ಮುಂಬೈ: ಭಾರತೀಯ ಸಿನಿಮಾ ರಂಗದ ಪ್ರಖ್ಯಾತ ನಟಿಯರಲ್ಲಿ ತಮನ್ನಾ ಭಾಟಿಯಾ ಕೂಡ ಒಬ್ಬರು. ಸರಿ ಸುಮಾರು ಎರಡು ದಶಕಗಳ ವೃತ್ತಿ ಜೀವನದಲ್ಲಿ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತ ಸಿನಿಮಾಗಳಲ್ಲಿ ತಮ್ಮ ಅಭಿನಯ, ಡಾನ್ಸ್ ಮತ್ತು ಸೌಂದರ್ಯದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿರುವ ತಮನ್ನಾ ಈವರೆಗೂ ಕೌಟುಂಬಿಕ ಪಾತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. 18 ವರ್ಷಗಳ ಸಿನಿ ಪಯಣದಲ್ಲಿ ಯಾವುದೇ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ತಮನ್ನಾ, ಇದೀಗ ಆ ಚೌಕಟ್ಟಿನಿಂದ ಹೊರಬಂದು ತೀರಾ ಅಶ್ಲೀಲ ಎನಿಸುವ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದು, ಹಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಆದರೂ ತಮ್ಮ ನಟನೆಯನ್ನು ಮುಂದುವರಿಸಿದ್ದಾರೆ.
ತಾಜಾ ಸಂಗತಿ ಏನೆಂದರೆ ತಮನ್ನಾ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಮಿಳಿನ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮನ್ನಾ ಆಡಿರುವ ಬೋಲ್ಡ್ ಮಾತುಗಳು ಅಭಿಮಾನಿಗಳ ಹುಬ್ಬೇರಿಸಿದೆ.
ನೀವು ಶಾಲಾ ದಿನಗಳಲ್ಲಿ ಎಂದಾದರೂ ವಯಸ್ಕರ ಸಿನಿಮಾವನ್ನು ನೋಡಿದ್ದೀರಾ ಎಂದು ಆ್ಯಂಕರ್ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸುವ ತಮನ್ನಾ, ಒಮ್ಮೆ ಆಕಸ್ಮಿಕವಾಗಿ ನೋಡಿದ್ದೆ. ಫ್ರೆಂಡ್ಸ್ ಮನೆಯಲ್ಲಿ ಒಂದು ಸಿಡಿ ಇತ್ತು. ಆ ಸಿಡಿ ವಯಸ್ಕರ ಚಿತ್ರಣದ ಸಿಡಿ ಎಂದು ಗೊತ್ತಿಲ್ಲದೆ ಅದನ್ನು ಪ್ಲೇ ಮಾಡಿದೆವು. ತುಂಬಿದ ಮನೆಗಳಲ್ಲಿ ಇಂಥಾ ಸಿಡಿಗಳನ್ನು ಯಾರು ತಾನೇ ಇಡುತ್ತಾರೆ. ಹಾಗಾಗಿ ಕೈಗೆ ಸಿಕ್ಕಿತೆಂದು ಆ ಸಿಡಿ ಪ್ಲೇ ಮಾಡಿದೆವು. ಫ್ರೆಂಡ್ಸ್ ಜತೆ ಕುಳಿತು ನೋಡಿದೆವು. ಅಶ್ಲೀಲ ಸಿಡಿ ಎಂದು ಆಮೇಲೆ ಗೊತ್ತಾಯಿತು ಎಂದು ತಮನ್ನಾ ಸಂದರ್ಶನದಲ್ಲಿ ಹೇಳಿದ್ದು, ವಿಡಿಯೋ ತುಣುಕು ಈಗ ವೈರಲ್ ಆಗುತ್ತಿದೆ.
ನೋ ಲಿಪ್ಲಾಕ್ ನಿಯಮ ಮುರಿದಿದ್ದರ ಬಗ್ಗೆ ಮಾತನಾಡಿದ್ದ ತಮನ್ನಾ, 18 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಒಮ್ಮೆಯೂ ತೆರೆಯ ಮೇಲೆ ಕಿಸ್ ಮಾಡಿಲ್ಲ. ಓರ್ವ ನಟಿಯಾಗಿ ಅಥವಾ ಕಲಾವಿದೆಯಾಗಿ ಏಕೆ ನಾನು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಹಾಕಿಕೊಳ್ಳಬೇಕು? ಓರ್ವ ನಟಿಯಾಗಿ ನಾನೇಕೆ ಮತ್ತಷ್ಟು ಬೆಳೆಯಬಾರದು ಎಂದು ನನ್ನನ್ನು ನಾನು ಕೇಳಿಕೊಳ್ಳುತ್ತೇನೆ. ತೆರೆಯ ಮೇಲಿನ ಚುಂಬನದ ದೃಶ್ಯಗಳ ಬಗ್ಗೆ ನನ್ನ ನಿಯಮವು ಅರ್ಥಹೀನವೆಂದು ತೋರುತ್ತದೆ ಎಂದು ಈ ಹಿಂದೆ ತಮನ್ನಾ ಹೇಳಿದ್ದರು.
ಡೇಟಿಂಗ್ ಮತ್ತು ಲವ್ ವಿಚಾರದಲ್ಲಿ ತಮನ್ನಾ ಹೆಸರಿನ ಜೊತೆ ಈ ಹಿಂದೆ ಹಲವರು ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲಿ ಉದ್ಯಮಿ ಹೆಸರೂ ಇತ್ತು. ಆದರೆ, ತಮನ್ನಾ ಮಾತ್ರ ನಟ ವಿಜಯ್ ವರ್ಮ ಪ್ರೀತಿಯಲ್ಲಿ ಬಿದ್ದಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ ತಮನ್ನಾ ಅವರು ವಿಜಯ್ ವರ್ಮಗಿಂತ ಆರು ಪಟ್ಟು ಅಧಿಕ ಆಸ್ತಿ ಹೊಂದಿದ್ದಾರೆ. ಇದು ತಮನ್ನಾ ಅವರ ಅಭಿಮಾನಿಗಳಿಗೆ ಮಾತ್ರವಲ್ಲ ಸಿನಿಮಾ ಇಂಡಸ್ಟ್ರಿಯವರಿಗೂ ಅಚ್ಚರಿ ಉಂಟು ಮಾಡಿದೆ. (ಏಜೆನ್ಸೀಸ್)