ಕಳೆದ ವಾರವಷ್ಟೇ ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್, ಸಿಬಿಐಗೆ ವಹಿಸಿತ್ತು. ಸಿಬಿಐ ಈ ಪ್ರಕರಣದ ಕುರಿತು ಈಗಾಗಲೇ ತನಿಖೆ ಆರಂಭಿಸಿದೆ. ಈ ಮಧ್ಯೆ, ಉದಯ್ ಕಿರಣ್ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ತೆಲುಗು ನಟ ಉದಯ್ ಕಿರಣ್ 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಅವರ ಸಾವಿಗೆ ನಿಖರವಾದ ಕಾರಣವೇನು ಎಂದು ತಿಳಿಯದಿದ್ದರೂ, ನೆಪೋಟಿಸಂ ಮತ್ತು ಟಾಲಿವುಡ್ ಮಾಫಿಯಾ ಕಾರಣ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:
ಉದಯ್ ಕಿರಣ್ ಅವರು ಕೆಲವು ವರ್ಷಗಳ ಹಿಂದೆ ತೆಲುಗಿನಲ್ಲಿ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದರು. ಈ ಮಧ್ಯೆ, ಅವರ ಎಂಗೇಜ್ಮೆಂಟ್ 'ಮೆಗಾ ಸ್ಟಾರ್' ಚಿರಂಜೀವಿ ಅವರ ಮಗಳ ಜತೆಗೆ ಆಯಿತು. ಇನ್ನೇನು ಇಬ್ಬರೂ ಸಪ್ತಪದಿ ತುಳಿಯಬೇಕು ಎನ್ನುವಷ್ಟರಲ್ಲಿ, ಈ ಎಂಗೇಜ್ಮೆಂಟ್ ಮುರಿದುಬಿದ್ದು, ಇಬ್ಬರೂ ದೂರವಾದರು.
ಇಬ್ಬರೂ ದೂರವಾಗುವುದಕ್ಕೆ ನಿಖರವಾದ ಕಾರಣವೇನು ಎಂದು ಬಹಿರಂಗವಾಗದಿದ್ದರೂ, ಆ ನಂತರ ಉದಯ್ ಕಿರಣ್ಗೆ ತೆಲುಗು ಚಿತ್ರರಂಗದಲ್ಲಿ ಅವಕಾಶಗಳು ಕ್ರಮೇಣ ಕಡಿಮೆಯಾಗತೊಡಗಿದವು. ಕೊನೆಗೆ ಡಿಪ್ರೆಶನ್ನಿಂದ ಉದಯ್ ಕಿರಣ್ ಅವರು 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆಲ್ಲಾ ಕಾರಣ, ಚಿರಂಜೀವಿ ಅವರೇ ಕಾರಣ ಎಂದು ಹೇಳಲಾಯಿತು ಮತ್ತು ಕೆಲವು ದಿನಗಳ ನಂತರ ಪ್ರಕರಣ ಕ್ರಮೇಣ ತಣ್ಣಗಾಯಿತು.
ಇದನ್ನೂ ಓದಿ:
ಈಗ ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ, ಉದಯ್ ಕಿರಣ್ ಅವರ ಆತ್ಮಹತ್ಯೆ ಪ್ರಕರಣವನ್ನೂ ಸಿಬಿಐಗೆ ಒಪ್ಪಿಸಬೇಕು ಎಂದು ಅವರ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ವಿಷಯವಾಗಿ ಜಸ್ಟೀಸ್ ಫಾರ್ ಉದಯ್ ಕಿರಣ್ ಎಂಬ ಅಭಿಯಾನವನ್ನೇ ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭಿಸಿದ್ದಾರೆ.
ನೆಪೋಟಿಸಂ ಎನ್ನುವುದು ಟಾಲಿವುಡ್ನಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದು ಉದಯ್ ಕಿರಣ್ ಸಹ ಅದಕ್ಕೆ ಬಲಿಯಾಗಿದ್ದಾರೆ ಎಂಬ ಕೆಲವರು ಹೇಳಿದರೆ, ಇನ್ನೂ ಕೆಲವರು ಮೆಗಾ ಮಾಫಿಯಾದಿಂದ ಉದಯ್ ಪ್ರಾಣಬಿಟ್ಟರು ಎಂದು ಹೇಳಿಕೊಂಡಿದ್ದಾರೆ. ಒಟ್ಟಾರೆ ಸುಶಾಂತ್ಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.