Hero: ಸಿನಿಮಾ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಬಂದ ನಂತರ ಅನೇಕ ಕಲಾವಿದರು ತಮಗೆ ಸಿಕ್ಕಂತಹ ಹಣದಲ್ಲಿ ಆಸ್ತಿಗಳನ್ನು ಖರೀದಿಸುತ್ತಾರೆ ಮತ್ತು ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಲ್ಲದೆ, ಐಷಾರಾಮಿ ಮನೆಯನ್ನು ನಿರ್ಮಿಸಿಕೊಳ್ಳುತ್ತಾರೆ ಹಾಗೂ ಲಕ್ಷುರಿ ಕಾರುಗಳನ್ನು ಹೊಂದುತ್ತಾರೆ. ಆದರೆ, ಈ ಹೀರೋ 25 ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲಿದ್ದರೂ, ಇಷ್ಟು ವರ್ಷಗಳಿಂದ ಸ್ವಂತ ಮನೆಯನ್ನೇ ಹೊಂದಿಲ್ಲ. ಅಚ್ಚರಿ ಸಂಗತಿ ಏನೆಂದರೆ, ಇತ್ತೀಚೆಗಷ್ಟೇ ಒಂದು ಮನೆಯನ್ನು ಖರೀದಿಸಿದ್ದಾರೆ.
ಆ ನಾಯಕ ಯಾರು ಎಂಬ ಪ್ರಶ್ನೆ ನಿಮಗೆ ಮೂಡಬಹುದು. ಆತ ಬೇರೆ ಯಾರೂ ಅಲ್ಲ, ನಟ ಸಿದ್ಧಾರ್ಥ್. ತಮಿಳು ಮತ್ತು ತೆಲುಗಿನಲ್ಲಿ ಹಲವು ಹಿಟ್‌ಗಳ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿ, ಒಂದು ಹಂತದಲ್ಲಿ ಸ್ಟಾರ್ ಹೀರೋ ಆಗಿ ಮೆರೆದ ಸಿದ್ಧಾರ್ಥ್ ಇಂದಿಗೂ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಸಿದ್ಧಾರ್ಥ್ ನಟನೆಯ 3BHK ಚಿತ್ರ ಇದೇ ಜುಲೈ 4 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಮಧ್ಯಮ ವರ್ಗದ ಕುಟುಂಬದ ಮನೆ ಹೊಂದುವ ಕನಸಿನ ಕಥೆಯನ್ನು ಆಧರಿಸಿದೆ. ಈ ಸಿನಿಮಾದ ಪ್ರಚಾರದ ಭಾಗವಾಗಿ, ಸಿದ್ಧಾರ್ಥ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸ್ವಂತ ಮನೆಯ ಬಗ್ಗೆ ಮಾತನಾಡಿದರು.
ನಾನು ಸುಮಾರು 25 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನನ್ನ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಿನಿಮಾಗಳಲ್ಲಿ ಕಳೆದಿದ್ದೇನೆ. ಆದರೆ, ಇಲ್ಲಿಯವರೆಗೆ ನಾನು ಒಂದೇ ಒಂದು ಆಸ್ತಿಯನ್ನು ಖರೀದಿಸಿಲ್ಲ. ನನಗೆ ಸ್ವಂತ ಮನೆ ಅಥವಾ ಭೂಮಿ ಇಲ್ಲ. ಈಗ ನಾನು ಮದುವೆಯಾಗಿದ್ದು, ನನ್ನ ಜವಾಬ್ದಾರಿಗಳು ಹೆಚ್ಚಿವೆ. ಅದಕ್ಕಾಗಿಯೇ ನಾನು ಎರಡು ತಿಂಗಳ ಹಿಂದೆ ನನ್ನ ಸ್ವಂತ ಮನೆಯನ್ನು ಖರೀದಿಸಿದೆ. ಅದು ನನಗೆ ಮತ್ತು ಅದಿತಿಗೆ ಸಾಮಾನ್ಯವಾದ ಕನಸಿನ ಮನೆ. ನಮಗಿಬ್ಬರಿಗೂ ಮನೆ ಹೊಂದುವ ಭರವಸೆಯೊಂದಿಗೆ ನಾವು ಅದನ್ನು ಖರೀದಿಸಿದ್ದೇವೆ. ನಾನು ಮದುವೆಯಾಗಿ ಮನೆ ಖರೀದಿಸುವ ಕ್ಷಣಕ್ಕಾಗಿ ನನ್ನ ಪೋಷಕರು ಕಾಯುತ್ತಿದ್ದರು. ಅವರ ಆಸೆಗಳು ಈಡೇರಿವೆ ಎಂದು ಸಿದ್ಧಾರ್ಥ್ ಹೇಳಿದರು.
ಅಂದಹಾಗೆ, ಕೆಲವು ತಿಂಗಳ ಹಿಂದೆ ಸಿದ್ಧಾರ್ಥ್ ಅವರು ನಾಯಕಿ ಅದಿತಿ ರಾವ್ ಹೈದರಿ ಅವರನ್ನು ಮದುವೆಯಾದರು. ಇದು ಪ್ರೇಮ ವಿವಾಹ. ಗಮನಾರ್ಹ ಸಂಗತಿ ಏನೆಂದರೆ, ಇಬ್ಬರಿಗೂ ಇದು ಎರಡನೇ ವಿವಾಹ. ಮದುವೆಯ ನಂತರ, ಸಿದ್ಧಾರ್ಥ್ ಅವರು ಸ್ವಂತ ಮನೆಯನ್ನು ಖರೀದಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ನಾಯಕನಾಗಿ ಹಣ ಸಂಪಾದಿಸುತ್ತಿದ್ದರೂ, ಅವರಿಗೆ ಸ್ವಂತ ಮನೆ ಇರಲಿಲ್ವಾ ಎಂದು ತಿಳಿದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. (ಏಜೆನ್ಸೀಸ್)