Sreeleela  
ಸಿನಿವಾಣಿ

ಕೈ ಮುಗಿದು ಕೇಳಿಕೊಳ್ಳುತ್ತೇನೆ ಈ ರೀತಿ ಮಾಡಬೇಡಿ! ಶ್ರೀಲೀಲಾ ಹೀಗೆ ಹೇಳಲು ಕಾರಣವೇನು ? |Sreeleela

ಪ್ರಮುಖ ಮುಖ್ಯಾಂಶಗಳು

  • ಎಐ ತಂತ್ರಜ್ಞಾನವನ್ನು ಬಳಸಿಕೊಂಡು ನಟ, ನಟಿಯರ ಫೋಟೊಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಲೆ ಇವೆ
  • ಅನೇಕ ನಟ ನಟಿಯರು ಈ ಕುರಿತು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು
  • ಈದೀಗ ನಟಿ ಶ್ರೀಲೀಲಾ ಸಹ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ
Sreeleela : ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ನಟ, ನಟಿಯರ ಫೋಟೊಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ದಿನಕಳೆದಂತೆ ಹೆಚ್ಚುತ್ತಲೇ ಇವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ನಟಿಯರು ತಮ್ಮ ಅನಿಸಿಕೆ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಕನ್ನಡದ ನಟಿ ಶ್ರೀಲೀಲಾ (Sreeleela) ವರು ಎಐ ದುರ್ಬಳಕೆ ವಿರುದ್ಧ ಅಸಮಾಧಾನ ಹೊರಹಾಕಿದ್ದು ತಾಜಾ ಸುದ್ದಿಯಾಗಿದೆ. ಕೆಲ ಆನ್​ಲೈನ್​ ವಿಕೃತಿಗಳು ಕೃತಕ ಬುದ್ಧಿಮತ್ತೆ (ಎಐ) ಯನ್ನು ಬಳಸಿ ಶ್ರೀಲೀಲಾ ಅವರ ನಕಲಿ ವಿಡಿಯೋ ಮತ್ತು ಚಿತ್ರಗಳನ್ನು ತಯಾರಿಸಿ ಹರಿಬಿಟ್ಟಿದ್ದಾರೆ. ಇದರ ಬಗ್ಗೆ ಶ್ರೀಲೀಲಾ ಸ್ಥಳೀಯ ಪೋಲಿಸರಿಗೆ ದೂರನ್ನು ನೀಡುವ ಜತೆಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ನಟಿ ಶ್ರೀಲೀಲಾ ಪೋಸ್ಟ್‌

ನಾನು ಕೈಮುಗಿದು ಪ್ರತಿಯೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರನ್ನೂ ವಿನಂತಿಸುತ್ತೇನೆ. ಎಐ ತಂತ್ರಜ್ಞಾನದ ದುರ್ಬಳಕೆಯನ್ನು ಬೆಂಬಲಿಸಬೇಡಿ. ಎಐ ತಂತ್ರಜ್ಞಾನದ ಸರಿಯಾದ ಬಳಕೆ ಮತ್ತು ಅದನ್ನು ದುರ್ಬಳಕೆ ಮಾಡಿಕೊಳ್ಳುವುದರ ನಡುವೆ ವ್ಯತ್ಯಾಸವಿದೆ. ತಂತ್ರಜ್ಞಾನದಲ್ಲಿ ಅಪ್‌ಡೇಟ್ ಆಗುವುದು ಜೀವನವನ್ನು ಸರಳಗೊಳಿಸುವ ಉದ್ದೇಶದಿಂದ. ಎಐ ನಮ್ಮ ಜೀವನವನ್ನು ಸುಗಮಗೊಳಿಸಬೇಕೆ ಹೊರತು ಕಷ್ಟ ನೀಡಲು ಅಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದು ಬರೆದು ಕೊಂಡಿದ್ದಾರೆ. ಪ್ರತಿಯೊಬ್ಬ ಮಹಿಳೆ, ಮಗಳು,ಸಹೋದರಿ, ಸ್ನೇಹಿತೆ ಅಥವಾ ಸಹೋದ್ಯೋಗಿ ಇರುತ್ತಾಳೆ; ಅವಳು ಕಲೆಯನ್ನು ತನ್ನ ವೃತ್ತಿಯನ್ನಾಹಿಸಿಕೊಂಡು ಬದುಕುತ್ತಿದ್ದರೂ ಆಕೆ ಸಹ ಒಂದು ಹೆಣ್ಣೇ ಆಗಿರುತ್ತಾಳೆ. ನಾವು ಸುರಕ್ಷಿತ ವಾತಾವರಣದಲ್ಲಿದ್ದೇವೆ ಎಂಬ ವಿಶ್ವಾಸದೊಂದಿಗೆ ಬದುಕಲು ಬಿಡಿ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾಗಳ ಮೂಲಕ ನಟನೆ ಆರಂಭಿಸಿದ ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ. ತೆಲುಗಿನ ಸ್ಟಾರ್ ನಟರುಗಳಾದ ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣ, ರವಿತೇಜ ಇನ್ನೂ ಕೆಲವರೊಟ್ಟಿಗೆ ನಟಿಸಿದ ಶ್ರೀಲೀಲಾ, ಇದೀಗ ಬಾಲಿವುಡ್ಗೆ ಕಾಲಿಟ್ಟಿದ್ದು ಅಲ್ಲಿಯೂ ಸಹ ಬಲು ಬೇಡಿಕೆಯಲ್ಲಿದ್ದಾರೆ.(ಏಜನ್ಸೀಸ್).