ಸಿನಿವಾಣಿ

VIDEO| ‘ದುನಿಯಾ’ ವಿಜಯ್ ನಟನೆ, ನಿರ್ದೇಶನದ ‘ಸಲಗ’ ಸಿನಿಮಾದ ಇನ್ನೊಂದು ಕುಣಿಸೋ... ರಮಿಸೋ.. ಹಾಡು!

ಬೆಂಗಳೂರು: ‘ದುನಿಯಾ’ ವಿಜಯ್ ನಿರ್ದೇಶನ ಮಾಡಿ ನಟಿಸುತ್ತಿರುವ ‘ಸಲಗ’ ಸಿನಿಮಾದ ಇನ್ನೊಂದು ಕುಣಿಸೋ... ರಮಿಸೋ.... ಹಾಡಿನ ಟೀಸರ್​ ಬಿಡುಗಡೆಯಾಗಿದೆ.

ಇದರ ಬಗ್ಗೆ ವಿಜಯ್​ ಟ್ವಿಟ್​ ಮಾಡಿದ್ದು, ಹುಡುಗ ಹುಡುಗಿರು, ದೊಡ್ಡವರು ಚಿಕ್ಕವರು, ಸಮಸ್ತ ಚಿತ್ರಪ್ರೇಮಿಗಳಿಗೆ ಫುಲ್ ಕಿಕ್ ಕೊಡೋ ಲವ್ ಸಾಂಗ್ ನ ಟೀಸರ್ ಇದು ಎಂದು ಬರೆದುಕೊಂಡಿದ್ದಾರೆ. ಜತೆಗೆ ಈ ಹಾಡು ಹುಟ್ಟಿದ ಸಮಯದ ಬಗ್ಗೆ ನಾನು‌ ನವೀನ್ ಸಜ್ಜು ಸೇರಿದಾಗ ಹುಟ್ಟಿದ ಹಾಡಿದು. ಫುಲ್ ಹಾಡು... ಇದೇ ಗುರುವಾರ (ಮಾರ್ಚ್​ 12) ಸಂಜೆ 5ಗಂಟೆಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ನಟಿಸುತ್ತಿರುವ ‘ಸಲಗ’ ಸಿನಿಮಾದ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿವೆ. ಚಿತ್ರದ ಹಾಡೊಂದಕ್ಕೆ ಯುವ ಗಾಯಕ ಸಂಚಿತ್ ಹೆಗ್ಡೆ ಹಾಡಿದ್ದರು. ಅಲ್ಲದೆ, ಮಲೇಷ್ಯಾದ ಯೋಗಿ ಕೂಡ ಒಂದು ಹಾಡನ್ನು ‘ಸಲಗ’ಕ್ಕಾಗಿ ಹಾಡಿದ್ದರು.

ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸಲಗ ಚಿತ್ರವನ್ನು ಕೆ.ಪಿ. ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ‘ಡಾಲಿ’ ಧನಂಜಯ ಕೂಡ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.