ಸಿನಿವಾಣಿ

ಡಾ. ರಾಜಕುಮಾರ್ ಅವರ ಯೋಗಗುರು ಹೊನ್ನಪ್ಪ ನಾಯ್ಕರ್ ಇನ್ನಿಲ್ಲ

ಬೆಂಗಳೂರು: ಡಾ. ರಾಜಕುಮಾರ್​ ಅವರಿಗೆ ಯೋಗ ಹೇಳಿಕೊಟ್ಟಿದ್ದ ಯೋಗಗುರು ಹೊನ್ನಪ್ಪ ನಾಯ್ಕರ್​ ಕರೊನಾದಿಂದ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಪೊಲೀಸ್ ಇಲಾಖೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಹೊನ್ನಪ್ಪ ನಾಯ್ಕರ್​, ಡಾ ರಾಜಕುಮಾರ್ ಸೇರಿದಂತೆ  ಅವರ  ಕುಟುಂಬದವರಿಗೆ ಯೋಗ ಗುರುವಾಗಿದ್ದರು. ಅಲ್ಲದೆ ನಾಡಿನ  ಅತ್ಯಂತ ಗಣ್ಯವ್ಯಕ್ತಿಗಳಿಗೆ  ಯೋಗಾಸನವನ್ನು  ಪ್ರತಿ ನಿತ್ಯ  ಹೇಳಿಕೊಡುತ್ತಿದ್ದರು.

ಜೆಪಿ ನಗರದಲ್ಲಿ ವಾಸವಿದ್ದ ಅವರು, ಕನಕಪುರದ ಬಳಿ ಯೋಗಾಶ್ರಮ ನಡೆಸುತ್ತಿದ್ದರು. ಅವರ ಅಂತ್ಯಕ್ರಿಯೆಯನ್ನು  ಕನಕಪುರದ  ನಾಗದೇವನಹಳ್ಳಿ  ಬಳಿ  ನೆರವೇರಿಸಲು  ಅವರ ಕುಟುಂಬಸ್ಥರು  ತೀರ್ಮಾನಿಸಿದ್ದಾರೆ.

ಹೊನ್ನಪ್ಪ ನಾಯ್ಕರ್ ಅವರ ನಿಧನಕ್ಕೆ ಹಿರಿಯ ನಿರ್ಮಾಪಕ ಎಸ್. ಎ. ಚಿನ್ನೇಗೌಡ ಸಂತಾಪ ಸೂಚಿಸಿದ್ದು, ಅವರು  ಆತ್ಮಕ್ಕೆ  ಶಾಂತಿ ಸಿಗಲೆಂದು  ತಿಳಿಸಿದ್ದಾರೆ.