ಸಿನಿವಾಣಿ

ಪಾರ್ಟಿ ಹೆಸರಲ್ಲಿ ಡ್ರಗ್ಸ್​, ಸೆ*ಕ್ಸ್​! ಹಾಲಿವುಡ್​ ಕರಾಳ ಮುಖ ಬಯಲು

ಅತ್ಯುತ್ತಮ ಸಿನಿಮಾ ಆಸ್ಕರ್​ ಪ್ರಶಸ್ತಿ ಗೆದ್ದಿದ್ದ "ಶೇಕ್ಸ್​ಪಿಯರ್​ ಇನ್​ ಲವ್​' ಸೇರಿ "ಮಲೆನಾ', "ಗ್ಯಾಂಗ್ಸ್​ ಆ್​ ನ್ಯೂ ಯಾರ್ಕ್​' ಮತ್ತು ಹಲವು ಹಾಲಿವುಡ್​ ಚಿತ್ರಗಳು, ಟಿವಿ ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತಿ ನಿರ್ಮಾಪಕ ಹಾರ್ವೇ ವೀನ್​ಸ್ಟೀನ್​ಗೆ ಸಲ್ಲುತ್ತದೆ. ಇಂತಹ ಹಾರ್ವೇ ವಿರುದ್ಧ ಹಲವಾರು ನಟಿಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. 2018ರಲ್ಲಿ ಮೂರು ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದ್ದು, ಸದ್ಯ ಹಾರ್ವೇ 16 ವರ್ಷಗಳ ಕಾರಾಗೃಹ ಶಿಕ್ಷೆಯಾಗಿತ್ತು.

ಆಗ ಹಾಲಿವುಡ್​ನಲ್ಲಿ "ಮೀಟೂ' ಕ್ಯಾಂಪೇನ್​ ಆರಂಭವಾಗಿ, ಭಾರತದಲ್ಲೂ ಹಲವು ನಟಿಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು. ಇದೀಗ ಹಾರ್ವೇ ಪ್ರಕರಣ ನಡೆದ ಆರು ವರ್ಷಗಳ ಬಳಿಕ ಮತ್ತೊಬ್ಬ ಹಾಲಿವುಡ್​ ಸ್ಟಾರ್​ ಶಾನ್​ ಡಿಡ್ಡಿ ಕೂಂಬ್ಸ್​ ಹೆಸರು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೇಳಿಬಂದಿದೆ. ಕಳೆದ ಕೆಲ ದಿನಗಳಲ್ಲಿ ಆತನ ವಿರುದ್ಧ 11 ಪ್ರಕರಣಗಳು ದಾಖಲಾಗಿದ್ದು, ಪಾರ್ಟಿ ಹೆಸರಿನಲ್ಲಿ ಶಾನ್​ ನಡೆಸುತ್ತಿದ್ದ ಕರಾಳ ದಂಧೆಯ ಹಂತ ಹಂತವಾಗಿ ಬಹಿರಂಗಗೊಂಡಿದೆ. ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಇದೇ ತಿಂಗಳ 16ರಂದು ಡಿಡ್ಡಿ ಕೂಂಬ್ಸ್​ಅನ್ನು ಬಂಧಿಸಲಾಗಿದೆ.

ಪಾರ್ಟಿ ಹೆಸರಲ್ಲಿ ದಂಧೆ
ಮೂಲಗಳ ಪ್ರಕಾರ ಹಾಲಿವುಡ್​ ಸೆಲೆಬ್ರಿಟಿಗಳು, ರ್ಯಾಪರ್​ಗಳು ಸೇರಿ ಹೈಪ್ರೊೈಲ್​ ಗೆಸ್ಟ್​ಗಳಿಗಾಗಿ ಗೌಪ್ಯ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಡಿಡ್ಡಿ, ಅಲ್ಲಿ ಎಲ್ಲ ಬಗೆಯ ಮಾದಕ ವಸ್ತುಗಳು ಹಾಗೂ ವೇಶ್ಯೆಯರನ್ನು ಪೂರೈಸುತ್ತಿದ್ದ ಎನ್ನಲಾಗಿದೆ. ಕೆಲ ತಾರೆಯರ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಅದರ ೋಟೋ ಮತ್ತು ವಿಡಿಯೋ ಮಾಡಿಕೊಂಡು, ಅವರನ್ನು ಬೆದರಿಸುತ್ತಿದ್ದ ಎನ್ನಲಾಗಿದೆ.