ಸಿನಿವಾಣಿ

ಶೂಟಿಂಗ್​ ಸೆಟ್​ನಲ್ಲೇ 10 ಜನರಿಗೆ ಮುತ್ತಿಟ್ಟಿದ್ದರಂತೆ ಈ ಆಸ್ಕರ್​ ವಿಜೇತ ನಟಿ!

ಒಂದೊಂದು ಪಾತ್ರಕ್ಕೆ ಒಂದೊಂದು ರೀತಿಯ ಸಿದ್ಧತೆ ಬೇಕಾಗುತ್ತದೆ. ಕೆಲವೊಮ್ಮೆ ಕಲಾವಿದರೇ ಆಯಾ ಪಾತ್ರಕ್ಕೆ ಬೇಕಾದ ಸಿದ್ಧತೆಯನ್ನೂ ತಾವೇ, ತಮ್ಮದೇ ರೀತಿಯಲ್ಲಿ ಮಾಡಿಕೊಂಡರೆ. ಕೆಲವೊಮ್ಮೆ ನಿರ್ದೇಶಕರು, ಚಿತ್ರತಂಡಗಳು ಹೀಗೇ ರೆಡಿಯಾಗಬೇಕು ಎಂದು ಹೇಳಿರುತ್ತಾರೆ. ಇದರಿಂದ ಹಾಲಿವುಡ್​ ನಟ, ನಟಿಯರೂ ಹೊರತಾಗಿಲ್ಲ. ಕೆಲವೊಮ್ಮೆ ಚಿತ್ರತಂಡಗಳು ಸಿದ್ಧತೆ ಮಾಡಿಕೊಳ್ಳಲು ಕೊಡುವ ಐಡಿಯಾಗಳು ಅತಿರೇಕ ಎನ್ನಿಸಬಹುದು.

ಅಂಥದ್ದೇ ಟನೆಗೆ ಆಸ್ಕರ್​ ಪ್ರಶಸ್ತಿ ವಿಜೇತ ಹಾಲಿವುಡ್​ ನಟಿ ಆ್ಯನಾ ಹಾಥ್​ವೇ ಸಾಯಾಗಿದ್ದರಂತೆ. ಆ ಬಗ್ಗೆ 20 ವರ್ಷಗಳ ಬಳಿಕ ಮೌನ ಮುರಿದಿರುವ ಅವರು, "ಈಗ ಕಾಲ ಬದಲಾಗಿದೆ. ಆದರೆ, 2000ರ ದಶಕದಲ್ಲಿ ನಟ, ನಟಿಯ ಜತೆಗೆ ಕೆಮಿಸ್ಟ್ರಿ ರೂಪಿಸಲು, ಅವರಿಗೆ ವಯಕ್ತಿಕ ಸಮಯ ನೀಡಲಾಗುತ್ತಿತ್ತು. ಅದು ಕೆಟ್ಟದು ಎಂದು ಗೊತ್ತಿದ್ದರೂ, ಆ ಸಮಯದಲ್ಲಿ ಅದೇ ರೀತಿ ಸಿದ್ಧತೆ ನಡೆಯುತ್ತಿತ್ತು. ನನಗೂ ಶೂಟಿಂಗ್​ ಸ್ಪಾಟ್​ನಲ್ಲಿ ಒಮ್ಮೆ 10 ಜನರಿಗೆ ಮುತ್ತು ನೀಡಲು ತಿಳಿಸಿದ್ದರು. ಇದೆಲ್ಲಾ ಬೇಕಾ? ಅಂತ ನನಗೆ ಬೇಸರವಾಗಿತ್ತು. ಆದರೂ ಪಾತ್ರದ ಸಿದ್ಧತೆಗೆ ಹೀಗೆ ಮಾಡಲೇಬೇಕಾಗಿತ್ತು' ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ, ಮೇ 2ರಂದು ಆ್ಯನಾ ನಟಿಸಿರುವ "ದ ಐಡಿಯಾ ಆಫ್​ ಯೂ' ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಅದರಲ್ಲಿ 29 ವರ್ಷದ ನಿಕೊಲಸ್​ ಜತೆ 41 ವರ್ಷದ ಆ್ಯನ್ಯಾ ರೊಮ್ಯಾನ್ಸ್​ ಮಾಡಲಿದ್ದಾರೆ.