ಬೆಂಗಳೂರು: ಹಾರರ್ ಥ್ರಿಲ್ಲರ್ ಶೈಲಿಯ "ಟೆಡ್ಡಿ ಬೇರ್' ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದು, ಇನ್ನೇನು ಚಿತ್ರಮಂದಿರಗಳ ಬಾಗಿಲು ತೆರೆದರೆ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ. ನವ ದಂಪತಿ ಹೊಸ ಮನೆ ಪ್ರವೇಶ ಪಡೆದಾಗ ಅಲ್ಲಿ ಎದುರಾಗುವ ವಿಚಿತ್ರ ಟನಾವಳಿಗಳೇ ಈ ಸಿನಿಮಾದ ಕಥಾಹಂದರ.
ಇತ್ತೀಚೆಗೆ ನಡೆದ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಆಗಮಿಸಿ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಬಾಮ ಹರೀಶ್, ಉಮೇಶ್ ಬಣಕಾರ್ ಸಹ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. "ಟೆಡ್ಡಿ ಬೇರ್' ಚಿತ್ರಕ್ಕೆ ಲೋಕೇಶ್ ಬಿ ಆ್ಯಕ್ಷನ್ ಕಟ್ ಹೇಳಿದ್ದು, ಶೇ. 80ರಷ್ಟು ಭಾಗದ ಶೂಟಿಂಗ್ ಮುಕ್ತಾಯವಾಗಿದೆ. ಭಾರ್ಗವ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಲಿಖಿತಾ ಮತ್ತು ಶೈಲಜಾ ಸಿಂಹ ನಾಯಕಿಯರಾಗಿದ್ದಾರೆ. ಆರೋನ್ ಕಾರ್ತಿಕ್ ಸಂಗೀತ, ಕೃಷ್ಣ ಸಾರಥಿ ಛಾಯಾಗ್ರಹಣ ಮಾಡಿರುವ ಈ ಚಿತ್ರ ಆದ್ಯಲಕ್ಷಿ$್ಮ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿದೆ. ಸಿರಿ ಮ್ಯೂಸಿಕ್ನಲ್ಲಿ ಹಾಡುಗಳು ಬಿಡುಗಡೆ ಆಗಿವೆ.