ಸಿನಿವಾಣಿ

ವಿಜಯ್ ಹೊಸ ದುನಿಯಾಗೆ ಲಕ್ಕಿ ಹೀರೋ ಆದ ಡಾ. ರಾಜ್ ಕುಟುಂಬದ ಕುಡಿ

ಬೆಂಗಳೂರು: ‘ಸಲಗ’ ಚಿತ್ರವನ್ನು ಬಿಡುಗಡೆಗೆ ಸಿದ್ಧ ಮಾಡಿರುವ ವಿಜಯ್, ಇದೀಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿರುವ ಸುದ್ದಿ ಇತ್ತು. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಹೊಸ ನಾಯಕ-ನಾಯಕಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಮೊದಲ ಹಂತವಾಗಿ ವಿಜಯ್, ನಾಯಕನ ಹೆಸರನ್ನು ಬಹಿರಂಗಪಡಿಸಿದ್ದಾರೆ.

ನಾಯಕನಾಗಿ ಅಭಿನಯಿಸುತ್ತಿರುವವರು ಲಕ್ಕಿ ಗೋಪಾಲ್. ಡಾ. ರಾಜಕುಮಾರ್ ಅವರ ತಂಗಿಯ ಮೊಮ್ಮಗನಾದ ಲಕ್ಷ್ಮಣ್ ಗೋಪಾಲ್, ಈ ಹಿಂದೆ ಶಿವರಾಜಕುಮಾರ್ ಅಭಿನಯದಲ್ಲಿ ‘ಎಸ್​ಆರ್​ಕೆ’ ಚಿತ್ರವನ್ನು ನಿರ್ದೇಶಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಇನ್ನೂ ಶುರುವಾಗಿಲ್ಲ. ಅಷ್ಟರಲ್ಲಿ, ನಾಯಕನ ಪಾತ್ರ ಲಕ್ಕಿಗೆ ಸೂಟ್ ಆಗುತ್ತದೆ ಎಂದು ಆ ಪಾತ್ರವನ್ನು ಅವರಿಂದಲೇ ಮಾಡಿಸುವುದಕ್ಕೆ ಹೊರಟಿದ್ದಾರೆ ವಿಜಯ್.

ಈಗಾಗಲೇ ವಿಜಯ್ ಮತ್ತು ಲಕ್ಕಿ ಇಬ್ಬರೂ ಶಿವರಾಜಕುಮಾರ್ ಅವರ ಹಾರೈಕೆ ಮತ್ತು ಆಶೀರ್ವಾದಗಳನ್ನು ಪಡೆದು ಬಂದಿದ್ದಾರೆ. ಎಲ್ಲ ಸರಿ, ಲಕ್ಕಿಗೆ ನಾಯಕಿ ಯಾರು ಎಂಬ ವಿಷಯವನ್ನು ಮತ್ತೊಮ್ಮೆ ಹೇಳುತ್ತಾರಂತೆ ವಿಜಯ್.