ವಾರಣಾಸಿ ಚಿತ್ರದ ಟೈಟಲ್ ವಿವಾದಕ್ಕೆ ಮುಕ್ತಿ
- 1,200 ಕೋಟಿ ರೂ. ಬಜೆಟ್‌ನಲ್ಲಿ ಬಹುನಿರೀಕ್ಷಿತ 'ವಾರಣಾಸಿ' ಚಿತ್ರ
- ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಅಭಿನಯಿಸುತ್ತಿರುವ ಸಿನಿಮಾ ದಾಖಲೆಗೆ ಸಜ್ಜು
- ಎಸ್.ಎಸ್. ರಾಜಮೌಳಿ ಸಾಹಸದ ನಿರ್ದೇಶನದ ಚಿತ್ರಕ್ಕೆ ಟೈಟಲ್ ಗೊಂದಲ
- ಎರಡೂ ತೆಲುಗು ಚಿತ್ರಗಳಿಗೂ ವಾರಣಾಸಿ ಟೈಟಲ್ ಹಂಚಿಕೆ ಸಮಸ್ಯೆ
ಬೆಂಗಳೂರು: ಪ್ರಸ್ತುತ, ಭಾರತೀಯ ಚಲನಚಿತ್ರೋದ್ಯಮದಲ್ಲಿ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗಲು ಎದುರುನೋಡುತ್ತಿದ್ದು, ಟೈಟಲ್, ಟೀಸರ್ ಮತ್ತು ಟ್ರೇಲರ್ನಿಂದಲೇ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಕೆರಳಸುತ್ತಿವೆ. ಈ ಪೈಕಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯಿಸುತ್ತಿರುವ ಹಾಗೂ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ 'ವಾರಣಾಸಿ' ಚಿತ್ರದ ಟೈಟಲ್ ಗೊಂದಲ ಕಡೆಗೂ ಬಗೆಹರಿದಿದೆ.
ಪ್ಯಾನ್ ವರ್ಲ್ಡ್ ಚಿತ್ರವಾಗಿ ತಯಾರಾಗುತ್ತಿರುವ ಮಹೇಶ್ ಬಾಬು ಸಿನಿಮಾವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಭಾರಿ ಕುತೂಹಲದಿಂದ ಕಾಯತೊಡಗಿದ್ದಾರೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ವಾರಣಾಸಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಆದರೆ, ಅದಕ್ಕೂ ಮೊದಲೇ ವಿವಾದಕ್ಕೆ ಗುರಿಯಾಗಿದ್ದ ಚಿತ್ರದ ಟೈಟಲ್, ಮತ್ತೊಂದು ಸಿನಿಮಾದ ಶೀರ್ಷಿಕೆ ಎಂಬ ಆರೋಪ ಕೇಳಿಬಂದಿತ್ತು. ಅದಾಗಲೇ ರಿಜಿಸ್ಟರ್ ಮಾಡಿಸಿದ್ದ ವಾರಣಾಸಿ ಟೈಟಲ್ ಅನ್ನು ಜಕ್ಕಣ್ಣ ತಮ್ಮ ಫಿಲಂಗೆ ಇಟ್ಟುಕೊಂಡಿರುವುದು ಸರಿಯಲ್ಲ ಎಂದು ಮತ್ತೊಬ್ಬ ನಿರ್ದೇಶಕರು ಕಿಡಿಕಾರಿದ್ದರು.
ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜಮೌಳಿ, ನಿರ್ಮಾಪಕ ಕೆ.ಎಲ್.ನಾರಾಯಣ ಮತ್ತು ಈಗಾಗಲೇ ವಾರಣಾಸಿ ಟೈಟಲ್ ನೋಂದಾಯಿಸಿರುವ ನಿರ್ದೇಶಕ ಸುಬ್ಬಾ ರೆಡ್ಡಿ ಅವರೊಂದಿಗೆ ದೀರ್ಘ ಸಮಯ ಮಾತುಕತೆ ನಡೆಸಿದ್ದಾರೆ. ಚರ್ಚೆಗಳ ಬಳಿಕ ಒಂದು ರೂಪಾಯಿ ಹಣವನ್ನೂ ಕೇಳದೆ, ಏನ್ನನ್ನೂ ನಿರೀಕ್ಷಿಸದೆ ಶೀರ್ಷಿಕೆ ಬಿಟ್ಟುಕೊಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
1,100 ಕೋಟಿ ರೂ.ಬಜೆಟ್
ಸದಾ ಹೊಸತನ, ಉನ್ನತ ಮಟ್ಟದ ಗ್ರಾಫಿಕ್ಸ್, ವಿಎಫ್ಎಕ್ಸ್ ವಿಶ್ಯೂವಲ್ಸ್ ಹಾಗೂ ಸಿನಿಮ್ಯಾಟಿಕ್ ಅನುಭವವನ್ನು ತಮ್ಮ ಚಿತ್ರಗಳಲ್ಲಿ ತುಂಬಿಸುವ ರಾಜಮೌಳಿ, 'ವಾರಣಾಸಿ' ಚಿತ್ರವನ್ನು ಸುಮಾರು 1,100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ವರದಿಗಳ ಪ್ರಕಾರ, ಪ್ರಸ್ತುತ ಭಾರತದ ಎರಡನೇ ಅತಿದೊಡ್ಡ ಬಜೆಟ್ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು, ಪೃಥ್ವಿರಾಜ್ ಸುಕುಮಾರನ್ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ದೊಡ್ಡ ತಾರಾಬಳಗ ಮತ್ತು ದಾಖಲೆಯ ಬಜೆಟ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಮುಂದಾಗಿರುವ ರಾಜಮೌಳಿ, ಭಾರತೀಯ ಚಿತ್ರೋದ್ಯಮದ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾರೊಬ್ಬರು ಮಾಡದ ಪ್ರಯತ್ನದತ್ತ ತಮ್ಮ ಚಿತ್ತ ಹರಿಸಿರುವುದು ನಿಜಕ್ಕೂ ಸಿನಿಪ್ರಿಯರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಅಷ್ಟಕ್ಕೂ ಅದೇನೆಂದರೆ, ಮೊದಲ ಬಾರಿಗೆ ಭಾರತೀಯ ಚಿತ್ರವೊಂದು ಅಂಟಾರ್ಕ್ಟಿಕಾದಲ್ಲಿ ಚಿತ್ರೀಕರಣಗೊಳ್ಳುತ್ತಿದೆ.
ವಿಶ್ವದ ಐದನೇ ಸಿನಿಮಾ
ಅಂತಾರಾಷ್ಟ್ರೀಯ ಚಿತ್ರಗಳ ಪಟ್ಟಿಯಲ್ಲಿ ಮೊದಲ ಭಾರತೀಯ ಸಿನಿಮಾ ರಾಜಮೌಳಿ ನಿರ್ದೇಶಿಸಲಿರುವ ಈ ಚಿತ್ರ. ಅಂಟಾರ್ಕ್ಟಿಕಾ ಪ್ರದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಸಿನಿಮಾ ಮತ್ತು ವಿಶ್ವದ ಐದನೇ ಸಿನಿಮಾ ಎಂಬ ಪಟ್ಟಿಗೆ ಸೇರಲಿದೆ. ಹವಾಮಾನ ವೈಪರೀತ್ಯ ಮತ್ತು ಕಟ್ಟುನಿಟ್ಟಿನ ಕ್ರಮ, ನಿಯಮಗಳಿರುವ ಕಾರಣ ಕೆಲವೇ ಕೆಲವು ಸಿನಿಮಾಗಳು ಮಾತ್ರ ಈ ಪ್ರದೇಶದಲ್ಲಿ ಶೂಟಿಂಗ್ ಮಾಡುವಲ್ಲಿ ಯಶಸ್ವಿಯಾಗಿವೆ.
ಇಲ್ಲಿಯವರೆಗೆ ಅಂಟಾರ್ಕ್ಟಿಕಾದಲ್ಲಿ ಶೂಟ್ ಆದ ಸಿನಿಮಾಗಳಿವು
3. ಎನ್ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್
4. ಅಂಟಾರ್ಕ್ಟಿಕಾ: ಎ ಇಯರ್ ಆನ್ ಒನ್ಸ್