ಸಿನಿವಾಣಿ

'ಮಗ ಆರ್ಯನ್ ಮಸ್ಲಿಂ ಅಂತಾ ಹೆಮ್ಮೆಯಿಂದ ಹೇಳುತ್ತಾನೆ'ಮಗನ ಧರ್ಮ ಆಯ್ಕೆ ಬಗ್ಗೆ ಗೌರಿ ಏನಂದ್ರು ನೋಡಿ...! |Gauri Khan on caste

ಶಾರುಖ್ ಖಾನ್ ಮುಸ್ಲಿಂ ಹಾಗೂ ಗೌರಿ ಹಿಂದು ಆಗಿರುವ ಕಾರಣ ಮಕ್ಕಳು ಯಾವ ಧರ್ಮವನ್ನು ಪಾಲಿಸುತ್ತಾರೆಂದು ಕಾಫಿ ವಿಥ್​​ ಕರಣ್​ ಶೋನಲ್ಲಿ ಕರಣ್​ ಈ ಹಿಂದೆ ಗೌರಿ ಖಾನ್​ ಅವರನ್ನ ಪ್ರಶ್ನೆ ಮಾಡಿದ್ದರು. ಶಾರುಖ್ ಖಾನ್ ಮುಸ್ಲಿಂ ಹಾಗೂ ಗೌರಿ ಹಿಂದು ಆಗಿರುವ ಕಾರಣ ಮಕ್ಕಳು ಯಾವ ಧರ್ಮವನ್ನು ಪಾಲಿಸುತ್ತಾರೆ ಅನ್ನೋದು ಕರಣ್ ಪ್ರಶ್ನೆ ಆಗಿತ್ತು.

ಇದಕ್ಕೆ ಉತ್ತರಿಸಿದ ಶಾರುಖ್​​ ಪತ್ನಿ ಗೌರಿ ಖಾನ್​, ನಾನು ಶಾರುಖ್ ಖಾನ್ ಧರ್ಮವನ್ನು ಗೌರವಿಸುತ್ತೀನಿ ಹಾಗಂತ ನಾನು ಧರ್ಮ ಬದಲಾಯಿಸಬೇಕು ಕನ್ವರ್ಟ್ ಆಗಬೇಕು ಅಂತೇನು ಇಲ್ಲ. ಮತಾಂತರದಲ್ಲಿ ನನಗೆ ಯಾವುದೇ ನಂಬಿಕೆ ಇಲ್ಲ. ಪ್ರತಿಯೊಬ್ಬರು ತಮ್ಮಗೆ ಇಷ್ಟವಾಗುವ ಧರ್ಮವನ್ನು ಪಾಲಿಸಬೇಕು ಅದು ನಮ್ಮ ಹಕ್ಕು ನಮ್ಮ ಸ್ವಾತಂತ್ರ್ಯ. ಹಾಗಂತ ಯಾವುದೇ ರೀತಿಯಲ್ಲಿ ಅಗೌರವ ತೋರಿಸಬಾರದು. ಶಾರುಖ್ ಖಾನ್ ಇದುವರೆಗೂ ನನ್ನ ಧರ್ಮವನ್ನು ಅಗೌರವಿಸಿಲ್ಲ' ಎಂದು ಗೌರಿ ಖಾನ್ ಮಾತನಾಡಿದ್ದರು.

ಇನ್ನು ಮಗ ಆರ್ಯನ್​ ಖಾನ್​ ಯಾವ ಧರ್ಮವನ್ನ ಪಾಲಿಸುತ್ತಾನೆ ಎಂಬುದರ ಕುರಿತಂತೆಯೂ ಗೌರಿ ಮಾತನಾಡಿದ್ದರು.

'ಶಾರುಖ್ ಖಾನ್‌ ಪಕ್ಕಾ ಫಾಲೋವರ್ಸ್‌ ನನ್ನ ಹಿರಿಯ ಮಗ ಆರ್ಯನ್ ಖಾನ್ ಹೀಗಾಗಿ ಶಾರುಖ್ ನಡೆಸಿಕೊಂಡು ಬರುವುದನೇ ಆತ ಕೂಡ ಮಾಡುವುದು ಅಲ್ಲದೆ ಆತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ ನಾನು ಮುಸ್ಲಿಂ ಅಂತ' ಎಂದು ಗೌರಿ ಖಾನ್ ಹೇಳಿದ್ದರು. ಆರ್ಯನ್ ಖಾನ್ ಈ ರೀತಿ ಹೇಳುವುದಕ್ಕೆ ಗೌರಿ ಮನೆಯಲ್ಲಿ ಹೇಗೆ ರಿಯಾಕ್ಟ್‌ ಮಾಡುತ್ತಾರೆ ಎಂದು ಮರು ಪ್ರಶ್ನೆ ಮಾಡಿದಾಗ 'ನಾನು ಮುಸ್ಲಿಂ ಎಂದು ನನ್ನ ತಾಯಿಗೆ ಆರ್ಯನ್ ಹೇಳುತ್ತಾನೆ ಆಗ ಅಕೆ ನೀನು ಏನು ಹೇಳುತ್ತಿದ್ಯಾ ಎಂದು ಜೋರು ಮಾಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಬೇಸರ ಮಾಡಿಕೊಳ್ಳುವುದಿಲ್ಲ. ಇನ್ನು ಹೇಳಬೇಕು ಅಂದ್ರೆ ಇದನ್ನು ಆಕೆ ಕೂಡ ಡೀಲ್ ಮಾಡುತ್ತಿದ್ದಾಳೆ ಆದರೆ ಇದು ಸತ್ಯ' ಎಂದಿದ್ದಾರೆ ಗೌರಿ.

ಆರ್ಯನ್ ಖಾನ್ ರಾತ್ರಿ ಸಮಯದಲ್ಲಿ ಪ್ರಾರ್ಥನೆ ಮಾಡಿನೇ ಮಲಗುವುದು..ಮೊದಲು ಅಮ್ಮ ಮಾಡುವ ಪ್ರಾರ್ಥನೆ ಮಾಡುತ್ತೀನಿ ಆನಂತರ ಅಪ್ಪ ಮಾಡುವ ಪ್ರಾರ್ಥನೆ ಮಾಡುತ್ತೀನಿ ಎನ್ನುತ್ತಾನೆ' ಎಂದು ಗೌರಿ ಹೇಳಿದ್ದಾರೆ.