ಮನೋಜ್ ಕುಮಾರ್ ನಿರ್ದೇಶನದ ಪ್ರೇಮದ ಊರಲಿ ಸಿನಿಮಾ ಹವಾ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಬಹುಭಾಷಾ ನಟಿ ಜೆನಿಲಿಯಾ ಅವರ ಇನ್ಸ್ಟಾ ಪೋಸ್ಟ್.
ಹೌದು, ಜೆನಿಲಿಯಾ ಅವರು ತಮ್ಮ ಸುಂದರ ಫೋಟೋಗಳಿಗೆ ಪ್ರೇಮದ ಊರಲಿ ಸಿನಿಮಾದ ಟೈಟಲ್ ಸಾಂಗ್ ಹಾಕಿಕೊಂಡಿದ್ದಾರೆ. ಈ ಮೂಲಕ ಆ ಹಾಡನ್ನು ನಟಿ ಜೆನಿಲಿಯಾ ಪರೋಕ್ಷವಾಗಿ ನೆಚ್ಚಿಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಜೊತೆಗೆ ಸಾಂಗ್ ಯಾವ ಮಟ್ಟಕ್ಕೆ ಟ್ರೆಡಿಂಗ್ನಲ್ಲಿದೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಸಾಕ್ಷಿ ಇಲ್ಲ.
ಜೆನಿಲಿಯಾ ನಟನೆಯ 'ಗನ್ಮಾಸ್ಟರ್ ಜಿ9' ಸಿನಿಮಾದ 'ದೋ ದಿನ್ ಕಿ ಜಿಂದಗಿ' ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಜೆನಿಲಿಯಾ ಎಂಬೆಲಿಶ್ಡ್ ಕ್ರಾಪ್ಡ್ ಜಾಕೆಟ್ ಅನ್ನು ಒಳಗೊಂಡ ಲುಕ್ ಅನ್ನು ಧರಿಸಿದ್ದರು ದೆಹಲಿಯ ವಿನ್ಯಾಸಕಿ ಗಜಲ್ ಗುಪ್ತಾ ಅವರ ಈ ವಿನ್ಯಾಸವು, ರುಚ್ಡ್ ಸ್ಕರ್ಟ್, ಜಾಕೆಟ್ನ ಕೈಯ ಅಂಚಿನಲ್ಲಿ ಮಣಿಗಳಿಂದ ಮಾಡಿದ ಟಾಸೆಲ್ಗಳು ಅಂದವನ್ನು ಹೆಚ್ಚಿಸಿತ್ತು.
ಜೆನಿಲಿಯಾ ದೇಶ್ಮುಖ್ ಕನ್ನಡದಲ್ಲಿ ನಟಿಸಿದ್ದಾರೆ. ಶಿವಣ್ಣ ಅವರ ಸತ್ಯ ಇನ್ ಲವ್ ಹಾಗೂ ಇತ್ತೀಚೆಗೆ ರಿಲೀಸ್ ಆಗಿದ್ದ ಜೂನಿಯರ್ನಲ್ಲಿ ಮಿಂಚಿದ್ದರು, (ಏಜೆನ್ಸೀಸ್).