ಸಿನಿವಾಣಿ

ಬಿಗ್​ಬಾಸ್​ನಿಂದ ಹೊರಬಂದ ಗೀತಾ ಭಾರತಿ ಭಟ್!

Webdesk - Ravikanth

ಬೆಂಗಳೂರು: ಕನ್ನಡದ ‘ಬಿಗ್​ಬಾಸ್’ ಸೀಸನ್ 8ರ ಮೂರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಭಾನುವಾರ ಬಿಗ್ ಮನೆಯಿಂದ ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ಹೊರಬಂದಿದ್ದಾರೆ. ಟಾಸ್ಕ್ ವಿಚಾರದಲ್ಲಿ ಒಂದಿಲ್ಲೊಂದು ಹಿನ್ನಡೆ ಅನುಭವಿಸುತ್ತಿದ್ದ ಗೀತಾ, ಬಿಗ್ ಮನೆಯಲ್ಲಿ ಇದ್ದಷ್ಟು ದಿನ ಕಣ್ಣೀರು ಹಾಕುವುದರ ಮೂಲಕವೇ ಸುದ್ದಿಯಲ್ಲಿದ್ದರು. ಸಣ್ಣ ಸಣ್ಣ ವಿಚಾರಕ್ಕೂ ಭಾವುಕರಾಗುತ್ತಾರೆ ಎಂಬ ಆರೋಪ ಇತ್ತು. ಅದೆಲ್ಲದರ ಪರಿಣಾಮವಾಗಿ ಭಾನುವಾರ ಮನೆಯಿಂದ ಔಟ್ ಆಗಿದ್ದಾರೆ.

ಅಂದಹಾಗೆ, ಪ್ರಶಾಂತ್ ಸಂಬರಗಿ, ಅರವಿಂದ್, ದಿವ್ಯಾ ಸುರೇಶ್, ನಿಧಿ ಸುಬ್ಬಯ್ಯ ಶನಿವಾರವೇ ಸೇಫ್ ಆಗಿದ್ದರು. ಇನ್ನುಳಿದಂತೆ ಶಮಂತ್ ಗೌಡ, ಗೀತಾ ಭಟ್, ರಘು ಗೌಡ, ವಿಶ್ವನಾಥ್ ಮತ್ತು ದಿವ್ಯಾ ಉರುಡುಗ ಪೈಕಿ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿತ್ತು. ಅದರಂತೆ ಗೀತಾ ಎಲಿಮಿನೇಟ್ ಆಗಿದ್ದಾರೆ.