ಸಿನಿವಾಣಿ

ಪ್ರೇಯಸಿ ಸಬಾ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ Hrithik Roshan; 'ಸೋ ಸ್ವೀಟ್' ಎಂದ ಮಾಜಿ ಪತ್ನಿ

  • ಇದು ನಮ್ಮ ಹುಟ್ಟುಹಬ್ಬ ಎಂದು ಸಬಾ ಅಜಾದ್​ರೊಂದಿಗಿನ ಫೋಟೋ ಹಂಚಿಕೊಂಡ ಹೃತಿಕ ರೋಷನ್.

  • ಸುಸಾನೆ ಖಾನ್​ ಅವರು ಈ ಪೋಸ್ಟ್​ಗೆ ಸೋ ಸ್ವೀಟ್​​ ಎಂದು ಕಾಮೆಂಟ್ ಮಾಡಿದ್ದಾರೆ.

  • ಅ.1ರಂದು ತಮ್ಮ ಐದನೇ ದಿನದ ವಾರ್ಷಿಕೋತ್ಸವ ಆಚರಿಸಿಕೊಂಡ ಕಪಲ್ಸ್​

ಬಾಲಿವುಡ್​ ಎವರ್​ಗ್ರೀನ್​ ರೊಮ್ಯಾಂಟಿಕ್​, ಹ್ಯಾಂಡ್​ಸಮ್ ಹೀರೋ ಹೃತಿಕ್​ ರೋಷನ್​ ಅವರು ತಮ್ಮ ಪ್ರೇಯಸಿ ಸಬಾ ಅಜಾದ್​ ಅವರೊಂದಿಗಿನ ರೊಮ್ಯಾಂಟಿಕ್​ ಫೋಟೋಗಳನ್ನು ಹಂಚಿಕೊಂಡಿದ್ದು, ಇದಕ್ಕೆ ಅವರ ಮಾಜಿ ಪತ್ನಿ ಸುಸಾನೆ ಖಾನ್​​ ಸೋ ಸ್ವೀಟ್, ಹ್ಯಾಪಿ ಆನಿವರ್ಸರಿ​ ಎಂದು ಕಾಮೆಂಟ್ ಮಾಡಿದ್ದಾರೆ.

ನಟ ಹೃತಿಕ್​ ರೋಷನ್ ಮತ್ತು ಸಬಾ ಅಜಾದ್ ಒಟ್ಟಾಗಿ ಐದು ವರ್ಷ ಕಳೆದಿರುವ ಹಿನ್ನೆಲೆ, ಇದು ಇಬ್ಬರ ಹುಟ್ಟುಹಬ್ಬ ಎಂದು ಬರೆದುಕೊಂಡು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಅಕ್ಟೋಬರ್ 1 ರಂದು ತಮ್ಮ ಐದನೇ ವಾರ್ಷಿಕೋತ್ಸವದ ಹಿನ್ನೆಲೆ ಹ್ರತಿಕ್ ರೋಷನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇಬ್ಬರು ಒಟ್ಟಾಗಿ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಪೋಸ್ಟ್​ನಲ್ಲಿ ಏನಿದೆ?

'ಇದು ನಮ್ಮ ಹುಟ್ಟುಹಬ್ಬ, ಐದನೇ ವರ್ಷದ ಶುಭಾಷಯ ಮೈ ಲವ್' ಎಂದು ಹೃತಿಕ್​ ಬರೆದುಕೊಂಡಿದ್ದಾರೆ. ಅ.1ರಂದು ಈ ಪೋಸ್ಟ್​ ಹಂಚಿಕೊಳ್ಳುತ್ತಿದ್ದಂತೆ ಹಲವರು ಕಾಮೆಂಟ್​ ಮಾಡಿದ್ದಾರೆ. ಜೊತೆಗೆ ಹೃತಿಕ್​ ಅವರ ಮಾಜಿ ಪತ್ನಿ ಸುಸಾನೆ ಖಾನ್​ ಅವರು ಹೌ ಸ್ವೀಟ್​​, ಹ್ಯಾಪಿ ಆನಿವರ್ಸರಿ ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ಆಂಡ್ರಿಯಾ ಡಿ'ಸೋಜಾ ಅವರು ಸಹ ಹಾರೈಸಿದ್ದು, ಎಷ್ಟು ಮುದ್ದಾಗಿದ್ದೀರಿ. ಇಬ್ಬರಿಗೂ ಒಳ್ಳೆದಾಗ್ಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಸಬಾ ಅಜಾದ್-ಹೃತಿಕ್ ಪ್ರೀತಿ ಬಗ್ಗೆ

2022ರಲ್ಲಿ ಹೃತಿಕ್​ ರೋಷನ್ ಮತ್ತು ಸಬಾ ಅಜಾದ್​ ಅರವು ಡೇಟಿಂಗ್ ಮಾಡುತ್ತಿರುವ ಸುದ್ದಿ ಹರಿದಾಡಿತ್ತು. ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಈ ಜೋಡಿ ಕೈಕೈ ಹಿಡಿದು ಆಗಮಿಸುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಜೊತೆಗೆ ಇಶಾನ್​ ರೋಶನ್​ ಮದುವೆ ಸಮಾರಂಭದಲ್ಲಿ ಸಬಾ ಅಜಾದ್ ಕಾಣಿಸಿಕೊಂಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಸುಸಾನೆ ಖಾನ್ ಜೊತೆ ಡಿವೋರ್ಸ್

ಹೃತಿಕ್​ ರೋಷನ್ ಮತ್ತು ಸಬಾ ಅಜಾದ್ ಮಧ್ಯೆ 12 ವರ್ಷಗಳ ವಯಸ್ಸಿನ ಅಂತರವಿದೆ. ಹೃತಿಕ್​ ಅವರು 2000ದಲ್ಲಿ ಸುಸಾನೆ ಖಾನ್ ಅವರನ್ನು ಮದುವೆಯಾಗಿದ್ದರು. 2014 ರಲ್ಲಿ ಡಿವೋರ್ಸ್​ ಪಡೆದುಕೊಂಡಿದ್ದರು. ದಂಪತಿಗೆ ಹ್ರೇಹಾನ್ ಮತ್ತು ಹ್ರಿದಾನ್ ಮಕ್ಕಳಿದ್ದಾರೆ.

ಜೈಲರ್​2ನಲ್ಲಿ ಅತಿಥಿ ಪಾತ್ರ

ಹೃತಿಕ್ ರೋಷನ್ ಕೊನೆಯದಾಗಿ ಜೂನಿಯರ್ ಎನ್.ಟಿ.ಆರ್ ಮತ್ತು ಕಿಯಾರಾ ಅಡ್ವಾಣಿ ಜೊತೆ 'ವಾರ್ 2' ಚಿತ್ರದಲ್ಲಿ ಮೇಜರ್ ಕಬೀರ್ ಧಾಲಿವಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಆಲಿಯಾ ಭಟ್ ನಟನೆಯ 'ಅಲ್ಫಾ' ಚಿತ್ರದಲ್ಲೂ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಸಬಾ ಕೊನೆಯದಾಗಿ ಅನುರಾಗ್ ಕಶ್ಯಪ್ ಅವರ 'ಬಂದರ್' ಚಿತ್ರದಲ್ಲಿ ನಟಿಸಿದ್ದರು.

1986ರಲ್ಲಿ ರಿಲೀಸ್​ ಆಗಿದ್ದ 'ಭಗ್ವಾನ್ ದಾದಾ' ಚಿತ್ರದಲ್ಲಿ ರಜನಿಕಾಂತ್ ಜೊತೆ ಹೃತಿಕ್​ ನಟಿಸಿದ್ದರು. ಈಗ ಮತ್ತೆ 'ಜೈಲರ್ 2' ಚಿತ್ರದ ಮೂಲಕ ಮತ್ತೊಂದು ಬಾರಿ ರಜನಿಕಾಂತ್​ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ, (ಏಜೆನ್ಸೀಸ್).