ಸಿನಿವಾಣಿ

ಜನರು ಸನ್ನಿ ಲಿಯೋನ್​ ಸ್ವೀಕರಿಸಿದಂತೆ ನನ್ನನ್ನು ಒಪ್ಪಿಕೊಳ್ಳಲಿಲ್ಲ ಆದರೆ ಈಗ... ಶಕೀಲಾ ಮುಕ್ತ ಮಾತು! Shakeela

Shakeela : ನಟಿ ಶಕೀಲಾ ಬಗ್ಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. 1990ರ ದಶಕದ ಬಹುತೇಕರಿಗೆ ಶಕೀಲಾ ಪರಿಚಯ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಶಕೀಲಾ ಅವರು ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದರು. ಶಕೀಲಾರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್​ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು. ಆದರೆ, ದಿನ ಕಳೆದಂತೆ ಶಕೀಲಾ ಅವರ ಖ್ಯಾತಿ ಕೂಡ ಕ್ಷೀಣಿಸುತ್ತಾ ಬಂತು. ಅಲ್ಲದೆ, ಶಕೀಲಾ ನಿರಂತರವಾಗಿ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸಿದ್ದರಿಂದ ಕೇರಳ ಸಿನಿಮಾ ಕ್ಷೇತ್ರದಿಂದಲೇ ಅವರನ್ನು ಬ್ಯಾನ್​ ಮಾಡಲಾಯಿತು. ಬಳಿಕ ಮಲಯಾಳಂ ಸಿನಿಮಾ ಇಂಡಸ್ಟ್ರಿ ಬಿಟ್ಟು ತಮಿಳುನಾಡಿಗೆ ಬಂದು ನೆಲೆಸಿದರು.

ತಮಿಳುನಾಡಿಗೆ ಬಂದು ನೆಲೆಸಿದ ಬಳಿಕ ನೀಲಿ ಸಿನಿಮಾಗಳ ನಟನೆಯಿಂದ ದೂರ ಉಳಿದ ಶಕೀಲಾ ತಮಗೆ ಸಿಕ್ಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದರು. ಜಯಂ, ಅಳಗಿಯ ತಮಿಳ್​ ಮಗನ್ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿಯೂ ಶಕೀಲಾ ನಟಿಸಿದ್ದಾರೆ. ಕನ್ನಡದಲ್ಲೂ ಕೆಲ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಅಲ್ಲದೆ, ಟಿವಿ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದಾರೆ.

ಕನ್ನಡದ ಬಿಗ್​ಬಾಸ್​ ಶೋನಲ್ಲೂ ಶಕೀಲಾ ಅವರು ಕಾಣಿಸಿಕೊಂಡಿದ್ದರು. ಅಲ್ಲದೆ, ಶಕೀಲಾ, ತಮಿಳಿನ ಕುಕ್ ವಿತ್ ಕೋಮಾಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಅಡುಗೆ ಕೌಶಲ್ಯವನ್ನು ತೋರಿಸಿದರು. ಟಿವಿ ಶೋಗಳಲ್ಲಿ ಭಾಗವಹಿಸಿದ ಬಳಿಕ ಅವರ ಖ್ಯಾತಿಯು ಹೆಚ್ಚಾಯಿತು. ಅಭಿಮಾನಿ ಬಳಗವೂ ಬೆಳೆಯಿತು. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಕೀಲಾ, ತಮ್ಮ ಬದುಕು ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದ್ದಾರೆ.

ನಾನು ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸಿದಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣ ಇರಲಿಲ್ಲ. ಹೀಗಾಗಿ ನಾನು ಎಲ್ಲಿಯವಳು ಎಂಬುದು ಅನೇಕ ಮಂದಿಗೆ ತಿಳಿದಿರಲಿಲ್ಲ. ಆದರೆ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಕಾಲದಲ್ಲಿ ಸಾಮಾಜಿಕ ಜಾಲತಾಣ ಇತ್ತು. ಹೀಗಾಗಿ ಆಕೆಯ ಬಗ್ಗೆ ಹಾಗೂ ಆಕೆ ಏನು ಮಾಡುತ್ತಿದ್ದಳು ಅನ್ನೋದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಆಕೆಯನ್ನು ಅವರೆಲ್ಲ ಸಂಭ್ರಮಿಸುತ್ತಾರೆ ಮತ್ತು ಅದರಲ್ಲಿ ಯಾವುದೇ ತಪ್ಪಿಲ್ಲ. ಆಕೆಯನ್ನು ಸ್ವೀಕರಿಸಿದ ರೀತಿ ಜನರನ್ನು ನನ್ನನ್ನು ಒಪ್ಪಿಕೊಳ್ಳಲಿಲ್ಲ ಎಂದು ಶಕೀಲಾ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಹಿಂದೆ ನನ್ನ ಸಿನಿಮಾಗಳು ಪುರುಷರಿಗೆ ಮಾತ್ರ ಮನರಂಜನೆಯಾಗಿತ್ತು. ಈ ವಿಚಾರದ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ. ಅದೆಲ್ಲ ನಡೆದು ಹೋದ ಘಟನೆ. ನಾನೀಗ ತಮಿಳಿನಲ್ಲಿ ಕುಕ್ ವಿತ್ ಕೋಮಲಿ ಎಂಬ ಕಾರ್ಯಕ್ರಮ ಮಾಡಿದ್ದೇನೆ. ಈ ಕಾರ್ಯಕ್ರಮದಿಂದ ನನ್ನ ಚಿತ್ರಣವೇ ಬದಲಾಯಿತು. ಇದೀಗ ಎಲ್ಲರೂ ನನ್ನನ್ನು ಅಮ್ಮ ಎಂದು ಕರೆಯುತ್ತಾರೆ. ನಾನು ಎಲ್ಲಿಯೇ ಹೋದರೂ, ನನಗೆ ಪರಿಚಯವಿಲ್ಲದ ಎಲ್ಲರೂ ನನ್ನನ್ನು ಮಮ್ಮಿ ಎಂದು ಕರೆಯುತ್ತಾರೆ ಎನ್ನುವ ಮೂಲಕ ಶಕೀಲಾ ತುಂಬಾ ಭಾವುಕರಾದರು.

ಅಂದಹಾಗೆ, ಶಕೀಲಾ ಅವರು ತಮ್ಮ ಜೀವನದಲ್ಲಿ ಪ್ರೀತಿ ಮತ್ತು ನಷ್ಟ ಎರಡನ್ನೂ ಕಂಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು ಒಂದು ಪ್ರೀತಿ ಹೋದರೆ, ಮತ್ತೊಂದು ಪ್ರೀತಿ ನಮ್ಮನ್ನು ಹುಡುಕಿ ಬರುತ್ತದೆ. ಇದೇನು ಅಭ್ಯಾಸವಲ್ಲ. ಆದರೆ, ಅದು ಸಹಜ ಜೀವನ. ನಾನು ಯಾರನ್ನೇ ಆಗಲಿ ತುಂಬಾ ಪ್ರಾಮಾಣಿಕವಾಗಿ ಪ್ರೀತಿ ಮಾಡುತ್ತೇನೆ. ಪ್ರೀತಿಯ ಸಮಯದಲ್ಲಿ ಬಾಯ್​ಫ್ರೆಂಡ್​ ಮೇಲೆ ಮಾತ್ರ ನಾನು ಹೆಚ್ಚು ಗಮನ ಹರಿಸುತ್ತಿದ್ದೆ. ಆತ ನನ್ನನ್ನು ಬಿಟ್ಟು ಹೋದಾಗ, ನಾನು ಬೇರೊಬ್ಬರಿಗಾಗಿ ಎದುರು ನೋಡುತ್ತಿದ್ದೆ. ಇಂದು ಎಲ್ಲ ಮಾಜಿ ಗೆಳೆಯನ ಹೆಂಡತಿಯರು ನನ್ನ ಮನೆಗೆ ಬರುತ್ತಿರುತ್ತಾರೆ ಎಂದು ಶಕೀಲಾ ಹೇಳಿದರು. (ಏಜೆನ್ಸೀಸ್​)