ಸದ್ಯ ನಟಿ ರಮ್ಯಾ ಅವರು ಸದ್ಯ ಸಿನಿಮಾ, ರಾಜಕೀಯಗಳಿಂದೆಲ್ಲ ದೂರ ಉಳಿದಿದ್ದಾರೆ. ಆದರೆ ತಮ್ಮ ಇನ್ಸ್ಟಾಖಾತೆಯಲ್ಲಿ ಸದಾ ಸಕ್ರಿಯರಾಗಿದ್ದಾರೆ.
ಹಾಗೇ ಇಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೂ ರಮ್ಯಾ ಶುಭಕೋರಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸುದೀಪ್ ಅವರು ನಗುತ್ತ ಕುಳಿತಿರುವ ಫೋಟೋ ಹಾಕಿ, ನಿಮ್ಮ ಜನ್ಮದಿನದಂದು ತುಂಬ ತುಂಬ ಪ್ರೀತಿಯಿಂದ ವಿಶ್ ಮಾಡುತ್ತಿದ್ದೇನೆ ಸು..!, ಯಾವತ್ತೂ ಹೀಗೆ ನಗುತ್ತಿರಿ ಎಂದು ಪೋಸ್ಟ್ ಹಾಕಿದ್ದಾರೆ.
ಕಿಚ್ಚಹುಚ್ಚ, ಮುಸ್ಸಂಜೆ ಮಾತು, ರಂಗ ಎಸ್ಎಸ್ಎಲ್ಸಿ ಇತ್ಯಾದಿ ಸಿನಿಮಾಗಳಲ್ಲಿ ಸುದೀಪ್ ಮತ್ತು ರಮ್ಯಾ ಒಟ್ಟಾಗಿ ನಟಿಸಿದ್ದಾರೆ. ಇವರಿಬ್ಬರ ನಡುವೆ ಒಂದು ಹಂತದಲ್ಲಿ ಮನಸ್ತಾಪವೂ ಮೂಡಿತ್ತು ಎಂದೂ ಹೇಳಲಾಗುತ್ತದೆ. ಆದರೆ ಈಗಂತೂ ರಮ್ಯಾ ಸಿನಿರಂಗದಿಂದಲೂ ದೂರವೇ ಇದ್ದಾರೆ. ಸುದೀಪ್ ಕೂಡ ತಮ್ಮ ಫಿಲ್ಮ್, ಬಿಗ್ಬಾಸ್ ಶೋಗಳಲ್ಲಿ ಬಿಜಿಯಾಗಿದ್ದಾರೆ. ಆದರೂ ಇವರಿಬ್ಬರ ಮಧ್ಯೆ ಸ್ನೇಹವಿದೆ ಎಂಬುದಕ್ಕೆ ಇಂದು ರಮ್ಯಾ ಪ್ರೀತಿಯಿಂದ ಮಾಡಿದ ಜನ್ಮದಿನದ ಶುಭಾಶಯವೇ ಸಾಕ್ಷಿ.