ಕಾಸ್ಟಿಂಗ್ ಕೌಚ್ ಬಗ್ಗೆ ಅನುಭವ ಹಂಚಿಕೊಂಡ ನಟಿ ನಿತಿ ಟೈಲರ್ 
ಸಿನಿವಾಣಿ

'ಹೀರೋಯಿನ್ ಆಗ್ಬೇಕಾದ್ರೆ ನನ್ನ ಜೊತೆ ಮಲಗ್ಬೇಕು ಅಂದ!': ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ Niti Taylor

'ಹೀರೋಯಿನ್ ಆಗ್ಬೇಕಾದ್ರೆ ನನ್ನ ಜೊತೆ ಮಲಗ್ಬೇಕು ಅಂದ!' ತೆಲುಗು ನಿರ್ದೇಶಕನ ಕಾಸ್ಟಿಂಗ್ ಕೌಚ್ ಕರಾಳ ಮುಖ ಬಿಚ್ಚಿಟ್ಟ ನಟಿ ನಿತಿ ಟೈಲರ್; ಇಂಡಸ್ಟ್ರಿ ಬಿಟ್ಟ ಹಿಂದಿನ ಅಸಲಿ ಕಾರಣ ಇಲ್ಲಿದೆ.

ಮುಂಬೈ: "ಕೈಸಿ ಹೆ ಯಾರಿಯಾ" ವೆಬ್​ ಸೀರಿಸ್​ ಮೂಲಕ ಜನ ಮನ್ನಣೆ ಪಡೆದ ನಟಿ ಎಂದರೆ ಅದು ನಿತಿ ಟೈಲರ್​. ಆದರೆ ಇಕೆ ತನ್ನ ನಟನೆ ಗಿಂತ ತನ್ನ ವೈಯಕ್ತಿಕ ಜೀವನದಲ್ಲಿ ನಡೆದ ಕೆಲ ಘಟನೆಗಳ ಮೂಲಕವೇ ಖ್ಯಾತಿಗಳಿಸಿದ್ದು, ಎಂದರೂ ತಪ್ಪಾಗದು.

ಸಿನಿಮಾರಂಗದಲ್ಲಿ ಈ ಕಾಸ್ಟಿಂಗ್​ ಕೌಚ್​​ ಎಂಬ ಪಿಡುಗಿನ ಬಗ್ಗೆ ಅನೇಕ ವದಂತಿ ಮತ್ತು ಆರೋಗಳು ಕೇಳಿಬರುತ್ತಲೇ ಇರುತ್ತದೆ. ಅನೇಕ ನಟಿಯರು ಇದರ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿರುವ ಸನ್ನಿವೇಶಗಳು ಇದೆ. ಈಗ ತಾನು ಅನುಭವಿಸಿದ ಕಾಸ್ಟಿಂಗ್​ ಕೌಚ್​ ಬಗ್ಗೆ ನಿತಿ ಟೈಲರ್​ ಮೌನ ಮುರಿದಿದ್ದಾರೆ.

ನನ್ನ ಜೊತೆ ಮಲಗಬೇಕೆಂದ!

ಕಾಸ್ಟಿಂಗ್​ ಕೌಚ್ ಅನುಭವದ ಬಗ್ಗೆ ಮಾತನಾಡಿರುವ ನಿತಿ ಟೈಲರ್​, ನಾನು ಆಗ, ನನ್ನ ಮೊದಲ ಸಿನಿಮಾವನ್ನು ತೆಲುಗು ಇಂಡಸ್ಟ್ರಿಯಲ್ಲಿ ಮಾಡಿದ್ದೆ. ನಂತರ ನನಗೆ ಅನೇಕ ಅವಕಾಶಗಳು ಬರುತ್ತಿದ್ದವು. ಒಂದು ದಿನ ನನ್ನ ಮೊದಲ ಸಿನಿಮಾದ ನಿರ್ದೇಶಕ ನನಗೆ ಕರೆ ಮಾಡಿ, ನಾನು ಈಗ ಇನ್ನೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದೆನೆ, ಇದಕ್ಕೆ ನಿನೇ ನಾಯಕ ನಟಿಯಾಗಿ ಕಾಣಿಸಿಕೊಳ್ಳಬೇಕು. ಆದರೆ, ಈ ಸಲ ನೀನು ಹಿರೋಯಿನ್​ ಆಗಬೇಕೆಂದರೆ, ನನ್ನ ಜೊತೆ ಮಲಗಬೇಕೆಂದ.

ನನಗೆ ಆ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾತನಾಡಬೇಕೆಂದು? ತಿಳಿಯಲಿಲ್ಲ. ಕೂಡಲೇ ಕಾಲ್​ ಅನ್ನು ಕಟ್​ ಮಾಡಿದೆ. ಆ ನಿರ್ದೇಶಕನ ನಂಬರ್​ ಅನ್ನು ಬ್ಲಾಕ್​ ಮಾಡಿದೆ. ನಂತರ ನನ್ನ ಅಮ್ಮನ ಜೊತೆ ಈ ಬಗ್ಗೆ ಮಾತನಾಡಿದೆ ಎಂದು ನಿತಿ ತಿಳಿಸಿದ್ದಾರೆ.

ನಿರ್ದೇಶಕನ ಹೆಸರನ್ನು ಹೇಳಲು ಇಚ್ಚಿಸದ ನಟಿ, ಆ ನಿರ್ದೇಶನ ತನ್ನ ಸುತ್ತಲೂ ಹುಡುಗಿಯರನ್ನು, ಸಿನಿಮಾ ರಂಗಕ್ಕೆ ಆಗ ತಾನೇ ಕಾಲಿಟ್ಟವರನ್ನು ಇಟ್ಟುಕೊಂಡು ತಿರುತ್ತಿದ್ದ. ನನಗೆ ಅವನ ನಡತೆ ಬಗ್ಗೆ ತಿಳಿದಾಗ, ನನಗೆ ಅಸಹ್ಯವೆನಿಸಿತು. ಖಂಡಿತ ಅವನು ನನ್ನ ಜೊತೆ ಮಾತ್ರವಲ್ಲ, ಇನ್ನೂ ಹಲವಾರು ಜನರೊಟ್ಟಿಗೆ ಈ ರೀತಿಯಾಗಿ ನಡೆದುಕೊಂಡಿರುತ್ತಾನೆಂದು ನಟಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಂತರ, ನನಗೆ ಸಿನಿಮಾದಲ್ಲಿ ಅದರಲ್ಲೂ ತೆಲುಗು ಇಂಡಸ್ಟ್ರಿಯಲ್ಲೇ ಕೆಲಸ ಮಾಡಲು ಮನಸ್ಸು ಬರಲಿಲ್ಲ. ಹೀಗಾಗಿ ನಾನು ಸಿನಿಮಾ ಕ್ಷೇತ್ರದಿಂದ ಬಹುದೂರವೇ ಉಳಿದುಬಿಟ್ಟೆ ಎಂದು ನಿತಿ ಟೈಲರ್ ತಿಳಿಸಿದ್ದಾರೆ.

ಬಾಯ್​​ಫ್ರೆಂಡ್​ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ!

ಇನ್ನು ತನ್ನ ಲವ್​ ಲೈಫ್​ ಬಗ್ಗೆ ಮಾತನಾಡಿರುವ ನಟಿ, ತನ್ನ ಮಾಜಿ ಬಾಯ್​ಫ್ರೆಂಡ್​ ವಿರುದ್ಧ ಹರಿಹಾಯ್ದಿದ್ದಾಳೆ. ಅವನು ದೊಡ್ಡ ಪಾರ್ಟಿ ಪ್ರೇಮಿ ಆಗಿದ್ದ. ಆದರೆ ನನಗೆ ಈ ಪಾರ್ಟಿ ಎಲ್ಲಾ ಇಷ್ಟವಾಗುತ್ತಿರಲಿಲ್ಲ, ಅದಿಕ್ಕೆ ನಾನು ಅವನು ಪಾರ್ಟಿಯಿಂದ ಆದಷ್ಟು ಬೇಗ ಹೊರಬರುತ್ತಿದೆ. ಒಂದು ದಿನ ಹೀಗೆ ಅವನ ಪಾರ್ಟಿಯಿಂದ ಮಧ್ಯದಿಂದ ಹೊರಬಂದೆ. ಅವನಿಗೆ ಅದು ಇಷ್ಟವಾಗಲಿಲ್ಲ. ನನ್ನ ಮೇಲೆ ರೇಗಿದ. ನೀನು ನನಗೆ ಅವಮಾನ ಮಾಡುತ್ತಿದ್ದಿಯಾ, ನಿನೇಕೆ ನನ್ನ ಪಾರ್ಟಿಯಿಂದ ಓಡಿ ಹೋಗುತ್ತಿಯಾ? ಎಂದು ಕಿರುಚಿ ನನ್ನ ಕೆನ್ನೆಗೆ ಬಾರಿಸಿದ, ನನ್ನನ್ನು ಆಚೆ ತಳ್ಳಿದ. ಇಷ್ಟಕ್ಕೆ ನಿಲ್ಲದ ಅವನು ಸಿಗರೇಟಿನಿಂದ ನನ್ನ ಕೈ-ಮೈಯನ್ನು ಕೂಡ ಸುಟ್ಟಿದ್ದಾನೆಂದು ನಿತಿ ಟೈಲರ್​ ದುಃಖ ವ್ಯಕ್ತಪಡಿಸಿದ್ದಾಳೆ, (ಏಜೆನ್ಸೀಸ್​).