Radhika Pandit: ತಮ್ಮ ಮುದ್ದಾದ ಮುಖ, ಗಂಭೀರ ಅಭಿನಯ ಹಾಗೂ ಮನೋಜ್ಞ ನಟನೆ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಆದ ಪ್ರೇಕ್ಷಕ ಬಳಗ ಹೊಂದಿರುವ ನಟಿ ಎಂದರೆ ಅದು ರಾಧಿಕಾ ಪಂಡಿತ್ ಆಗಿದ್ದಾರೆ. ಮೊಗ್ಗಿನ ಮನಸಿನ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ರಾಧಿಕಾ, ಅದ್ದೂರಿ, ಡ್ರಾಮಾ, ಕಡ್ಡಿಪುಡಿ, ಹುಡುಗರು, ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ ಮೊದಲಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.
ಇವರು ರಾಕಿಂಗ್ಸ್ಟಾರ್ ಯಶ್ ಅವರನ್ನು 2016 ರಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಆರ್ಯಾ ಮತ್ತು ಯಥರ್ವ್ ಎಂಬ ಒಬ್ಬ ಮಗಳು ಮತ್ತು ಮಗನಿದ್ದಾರೆ. ಇತ್ತೀಚೆಗೆ ನಟಿ ಗುಲಾಬಿ ಬಣ್ಣದ ಟಿ-ಶರ್ಟ್ ಧರಿಸಿ ಪೋಟೊ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.