ಸಿನಿವಾಣಿ

'ಬ್ಯಾಡ್​ ಮ್ಯಾನರ್ಸ್'​​ ನಂತ್ರ ಸ್ಯಾಂಡಲ್​ವುಡ್​ಗೆ ದುನಿಯಾ ಸೂರಿ ಕಂಬ್ಯಾಕ್; 'ಕಾಗೆ ಬಂಗಾರ' ಸಿನಿಮಾದ ಫಸ್ಟ್ ಗ್ಲಿಂಪ್ಸ್​ ರಿಲೀಸ್.. Kaage Bangara

  • ದುನಿಯಾ ಸೂರಿ ನಿರ್ದೇಶನದ ಕಾಗೆ ಬಂಗಾರ ಸಿನಿಮಾದ ಟೀಸರ್​ ರಿಲೀಸ್

  • ಚಾಕ್ಲೇಟ್ ಬಾಯ್​ ಆಗಿ ನಟಿಸಿದ್ದ ಸೂರ್ಯ ಪ್ರಖ್ಯಾತ್​ ರಗಡ್​ ಲುಕ್​

  • ರಿತನ್ಯಾ ವಿಜಯ್​​ ಕುಮಾರ್​​​​,ಪ್ರಶಾಂತ್​ ಸಿದ್ದಿ ನಟನೆಯ ಕಾಗೆ ಬಂಗಾರ

ಜಾಕಿ, ಅಣ್ಣಾಬಾಂಡ್​, ಕೆಂಡ ಸಂಪಿಗೆ, ಪಾಪ್​ಕಾರ್ನ್​ ಮಂಕಿ ಟೈಗರ್, ಕಡ್ಡಿಪುಡಿಯಂತಹ ಕ್ರೈಮ್​​ ಸಿನಿಮಾಗಳನ್ನು ಸ್ಯಾಂಡಲ್​ವುಡ್​​ಗೆ ಕೊಟ್ಟಿದ್ದ ದುನಿಯಾ ಸೂರಿ ಮತ್ತೆ ಕಂಬ್ಯಾಕ್​ ಆಗಿದ್ದಾರೆ. ಕಾಗೆ ಬಂಗಾರ ಸಿನಿಮಾಕ್ಕೆ ಆಕ್ಷನ್​ ಕಟ್ ಹೇಳಿದ್ದು, ಸಿನಿಮಾದ ಫಸ್ಟ್​ ಗ್ಲಿಂಪ್ಸ್​ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿವೆ.

ಕೆಂಡ ಸಂಪಿಗೆ ಸಿನಿಮಾ ಮುಗಿದ ನಂತರವೇ 2016ರಲ್ಲಿ ಕಾಗೆ ಬಂಗಾರ ರಿಲೀಸ್ ಆಗುವ ನಿರೀಕ್ಷೆ ಇತ್ತು. ಆದರೆ, 11 ವರ್ಷದ ಬಳಿಕ ಕಾಗೆ ಬಂಗಾರ ಸಿನಿಮಾದ ಪ್ರಚಾರ ಕಾರ್ಯ ಸಮಾರೋಪದಿ ಶುರುವಾಗಿದೆ.

ಯಾರೆಲ್ಲ ಸಿನಿಮಾದಲ್ಲಿದ್ದಾರೆ?

ನಡುವೆ ಅಂತರವಿರಲಿ ಸಿನಿಮಾದಲ್ಲಿ ಚಾಕ್ಲೇಟ್​ ಬಾಯ್ ಆಗಿ ಕಾಣಿಸಿಕೊಂಡಿದ್ದ ಸೂರ್ಯ ಪ್ರಖ್ಯಾತ್​ ಅಲಿಯಾಸ್, ದುನಿಯಾ ವಿಜಯ್​​ ಪುತ್ರಿ ರಿತನ್ಯಾ ವಿಜಯ್​​ ಕುಮಾರ್​​​​, ಪ್ರಶಾಂತ್​ ಸಿದ್ದಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರೊಂದಿಗೆ ನಟೇಶ್​ ಹೆಗ್ಡೆ, ನಂದ ಕಿಶೋರ್​, ಪವನ್​ ನಾಗೇಶ್, ಮಲ್ಲ ಸೇರಿದಂತೆ ಯುವ ನಟರು ಸಿನಿಮಾದಲ್ಲಿದ್ದಾರೆ.

ಮೊದಲ ಗ್ಲಿಂಪ್ಸ್ ರಿಲೀಸ್

ಕಾಗೆ ಬಂಗಾರದ ಮೊದಲ ಗ್ಲಿಂಪ್ಸ್​ ರಿಲೀಸ್​ ಆಗಿದ್ದು, 'ಕಾಗೆ ಬಂಗಾರ ಸತ್ಯ ಸುಳ್ಳಿನ ನಡುವೆ ಭ್ರಮೆ ಹುಟ್ಟಿಸುವುದು' ಎಂದು ಸೂರಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್​ ಸಾಕಷ್ಟು ಕುತೂಹಲವನ್ನು ಕೆರಳಿಸುವಂತಿದೆ. ವಾಸ್ತವ ಮತ್ತು ಭ್ರಮಾ ಲೋಕದ ಚಿತ್ರಣವನ್ನು ಈ ಬಾರಿಯೂ ಡೈರೆಕ್ಟರ್​ ಸೂರಿ ಬಿಚ್ಚಿಡಲಿದ್ದಾರೆ.

ಕಾಗೆ ಬಂಗಾರ ಸಿನಿಮಾವು 2015ರಲ್ಲಿ ರಿಲೀಸ್​ ಆಗಿದ್ದ ಕೆಂಡ ಸಂಪಿಗೆ ಮತ್ತು 2020ರಲ್ಲಿ ರಿಲೀಸ್ ಆಗಿದ್ದ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾದ ಮುಂದುವರಿದ ಭಾಗ ಎನ್ನಲಾಗಿದೆ. ಕೆಂಡಸಂಪಿಗೆ ಸಿನಿಮಾದ ಆರಂಭದಲ್ಲಿಯೇ ಭಾಗ 1ಕಾಗೆ ಬಂಗಾರ ಎಂದು ಉಲ್ಲೇಖಿಸಲಾಗಿತ್ತು. 2016ರಲ್ಲೇ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ, ಕಾರಣಾಂತರದಿಂದ ಸಿನಿಮಾ ಶೂಟಿಂಗ್​ ಶುರುವಾಗಲಿಲ್ಲ.

ಮೊದಲಿಗೆ ಕಾಗೆ ಬಂಗಾರ ಸಿನಿಮಾದಲ್ಲಿ ಯುವ ರಾಜ್​ಕುಮಾರ್​ ನಟಿಸುತ್ತಾರೆ ಎನ್ನುವ ಮಾಹಿತಿ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು. ಕೊನೆಗೆ ಶಾಕುಂತ್ಲೆ ಸಿಕ್ಕಳು ಎಂದು ಫೇಮಸ್​ ಆದ ಸೂರ್ಯ ಪ್ರಖ್ಯಾತ್ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಚಾಕ್ಲೇಟ್​ ಬಾಯ್​ ಇಮೇಜ್ ಪಕ್ಕಕ್ಕಿಟ್ಟು, ರಗಡ್​ ಆಗಿ ಕಾಣಿಸಿಕೊಂಡಿದ್ದಾರೆ, (ಏಜೆನ್ಸೀಸ್).