ಸಿನಿವಾಣಿ

PHOTOS| ವಿಶ್ವದ ಅತ್ಯಂತ ವಿಷಕಾರಿ ಹಾವನ್ನೇ ನುಂಗಿದ ಕಪ್ಪೆ: ಸಾಕಷ್ಟು ಬಾರಿ ಹಾವು ಕಚ್ಚಿದರು ಬದುಕುಳಿದಿರುವುದೇ ಅಚ್ಚರಿ!

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಬಹಳ ಅಪರೂಪದ ಘಟನೆಯೊಂದರಲ್ಲಿ ಹಸಿರು ಮರದ ಕಪ್ಪೆಯೊಂದು ಅತ್ಯಂತ ವಿಷಕಾರಿಯಾದ ಹಾವಿನಿಂದ ಸಾಕಷ್ಟು ಬಾರಿ ಕಚ್ಚಿಸಿಕೊಂಡರೂ ಅದನ್ನು ನಂಗು ಹಾಕಿ ಬದುಕುಳಿದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಕಪ್ಪೆಯು ಕೋಸ್ಟಾಲ್​ ತೈಪಾನ್​ ಹೆಸರಿನ ವಿಷಕಾರಿ ಹಾವನ್ನು ನುಂಗು ಹಾಕಿದೆ. ಇದು ವಿಶ್ವದಲ್ಲೇ ತುಂಬಾ ವಿಷಕಾರಿಯಾದ ಹಾವುಗಳಲ್ಲಿ ಒಂದಾಗಿದೆ. ಸೋಜಿಗವೆಂದರೆ ಹಾವನ್ನು ನುಂಗಿದ ಕಪ್ಪೆ ಆರಾಮವಾಗಿ ಓಡಾಡಿಕೊಂಡಿದೆ.

ಟೌನ್ಸ್​ವಿಲ್ಲೆ ಹೆಸರಿನ ಫೇಸ್​ಬುಕ್​ ಫೇಜ್​ನಲ್ಲಿ ಈ ಸ್ಟೋರಿಯನ್ನು ಫೆ. 4ರಂದು ಹಂಚಿಕೊಳ್ಳಲಾಗಿದೆ. ಹಾವನ್ನು ನುಂಗುತ್ತಿರುವ ಕಪ್ಪೆಯ ಫೋಟೋವನ್ನು ಶೇರ್​ ಮಾಡಿಕೊಂಡು, ವಿಶ್ವದಲ್ಲೇ 3ನೇ ವಿಷಕಾರಿ ಹಾವಾದ ಕೋಸ್ಟಾಲ್​ ತೈಪಾನ್​ ಅನ್ನು ಕಪ್ಪೆಯ ತಿಂದುಹಾಕಿದೆ. ಹಾವನ್ನು ರಕ್ಷಣೆ ಮಾಡಲಾಗಲಿಲ್ಲ. ಆದರೆ, ತಿನ್ನುವ ಮುನ್ನ ಸಾಕಷ್ಟು ಬಾರಿ ಕಡಿತಕ್ಕೊಳಗಾದರೂ ಕಪ್ಪೆಯು ಬದುಕುಳಿಯಲಿದೆ ಎಂಬ ಭರವಸೆ ಇದೆ ಎಂದು ಅಡಿಬರಹ ಬರೆಯಲಾಗಿದೆ.

ಈ ಸ್ಟೋರಿಯನ್ನು ಹಂಚಿಕೊಂಡ ದಿನದಿಂದ ಈವರೆಗೂ ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, ಸಾವಿರಾರು ಮಂದಿ ಶೇರ್​ ಕೂಡ ಮಾಡಿಕೊಂಡಿದ್ದು, ಅನೇಕ ನೆಟ್ಟಿಗರು ಕಪ್ಪೆ ಕುರಿತು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)