ಸಿನಿವಾಣಿ

ತನ್ನದೇ ಸಿನಿಮಾ ಟ್ರೇಲರ್​ ಬಿಡುಗಡೆ ಸಮಾರಂಭಕ್ಕೆ ನಾಯಕ ನಟನೇ ಗೈರು!

Webdesk - Ravikanth

ಬೆಂಗಳೂರು: ನಗರದ ಜಿಟಿ ಮಾಲ್‌ನಲ್ಲಿ ನಡೆದ 'ಲವ್ ಯೂ ರಚ್ಚು' ಸಿನಿಮಾದ ಟ್ರೇಲರ್ ಲಾಂಚ್ ಸಮಾರಂಭಕ್ಕೆ ಅದೇ ಸಿನಿಮಾದ ನಾಯಕ ನಟ ಅಜಯ್ ರಾವ್ ಗೈರುಹಾಜರಾಗಿದ್ದು ಎಲ್ಲರ ಗಮನ ಸೆಳೆಯಿತು. ನಿರ್ಮಾಪಕರ ಜತೆ ನಾಯಕನಟನಿಗೆ ವೈಮನಸ್ಯ ಉಂಟಾಗಿರುವುದರಿಂದ ಅವರು ಸಮಾರಂಭಕ್ಕೆ ಬಂದಿಲ್ಲ ಎಂಬ ಮಾತುಗಳು ಕೇಳಿಬಂದವು.

ಈ ಕುರಿತು ನಿರ್ಮಾಪಕ ಗುರು ದೇಶಪಾಂಡೆ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ, ಒಂದು ಸಿನಿಮಾ ತಂಡ ಎಂದಾಗ ಸಾಮಾನ್ಯವಾಗಿ ಕೆಲವರ ನಡುವೆ ಪರಸ್ಪರ ವೈಮನಸ್ಸು ಇದ್ದೇ ಇರುತ್ತದೆ ಎಂದು ಒಪ್ಪಿಕೊಂಡರು. ಸಿನಿಮಾದಲ್ಲಿ ಅಜಯ್ ರಾವ್ ಪಾತ್ರ ನಿರ್ವಹಣೆ ಕುರಿತು ಪ್ರಶ್ನಿಸಿದಾಗ ಕೂಡ ಅವರ ಕುರಿತು ಮಾತನಾಡುವ ರೀತಿ, ನಿರ್ಮಾಪಕರ ಮನಸ್ಸಿನಲ್ಲೇನಿದೆ ಎಂಬುದಕ್ಕೆ ಸಾಕ್ಷಿಯಾಗುವಂತಿತ್ತು.

ಕೊನೆಗೆ, ಮುಂದಿನ ಪ್ರೆಸ್‌ಮೀಟ್‌ನಲ್ಲಿ ಅಥವಾ ಪ್ರಚಾರ ಸಮಾರಂಭದಲ್ಲಿ ಅಜಯ್ ರಾವ್ ಭಾಗವಹಿಸಲಿದ್ದಾರೆ ಎಂದು ಗುರು ದೇಶಪಾಂಡೆ ಹೇಳಿದರು. ಈ ಕುರಿತು ಅವರು ವಿಸ್ತೃತವಾಗಿ ಮಾತನಾಡಿದ್ದು ಏನು? ಎಂಬುದಕ್ಕೆ ಈ ವಿಡಿಯೋ ನೋಡಿ.