- ವಿಜಯ್-ತ್ರಿಷಾ ಡೇಟಿಂಗ್ ವಿವಾದ ಬೆನ್ನಲ್ಲೇ ಗಾಯಕಿ ಸುಚಿತ್ರಾ ಕಿಡಿ
- ನನಗೆ ಆಕೆಯನ್ನು ಕಂಡರೆ ಸ್ವಲ್ಪವೂ ಇಷ್ಟವಿಲ್ಲ
- ನಟಿಯ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಸುಚಿತ್ರಾ ಹೊಸ ವಿವಾದ
ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿತು. ಇವರಿಬ್ಬರ ಡಿವೋರ್ಸ್ಗೆ ಮೂಲ ಕಾರಣವೇ ನಟಿ ತ್ರಿಷಾ ಎಂಬ ಆರೋಪಗಳು ಕೇಳಿಬಂದಿದ್ದು, ಅನೇಕರ ಟೀಕೆಗಳಿಗೆ ಕಾರಣವಾಯಿತು. ಇದಕ್ಕೆ ಪುಷ್ಠಿ ಎನ್ನುವಂತೆ ಕೆಲವು ತಿಂಗಳ ಹಿಂದೆ ಮದುವೆ ಸಮಾರಂಭದಲ್ಲಿ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಸಾಕಷ್ಟು ವದಂತಿಗಳನ್ನು ಹುಟ್ಟುಹಾಕಿತು. ಈಗ ಈ ವಿಷಯವನ್ನೇ ಮುಂದಿಟ್ಟು ಮಾತನಾಡಿರುವ ಗಾಯಕಿಯೊಬ್ಬರು ತ್ರಿಷಾ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ.
ದಾಂಪತ್ಯದಲ್ಲಿ ಬಿರುಕು ಮೂಡಿರುವ ಸಂದರ್ಭದಲ್ಲೇ ತ್ರಿಷಾ ಜೊತೆಗೆ ವಿಜಯ್ ಮದುವೆಗೆ ಕಾರಿನಲ್ಲಿ ಬಂದ ದೃಶ್ಯ ಸದ್ಯ ಊಹಾಪೋಹಗಳೇ ಸತ್ಯ ಎಂದು ಒತ್ತಿ ಹೇಳಿತು. ಪ್ರಸ್ತುತ, ತಮಿಳುನಾಡು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ವಿಜಯ್, ಸರ್ಕಾರ ರಚಿಸಲು ಬಹುಮತ ತೋರಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗಲೇ, ಅತ್ತ ಗಾಯಕಿ ಸುಚಿತ್ರಾ ನಟನ ಬಹುಕಾಲದ ಗೆಳತಿ ತ್ರಿಷಾ ಕಂಡರೆ ನನಗೆ ಸ್ವಲ್ಪವೂ ಇಷ್ಟವಿಲ್ಲ ಎಂದಿರುವುದು ಸದ್ಯ ಹಲವರ ಹುಬ್ಬೇರಿಸಿದೆ.
ಇತ್ತೀಚಿನ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ಸುಚಿತ್ರಾ, ನನಗೆ ವಿಜಯ್ ಅವರು ಇಷ್ಟ. ಆದರೆ, ನಟಿ ತ್ರಿಷಾ ಕೃಷ್ಣನ್ ಕಂಡರೆ ಕಿಂಚಿತ್ತು ಆಗೋದಿಲ್ಲ ಎಂದರು. ಇಲ್ಲಿ ಯಾವ ಕಾರಣಕ್ಕೆ ತಮಗೆ ಇಷ್ಟವಿಲ್ಲ ಎಂಬುದನ್ನು ಹೇಳದ ಗಾಯಕಿ, ನನ್ನ ಅಭಿಪ್ರಾಯ, ಅನಿಸಿಕೆಗಳನ್ನು ಯಾರಿಗೂ ಹೆದರದೆ ಓಪನ್ ಆಗಿ ಹೇಳುವ ತನ ನನ್ನದು ಎಂದರು. ಸಕ್ಸಸ್ಫುಲ್ ಜನರ ಜೀವನದಲ್ಲಿ ಕೆಲವು ಹುಳಗಳು (ನಟಿಯನ್ನು ಪರೋಕ್ಷವಾಗಿ ಉಲ್ಲೇಖ) ಪ್ರವೇಶಿಸುತ್ತವೆ. ವಿಜಯ್ ತನ್ನ ಹೆತ್ತವರು ಮತ್ತು ಪತ್ನಿಯಿಂದ ದೂರವಾಗುವ ಮೂಲಕ ಒಂಟಿಯಾಗಿ ಬದುಕುತ್ತಿದ್ದಾರೆ. ಹಾಗಂತ, ಇಲ್ಲಿಯವರೆಗೆ ಯಾವುದರ ಹಿಂದೆಯೂ ಓಡಿಲ್ಲ. ಪ್ರಸ್ತುತ, ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ವಿಜಯ್ಗೆ ತಂದೆ ಚಂದ್ರಶೇಖರ್ ಅವರ ಅಗತ್ಯವಿದೆ ಎಂದರು.
ರಾಜಕೀಯ ಸಮಸ್ಯೆಗಳನ್ನು ಭೇದಿಸಿ ಮುನ್ನಡೆಯಬೇಕು ಎಂದರೆ, ಖಂಡಿತ ದಳಪತಿಗೆ ತಂದೆಯ ಸಪೋರ್ಟ್ ಬೇಕೇ ಬೇಕು. ಇಲ್ಲವಾದರೆ, ಅವರು ರಾಜಕೀಯದಲ್ಲಿ ಏನೂ ಸಾಧಿಸಲು ಆಗಲ್ಲ ಎಂದಿದ್ದಾರೆ. ಸದ್ಯ ಗಾಯಕಿ ಈ ಹೇಳಿಕೆಗಳು ಅನೇಕರನ್ನು ಅಚ್ಚರಿಗೆ ದೂಡಿದ್ದು, ಹೊಸ ವಿವಾದಕ್ಕೂ ಕಾರಣವಾಗಿದೆ. ಈ ಕುರಿತು ತ್ರಿಷಾ ಪ್ರತಿಕ್ರಿಯಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ಏನಿದು ವಿಜಯ್-ತ್ರಿಷಾ ವದಂತಿ?
ಕಳೆದ ಹಲವು ವರ್ಷಗಳಿಂದ ನಟಿ ತ್ರಿಷಾ ಕೃಷ್ಣನ್ ಜೊತೆ ವಿಜಯ್ ಅವರ ಹೆಸರು ಆಗಾಗ್ಗೆ ಕೇಳಿಬರುತ್ತಲೇ ಇತ್ತು. ಇದು ಕಾಲಿವುಡ್ ಅಂಗಳದಲ್ಲಿ ದೊಡ್ಡ ವದಂತಿಯಾಗಿ ಹರಿದಾಡುತ್ತಿತ್ತು. ಆದರೆ, ಇದಕ್ಕೆ ಯಾವುದೇ ರೀತಿಯಲ್ಲೂ ವಿಜಯ್ ಅಥವಾ ತ್ರಿಷಾ ಆಗಲಿ, ಪ್ರತಿಕ್ರಿಯೆ ನೀಡಿಲ್ಲ. ಆದರೆ, ವಿಜಯ್ ಡಿವೋರ್ಸ್ ಸುದ್ದಿ ಹೊರಬಿದ್ದಾಗಿನಿಂದ ನಟಿಯ ಹೆಸರು ಮತ್ತೆ ಜೋರಾಗಿ ಸದ್ದು ಮಾಡಲಾರಂಭಿಸಿದೆ. ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದ್ದು, ಅವರಿಬ್ಬರು ಮದುವೆ ಸಮಾರಂಭಕ್ಕೆ ಭೇಟಿ, ಜೊತೆಗೆ ನಿಂತು ತೆಗೆಸಿಕೊಂಡ ಫೋಟೋ ಕ್ಷಣ. ಇವು ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು,(ಏಜೆನ್ಸೀಸ್).