ಜೇಮ್್ಸ ಬಾಂಡ್ ಸರಣಿಯ ‘ನೋ ಟೈಮ್ ಟು ಡೈ’ ಚಿತ್ರ ಗುರುವಾರವಷ್ಟೇ ಎಲ್ಲೆಡೆ ಬಿಡುಗಡೆಯಾಗಿ, ಪ್ರಶಂಸೆ ಪಡೆಯುತ್ತಿದೆ. ಜೇಮ್್ಸ ಬಾಂಡ್ ಎಂಬಾತ ಬ್ರಿಟಿಷ್ ಸೀಕ್ರೆಟ್ ಸರ್ವೀಸ್ನ ಏಜೆಂಟ್ ಆದರೂ, ಗೂಢಾಚಾರಿಕೆಯ ಚಿತ್ರಗಳೆಂದರೆ ಅದು ಬಾಂಡ್ ಚಿತ್ರಗಳೆಂದೇ ಜನಪ್ರಿಯ. ಯಾವಾಗ ಬಾಂಡ್ ಚಿತ್ರಗಳು ಜನಪ್ರಿಯವಾದವೋ, ಬೇರೆ ಭಾಷೆಗಳಲ್ಲೂ ಬಾಂಡ್ ಮಾದರಿಯ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಕನ್ನಡದಲ್ಲಿ ಬಿಡುಗಡೆಯಾದ ಬಾಂಡ್ ಶೈಲಿಯ ಮೊದಲ ಚಿತ್ರ ಎಂದರೆ ಅದು ಡಾ. ರಾಜಕುಮಾರ್ ಅಭಿನಯದ ‘ಜೇಡರ ಬಲೆ’. ಈ ಚಿತ್ರದಲ್ಲಿ ಸಿಐಡಿ 999 ಆಗಿ ಎಲ್ಲರ ಮನಗೆದ್ದಿದ್ದರು ಡಾ. ರಾಜ್.