ಹೈದರಾಬಾದ್: ದಕ್ಷಿಣ ಭಾರತದಲ್ಲಿ ಜನಪ್ರಿಯ ತಾರಾಜೋಡಿಗಳಲ್ಲಿ ಒಂದಾಗಿದ್ದ ಸಮಂತಾ ಮತ್ತು ನಾಗಚೈತನ್ಯ ದಂಪತಿ, ಬೇರೆಯಾಗುವ ನಿರ್ಧಾರವನ್ನು ಶನಿವಾರ(ಅ.2) ಜಾಹೀರುಗೊಳಿಸಿದ್ಧಾಗಿದೆ. ಅವರ ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವಂತೆಯೇ, ಅವರು ಪರಸ್ಪರ ಒಪ್ಪಿಗೆಯಿಂದ ಪಡೆಯಲಾಗುವ ಡಿವೋರ್ಸ್ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಜೊತೆಗೆ, ನಾಲ್ಕು ವರ್ಷದ ದಾಂಪತ್ಯಕ್ಕೆ ಕೊನೆ ಹಾಡುತ್ತಿರುವ ಸಮಂತಾಗೆ ನಾಗಚೈತನ್ಯ ಮತ್ತು ಅವರ ಕುಟುಂಬವು 200 ಕೋಟಿ ರೂ. ಜೀವನಾಂಶ ನೀಡಲು ಮುಂದಾಯಿತು. ಆದರೆ, ಸ್ವಂತ ಶ್ರಮದಿಂದ ಟಾಲಿವುಡ್ನಲ್ಲಿ ಹೆಸರು ಮಾಡಿರುವ ಸಮಂತಾ, ಈ ಹಣ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಮಂತಾ ಈಗ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ, ಕೆಲಸದ ಬಗ್ಗೆ ಹೆಚ್ಚು ಗಮನ ನೀಡಲು ಬಯಸುತ್ತಿದ್ದಾರೆ. ಕಠಿಣ ಸಮಯವನ್ನು ಎದುರಿಸುತ್ತಿದ್ದರೂ, ತಾವು ಕೈಗೊಂಡಿರುವ ಸಿನಿ ಪ್ರಾಜೆಕ್ಟ್ಗಳಿಗೆ ಯಾವುದೇ ತೊಂದರೆಯಾಗಬಾರದೆಂಬ ಪ್ರೊಫೆಷನಲಿಸಂ ಹೊಂದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)