ಯಗಳನ್ನಷ್ಟೇ ಅವರು ಹಾಕುತ್ತಾರೆ. ಹಾಲಿವುಡ್‌ನಲ್ಲಿ ಬೆತ್ತಲೆಯಾಗಿ ನಟಿಸಲು ನನಗೆ ನಾಚಿಕೆಯಾಗುವುದಿಲ್ಲ. ನಾನು ಬೆತ್ತಲೆಯಾಗಿ ನಟಿಸುವುದನ್ನು ಮುಂದುವರಿಸುತ್ತೇನೆ. ನಾನು ಅದನ್ನು ತಡೆಯಲು ಹೋಗುವುದಿಲ್ಲ ಎಂದು ಬೋಲ್ಡ್​ ಉತ್ತರ ನೀಡಿದ್ದಾರೆ.

ಸಿಡ್ನಿ ಸ್ವೀನಿಯ ಈ ಸಂದರ್ಶನ ನೋಡಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಹಾಲಿವುಡ್​ನ ಕೆಲವು ನಟಿಯರು ನಗ್ನ ದೃಶ್ಯಗಳಿಗೆ ಬಾಡಿ ಡಬಲ್ಸ್ ಬಳಸುತ್ತಿರುವುದು ಗಮನಾರ್ಹ. ಆದರೆ ಕೆಲವು ನಟಿಯರು ಕತೆಯ ಅಗತ್ಯಕ್ಕಾಗಿ ಬೆತ್ತಲಾಗುವುದು ತಪ್ಪೆಂದು ಪರಿಗಣಿಸದೆ ನಟನೆಯನ್ನು ಮುಂದುವರೆಸಿದ್ದಾರೆ. ಹಾಲಿವುಡ್ ಮಾತ್ರವಲ್ಲದೆ ಬಾಲಿವುಡ್, ಕಾಲಿವುಡ್​ನಲ್ಲೂ ಕೆಲ ನಟಿಯರು ಈ ರೀತಿ ಧೈರ್ಯವಾಗಿ ನಟಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. (ಏಜೆನ್ಸೀಸ್​)