ಸಿನಿವಾಣಿ

ಹೆಂಡತಿಗಿಂತ ಕುಳ್ಳಗಿರುವ ಗಂಡಂದಿರ ಕಷ್ಟ ಈ ಸೆಲೆಬ್ರಿಟಿಯಂತೆಯೇ! ಟ್ರೋಲ್ ಆದ ಹಿಮೇಶ್ ರೇಷಮಿಯಾ

ಮುಂಬೈ: ಬಾಲಿವುಡ್ ಗಾಯಕ, ಸಂಗೀತ ನಿರ್ದೇಶಕ, ನಟ ಹಿಮೇಶ್ ರೇಷಮಿಯಾ 1998 ರಿಂದ ಇಂದಿಗೂ ಒಬ್ಬ ದೊಡ್ಡ ಸ್ಟಾರ್ ಎಂದೇ ಹೇಳಬೇಕು. ಅವರ ವಿಭಿನ್ನವಾದ ಕಂಠದ ಮೂಲಕ ಸಂಗೀತ ಪ್ರೀಯರನ್ನು ಸಿಕ್ಕಾಪಟ್ಟೆ ರಂಜಿಸಿ ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇನ್ನು, ಸೋಶಿಯಲ್​ ಮೀಡಿಯಾದಲ್ಲಿ ಗಾಯಕ ಹಿಮೇಶ್ ರೇಷಮಿಯಾ ಅವರು ಸಿಕ್ಕಾಪಟ್ಟೆ ಆ್ಯಕ್ಟೀವ್ ಎಂದೇ ಹೇಳಬೇಕು. ಆದರೆ, ಸದಾ ತಮ್ಮ ಹಾಡುಗಳಿಗಾಗಿ, ಸಿನಿಮಾಗಳಿಗಾಗಿ ಸಖತ್ ಸುದ್ದಿಯಲ್ಲಿರುವ ಹಿಮೇಶ್ ಕಳೆದ ಕೆಲವು ಗಂಟೆಗಳಿಂದ ಟ್ರೋಲರ್​ಗಳಿಗೆ ಅಚ್ಚುಮೆಚ್ಚು ಆಗಿದ್ದಾರೆ.
ಹೌದು, ಸದ್ಯ ಅವರೊಂದು ಸಿಂಪಲ್ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅಂದಹಾಗೆ, ಸೆಲೆಬ್ರಿಟಿಗಳು, ಸಿನಿತಾರೆಯರು ಎಲ್ಲಿ ಹೋದರೂ ಕೂಡಾ ಅವರ ಹಿಂದೆ ಮಾಧ್ಯಮದವರು ಇರುತ್ತಾರೆ. ಅವರ ಮೇಲೆ 24/7 ಕ್ಯಾಮೆರಾ ಕಣ್ಣುಗಳು ಇದ್ದೆ ಇರುತ್ತವೆ. ಇತ್ತೀಚೆಗೆ, ಹಿಮೇಶ್ ರೇಷಮಿಯಾ ಅವರು ಪತ್ನಿ ಸೋನಿಯಾ ಕಪೂರ್ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಇನ್ನು, ಹಿಮೇಶ್​ ಅವರಿಗಿಂತಲೂ ಸೋನಿಯಾ ಕಪೂರ್​ ಎತ್ತರ ಇದ್ದಾರೆ. ಹಿಮೇಶ್ ಅವರು 5.3 ಎತ್ತರ ಇದ್ದಾರೆ. ಇನ್ನು ಅವರ ಪತ್ನಿ ಸೋನಿಯಾ 5.6 ಅಡಿ ಇದ್ದಾರೆ. ಈ ಜೋಡಿಗೆ 0.3 ಅಡಿ ವ್ಯತ್ಯಾಸವಿದೆ. ಅದು ಕೆಲವೊಮ್ಮೆ ಹಿಮೇಶ್​ಗೆ ಇರಿಸುಮುರಿಸು ಉಂಟು ಮಾಡುತ್ತದೆ ಎಂಬುದು ಈ ಬಾರಿ ಬಹಿರಂಗವಾಗಿ ಕ್ಯಾಮೆರಾ ಮುಂದೆ ಸಾಬೀತಾಗಿದೆ.
ಮಾಧ್ಯಮದವರ ಕ್ಯಾಮೆರಾಗಳಿಗೆ ಹಿಮೇಶ್ ರೇಷಮಿಯಾ ಮತ್ತು ಅವರ ಪತ್ನಿ ಸೋನಿಯಾ ಕಪೂರ್ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಪೋಸ್ ಕೊಟ್ಟಿದ್ದಾರೆ. ಈ ವೇಳೆ ಪತ್ನಿಯ ಹೈಟ್ ಗೆ ಮ್ಯಾಚ್ ಮಾಡಲು ಅಂದರೆ ಆಕೆಗೆ ಸಮನಾಗಿ ನಿಲ್ಲಲು ಹಿಮೇಶ್ ಅವರು ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಅದು ವಿಡಿಯೋದಲ್ಲಿ ಸಹ ಕಾಣಿಸಿಕೊಂಡಿದೆ. ಫೋಟೋ ಕ್ಲಿಕ್ಕಿಸುವಾಗ ಹಿಮೇಶ್ ಅವರು ಎತ್ತರವಾಗಿ ಕಾಣಲು ತುದಿಗಾಲಿನಲ್ಲಿ ನಿಂತಿರುವುದು ಕ್ಯಾಮೆರಾ ಕಣ್ಣುಗಳಿಗೆ ಕಾಣಿಸಿದೆ. ಸದ್ಯ, ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದು, ಟ್ರೋಲ್ ಮಾಡುವುದರ ಜತೆಗೆ ವಿಡಿಯೋವನ್ನು ಸಖತ್ ವೈರಲ್ ಮಾಡುತ್ತಿದ್ದಾರೆ.