- ದಿಗ್ಗಜ ನಟರೇ ಈ ಪಾಟಿಯ ಸಂಭಾವನೆಯನ್ನು ಸ್ವೀಕರಿಸಿಲ್ಲ
- ಬಾಲಿವುಡ್ನ ಸ್ಟಾರ್ ಹೀರೋ ಪಾಲಾಗಿದೆ ಬರೋಬ್ಬರಿ 325 ಕೋಟಿ ರೂ. ಸಂಭಾವನೆ
Highest Paid Actor: ಶಾರುಖ್ ಖಾನ್, ರಜಿನಿಕಾಂತ್, ದಳಪತಿ ವಿಜಯ್, ಅಲ್ಲು ಅರ್ಜುನ್, ಮಹೇಶ್ ಬಾಬು ಸೇರಿ ಹಲವು ಚಿತ್ರರಂಗದ ದಿಗ್ಗಜ ಸೂಪರ್ ಸ್ಟಾರ್ಗಳೇ ಪಡೆಯದ ಬೃಹತ್ ಮೊತ್ತದ ಸಂಭಾವನೆಯನ್ನು ಈ ಸ್ಟಾರ್ ಹೀರೋ ತಮ್ಮ ಒಂದೇ ಒಂದು ಬ್ಲಾಕ್ಬಸ್ಟರ್ ಸಿನಿಮಾದಿಂದ ಪಡೆದಿರುವುದು ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕೇವಲ ಒಂದೇ ಒಂದು ಬಿಗ್ ಪ್ರಾಜೆಕ್ಟ್‌ನಿಂದ ಬರೋಬ್ಬರಿ 325 ಕೋಟಿ ರೂ. ಜೇಬಿಗಿಳಿಸಿಕೊಂಡ ಏಕೈಕ ನಟ, ಬಾಲಿವುಡ್ನ ಸ್ಟಾರ್ ರಣವೀರ್ ಸಿಂಗ್. ಧುರಂಧರ್ ಮೊದಲ ಮತ್ತು ಎರಡನೇ ಭಾಗದಿಂದ ಅತ್ಯದ್ಭುತ ಯಶಸ್ಸು ಕಂಡ ರಣವೀರ್, ಪ್ರಸ್ತುತ ಭಾರತದ ಮೋಸ್ಟ್ ವ್ಯಾಲ್ಯೂಯೆಬಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ಸುನಾಮಿ
ನಿರ್ದೇಶಕ ಆದಿತ್ಯ ಧರ್ ನಿರ್ದೇಶನದಲ್ಲಿ ಎರಡು ಭಾಗಗಳಾಗಿ ಮೂಡಿಬಂದ ‘ಧುರಂಧರ್’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆಯನ್ನು ಕಂಡಿದೆ. ಇದು ಬಂಡವಾಳ ಹೂಡಿದ ನಿರ್ಮಾಪಕರಿಗಂತು ನಿರೀಕ್ಷೆಗೂ ಮೀರಿದ ಲಾಭವನ್ನು ತಂದುಕೊಟ್ಟಿದೆ. ಜಾಗತಿಕ ಮಟ್ಟದಲ್ಲಿ ಚಿತ್ರವು ಸುಮಾರು 3,200 ಕೋಟಿ ರೂ. ಕಲೆಕ್ಷನ್ ಮಾಡಿದೆ. ಭಾರತದಲ್ಲೇ ಬರೋಬ್ಬರಿ 1,900 ಕೋಟಿ ರೂ. ಗಳಿಸಿ, ಹೊಸ ದಾಖಲೆಯನ್ನು ನಿರ್ಮಿಸಿದೆ.
ಕಿಲಾಡಿ ರಣವೀರ್
ಈ ಚಿತ್ರದ ಅಭೂತಪೂರ್ವ ಯಶಸ್ಸು ಸದ್ಯ ರಣವೀರ್ ಸಿಂಗ್ರನ್ನು ಭಾರತೀಯ ಚಿತ್ರರಂಗದ ಟಾಪ್ ನಟರ ಸಾಲಿನಲ್ಲಿ ಅಗ್ರಸ್ಥಾನಕ್ಕೇರಿಸಿದೆ. ಅಸಲಿಗೆ, ರಣವೀರ್ ಸಿಂಗ್ ಈ ಚಿತ್ರಕ್ಕೆ ಕೇವಲ ನಿರ್ದೇಶಕರು ನೀಡುವ ಸಂಭಾವನೆ ಬದಲು, ಲಾಭದಲ್ಲಿ ಪಾಲು ಪಡೆಯುವ ಚತುರ ನಿರ್ಧಾರ ಕೈಗೊಂಡಿದ್ದರು. ಚಿತ್ರದ ಮೇಕಿಂಗ್ ವೇಳೆ ಬಜೆಟ್ ಗಾತ್ರ ಮೀರಿದಾಗ, ಸ್ವತಃ ರಣವೀರ್ ತಮ್ಮ ಸ್ವಂತ ಹಣವನ್ನೂ ಚಿತ್ರದ ಮೇಲೆ ಹೂಡಿಕೆ ಮಾಡಿದ್ದರು. ಅದೆಲ್ಲವೂ ಈಗ ಅವರಿಗೆ ಡಬಲ್ ಆಗಿ ವಾಪಾಸ್ ಸೇರಿದೆ.
ದಿಗ್ಗಜರ ದಾಖಲೆಗಳೇ ಉಡೀಸ್
ಭಾರತೀಯ ಚಿತ್ರರಂಗದಲ್ಲಿ ಈವರೆಗೆ ಅತಿ ಹೆಚ್ಚು ಅಥವಾ ದುಬಾರಿ ಮೊತ್ತದ ಸಂಭಾವನೆಗಳನ್ನು ಪಡೆದ ಇತಿಹಾಸವನ್ನು ಈಗ ರಣವೀರ್ ಸಂಪೂರ್ಣವಾಗಿ ಬದಲಿಸಿದ್ದಾರೆ.
- ರಜನಿಕಾಂತ್: 2024ರಲ್ಲಿ ತೆರೆಕಂಡ 'ಜೈಲರ್' ಚಿತ್ರಕ್ಕೆ 250 ಕೋಟಿ ರೂ.ಗೂ ಅಧಿಕ ಸಂಭಾವನೆ
- ಅಲ್ಲು ಅರ್ಜುನ್, ಪ್ರಭಾಸ್: ಇತ್ತೀಚಿನ ಸಿನಿಮಾಗಳಿಗೆ 200 ಕೋಟಿ ರೂ.ಗೂ ಹೆಚ್ಚಿನ ಸಂಭಾವನೆ
- ರಣವೀರ್ ಸಿಂಗ್: ಧುರಂಧರ್ ಸಿನಿಮಾಗೆ 325 ಕೋಟಿ ರೂ.