ಸೆನ್ಸಾರ್ ಮಂಡಳಿಯಿಂದ 'ಜನನಾಯಗನ್' ಚಿತ್ರಕ್ಕೆ ಸಿಕ್ತು ಹಸಿರು ನಿಶಾನೆ 
ಸಿನಿವಾಣಿ

ದಳಪತಿ ಅಭಿಮಾನಿಗಳಿಗೆ ಸಿಹಿ ಸುದ್ದಿ: 'ಜನನಾಯಗನ್' ಬಿಡುಗಡೆಗೆ CBFC ಹಸಿರು ನಿಶಾನೆ; ವಿಜಯ್​ ಕೊನೆಯ ಸಿನಿಮಾ ಬಿಡುಗಡೆ ಯಾವಾಗ? Jananayagan

ಪ್ರಮುಖ ಮುಖ್ಯಾಂಶಗಳು

  • ದಳಪತಿ ವಿಜಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್!
  • ಸೆನ್ಸಾರ್ ಮಂಡಳಿಯಿಂದ 'ಜನನಾಯಗನ್' ಚಿತ್ರಕ್ಕೆ ಸಿಕ್ತು ಹಸಿರು ನಿಶಾನೆ
  • ಜುಲೈ ಅಥವಾ ಆಗಸ್ಟ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ
ಚೆನ್ನೈ: ಕಾಲಿವುಡ್​ ನಟ ಹಾಗೂ ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಜೋಸೆಫ್​ ವಿಜಯ್​ ಅಲಿಯಾಸ್​ ದಳಪತಿ ವಿಜಯ್​ ಅವರ ಕೊನೆಯ ಸಿನಿಮಾ ಜನನಾಯಗನ್​​ (Jananayagan) ಸಿನಿಮಾಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಬಿಡುಗಡೆಗೆ ಹಸಿರು ನಿಶಾನೆ ನೀಡಿದೆ ಎಂದು ತಿಳಿದುಬಂದಿದೆ.
ಜನವರಿ 9 ರಂದು ತೆರೆಕಾಣಲು ಸಿದ್ದವಾಗಿದ್ದ ಈ ಸಿನಿಮಾ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ನಡುವೆ ವ್ಯತ್ಯಾಸ ಉಂಟಾದ ಹಿನ್ನಲೆಯಲ್ಲಿ ಚಿತ್ರದ ಬಿಡುಗಡೆ ವಿಳಂಬವಾಗಿತ್ತು.

'A' ಸರ್ಟಿಫಿಕೇಟ್​ ನೀಡಿರುವ ಮಂಡಳಿ

ದಳಪತಿ ವಿಜಯ್​ ಕಾಣಿಸಿಕೊಳ್ಳುತ್ತಿರುವ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿರುವ ಈ ಜನನಾಯಗ್​ ಸಿನಾಮಾಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) 'A' ಸರ್ಟಿಫಿಕೇಟ್​ (18 ವರ್ಷ ಮೇಲ್ಪಟ್ಟವರಿಗೆ ಮಾತ್ರ) ಅನ್ನು ನೀಡಿದೆ ಎಂಬ ಮಾಹಿತಿ ದೊರೆತಿದೆ.
ಜನವರಿ ತಿಂಗಳನ್ನೇ ಈ ಸಿನಿಮಾ ಬಿಡುಗಡೆಗೆ ತಯಾರಾಗಿದ್ದ ಸಂದರ್ಭದಲ್ಲಿ, ಚಲನಚಿತ್ರ ಪ್ರಮಾಣೀಕರಣ ಮಂಡಳಿ ಮತ್ತೊಮ್ಮೆ ಸಿನಿಮಾವನ್ನು ವಿಮರ್ಶೆಗೆ ಒಳಪಡಿಸಿದ್ದನ್ನು ವಿರೋಧಿಸಿ ಸಿನಿಮಾ ತಂಡ ಕಾನೂನಿನ ಸಮರಕ್ಕೆ ಸಿದ್ಧವಾಗಿತ್ತು. ಆದರೆ ಇದು ಮಾತಿಕತೆ ಮೂಲಕ ಪರಿಹಾರವನ್ನು ಕಂಡುಕೊಂಡಿತ್ತು.

ಸಿನಿಮಾ ಯಾವಾಗ ತೆರೆಕಾಣಲಿದೆ?

ಲಭ್ಯ ಮಾಹಿತಿ ಪ್ರಕಾರ, ನಿರ್ದೇಶಕ ಎಚ್​, ವಿನೋತ್​ ಜುಲೈ ತಿಂಗಳಲ್ಲೇ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. ಜುಲೈ 16 ಅಥವಾ ಜುಲೈ 23 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂಬ ಮಾಹಿತಿ ದೊರೆತಿದೆ. ಆದರೆ ಜುಲೈ 31 ರಂದು ವಿಜಯ್​ ಪುತ್ರ ಜೇಸನ್​ ನಿರ್ದೇಶನದ ಚೊಚ್ಚಲ ಸಿನಿಮಾ ಸಿಗ್ಮಾ ಬಿಡುಗಡೆಯಾಗುತ್ತಿರುವ ಹಿನ್ನಲೆ, ಜನನಾಯಗನ್​ ಸಿನಿಮಾ ಅಗಸ್ಟ್​ ತಿಂಗಳ ಮೊದಲ ವಾರ ತೆರೆಕಾಣಬಹುದು ಎನ್ನುವುದು ಸಿನಿಮಾ ತಜ್ಞರ ಅಭಿಪ್ರಾಯವಾಗಿದೆ, (ಏಜನ್ಸೀಸ್​).