ಬೆಂಗಳೂರು: ‘ಐಪಿಎಲ್ ಸೀಸನ್ 12’ ಕಳೆದರೂ ಆರ್ಸಿಬಿ ಒಂದು ಸಲವೂ ಕಪ್ ಗೆದ್ದಿಲ್ಲ. ಹಾಗಂತ ಪ್ರತಿ ಸೀಸನ್ನಲ್ಲೂ ‘ಈ ಸಲ ಕಪ್ ನಮ್ದೇ’ ಎಂಬ ಜಪ ಅಭಿಮಾನಿಗಳು ಬಿಟ್ಟಿಲ್ಲ. ಆದರೆ ಈಗ ‘ಈ ಸಲ ಕಪ್ ನಮ್ದೇ’ ಎಂದಿದ್ದು ಆರ್ಸಿಬಿ ಅಭಿಮಾನಿಗಳಲ್ಲ, ‘ಬ್ರೋಕರ್ ಬೋರೇಗೌಡ’ ಚಿತ್ರತಂಡ.
ಹೌದು, ‘ಬ್ರೋಕರ್ ಬೋರೇಗೌಡ’ ಚಿತ್ರತಂಡ ಬಿಡುಗಡೆ ಮಾಡಿರುವ ಥೀಮ್ಾಂಗ್ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಇಂಟರೆಸ್ಟಿಂಗ್ ಆಗಿರುವ ಈ ಸಾಂಗ್ನಲ್ಲಿ ಕನ್ನಡ ರಿಯಾಲಿಟಿ ಶೋ ಬಿಗ್ಬಿಸ್ ಸೀಸನ್ 6ರ ಸ್ಪರ್ಧಿ, ನಟಿ ಅಕ್ಷತಾ ಪಾಂಡವಪುರ ‘ಹೇ ಬ್ರೋ.. ಬ್ರೋ..’ ಎಂದರೆ, ನಟ ಅವಿನಾಶ್ ಶಟಮರ್ಷನ್, ‘ಬೋರೇಗೌಡ ನಾ ಬಂದೆ, ಈ ಸಲ ಕಪ್ ನಮ್ದೇ’ ಅಂತ ಬಂದಿದ್ದಾರೆ. ಅಕ್ಷತಾ ಈ ಹಾಡಿನಲ್ಲಿ ಸಖತ್ ಬೋಲ್ಡ್ ಆಗಿದ್ದರೆ, ಅವಿನಾಶ್ ಡಿಫರೆಂಟ್ ಲುಕ್ನಲ್ಲಿದ್ದಾರೆ.
ಪ್ರಸನ್ನ ಸಾಗರ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ಈ ಹಾಡಿಗೆ ಅವರೇ ಸಾಹಿತ್ಯ ಬರೆದಿದ್ದಾರೆ. ಸುಪ್ರೀತ್ ಸಂಗೀತ, ರಿಷಿಕೇಶಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯ ಪ್ರಿ-ಪ್ರೊಡಕ್ಷನ್ನಲ್ಲಿರುವ ಚಿತ್ರತಂಡ, ಥೀಮ್ ಸಾಂಗ್, ಟೀಸರ್ಗೆ ಬೇಕಾದ್ದನ್ನಷ್ಟೇ ಶೂಟಿಂಗ್ ಮಾಡಿಕೊಂಡಿದೆ. ಏಪ್ರಿಲ್-ಮೇ ತಿಂಗಳೊಳಗೆ ಶೂಟಿಂಗ್ ಮುಗಿಸಿ ಜೂನ್ನಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.