ಸಿನಿವಾಣಿ

ಟ್ವಿಟರ್​ನಲ್ಲಿ ನಟ ಹೃತಿಕ್ ರೋಷನ್ ಅವರದ್ದೇ ಹವಾ! ವಿಡಿಯೋ ವೈರಲ್...

ಕಿಂಗ್ ಆಪ್ ಡ್ಯಾನ್ಸ್ ಎಂದೇ ಫೇಮಸ್ ಆಗಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತೆ ಸುದ್ದಿಯಲ್ಲಿದ್ದಾರೆ. ಟ್ವಿಟರ್​ನಲ್ಲಿ ತಮ್ಮ ಡ್ಯಾನ್ಸ್ ವಿಡಿಯೋಗಳ ಮೂಲಕ ಧೂಳೆಬ್ಬಿಸುತ್ತಿದ್ದಾರೆ. ಅಂದಹಾಗೆ, ಬಾಲಿವುಡ್ ನಟ ಮತ್ತು ಚಲನಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ಅವರು ಫೆಬ್ರವರಿ 19 ರಂದು ಬಹುಕಾಲದ ಗೆಳತಿ ಶಿಬಾನಿ ದಾಂಡೇಕರ್ ಅವರೊಂದಿಗೆ ಎರಡನೇ ವಿವಾಹವಾದರು. ಹಲವು ಸಿನಿತಾರೆಯರು ಮತ್ತು ಬೇರೆ ಬೇರೆ ಉದ್ಯಮಗಳ ಗಣ್ಯರು ಭಾಗವಹಿಸಿದ್ದರು. ಇನ್ನು, ಬಾಲ್ಯದ ಗೆಳೆಯ ಮತ್ತು ಸಹ ನಟನ ವಿವಾಹಕ್ಕೆ ನಟ ಹೃತಿಕ್ ರೋಷನ್ ಕೂಡಾ ಭಾಗವಹಿಸಿದ್ದರು.
ಕೇವಲ ವಿವಾಹದಲ್ಲಿ ಭಾಗವಹಿಸುವುದಲ್ಲದೇ ನಟ ಹೃತಿಕ್ ಗೆಳೆಯ ಫರ್ಹಾನ್ ಅಖ್ತರ್ ಜತೆಗೆ ತಮ್ಮದೇ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಹೌದು, ತಮ್ಮದೇ ಹಿಟ್ ಚಿತ್ರವಾದ ''ಜಿಂದಗಿ ನಾ ಮಿಲೇಗಿ ದೋಬರಾ''ದ ''ಸೆನೋರಿಟಾ'' ಹಾಡಿಗೆ ಗೆಳೆಯರಿಬ್ಬರೂ ಸಿಗ್ನೆಚರ್ ಸ್ಟೆಪ್ ಹಾಕಿದ್ದಾರೆ. ಇನ್ನು, ನಟ ಹೃತಿಕ್ ''ಕಹೋ ನಾ ಪ್ಯಾರ್ ಹೈ'' ಸಿನಿಮಾದ ''ಏಕ್ ಪಾಲ್ ಕಾ ಜೀನಾ'' ಹಾಡಿಗೆ ಕೂಡಾ ಮದುವೆಯ ಸಂಭ್ರಮದಲ್ಲಿದ್ದ ಎಲ್ಲಾ ಅತಿಥಿಗಳ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಸೂಪರ್ ಆಗಿ ಹೆಜ್ಜೆ ಹಾಕಿರುವ ನಟ ಹೃತಿಕ್ ರೋಷನ್ ಅವರ ವಿಡಿಯೋಗಳು ಇದೀಗ ಟ್ವಿಟರ್ ಮತ್ತು ಇನ್​ಸ್ಟಾಗ್ರಾಂನಲ್ಲೂ ಸಖತ್ ವೈರಲ್ ಆಗುತ್ತಿವೆ.