ವಿಜಯದಶಮಿ ಪ್ರಯುಕ್ತ ನೆಟ್ಫ್ಲಿಕ್ಸ್ನಲ್ಲಿ 'ದ ಪ್ಯಾರಡೈಸ್', ಡೊರೋಥಿ ರಿಲೀಸ್.
ಅ.22, 23ರಂದು ಕೀರ್ತಿ ಸುರೇಶ್, ನಾನಿ ನಟನೆಯ ಸಿನಿಮಾಗಳು ಆನ್ಲೈನ್ಗೆ ಲಗ್ಗೆ.
ಎಲ್ಜಿಬಿಟಿಕ್ಯೂ ಬಗ್ಗೆ ಹೇಳುವ ಸಿನಿಮಾ ಡೊರೋಥಿಗೆ ಬಾಯ್ಕಾಟ್ ಮತ್ತು ಪ್ರತಿಭಟನೆಯ ಬಿಸಿ ಇತ್ತು.
Dorothy, the paradise Movie Ott: ವಿಜಯದಶಮಿ ಪ್ರಯುಕ್ತ ಈ ವಾರ ಟಾಲಿವುಡ್ನ ನಾನಿ ನಟನೆಯ 'ದ ಪ್ಯಾರಡೈಸ್' ಹಾಗೂ ಕಾಲಿವುಡ್ ಸಿನಿಮಾ, ಕೀರ್ತಿ ಸುರೇಶ್ ನಟನೆಯ ಡೊರೋಥಿ ಒಟಿಟಿಯಲ್ಲಿ ಮಿಂಚಲು ಸಜ್ಜಾಗಿದೆ. ಯಾವ ಒಟಿಟಿ ಫ್ಲಾಟ್ಫಾರ್ಮ್ನಲ್ಲಿ, ಎಂದು ನೋಡಬಹುದು ಎನ್ನುವ ಮಾಹಿತಿ ಇಲ್ಲಿದೆ.
ಜಗಮೇ ತಂದಿರಾಮ್, ಮಹಾನ್, ಜಿಗರ್ಥಂಡ, ರೆಟ್ರೋ ಸಿನಿಮಾ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಆಕ್ಷನ್ ಕಟ್ ಹೇಳಿರುವ ಡೊರೋಥಿ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಲಿದೆ. ಮಹಾ ನಟಿ ಕೀರ್ತಿ ಸುರೇಶ್, ರಿಷಿಕಾಂತ್, ಸನಂತ್ ನಟಿಸಿರುವ ಈ ಸಿನಿಮಾವನ್ನು ಅಕ್ಟೋಬರ್ 23ರಂದು ಕಣ್ತುಂಬಿಕೊಳ್ಳಬಹುದು.
'ಡೊರೋಥಿ ಸಿನಿಮಾವು ಎಲ್ಜಿಬಿಟಿಕ್ಯೂಗಳ ಬಗ್ಗೆ ಒತ್ತಿ ಹೇಳುವ ಸಿನಿಮಾವಾಗಿದೆ. ಇಂತಹದ್ದೊಂದು ಸಿನಿಮಾ ದೊಡ್ಡ ಪರೆದೆ ಮೇಲೆ ತೆರೆಕಂಡಿದ್ದು ಇದೇ ಮೊದಲಬಾರಿಗೆ. ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಮಾಡಿರುವ ಸಿನಿಮಾಗಳು ಇವೆ. ಆದರೆ, ಇದೇ ಮೊದಲ ಬಾರಿಗೆ ದೊಡ್ಡ ಮಟ್ಟಕ್ಕೆ ಎಲ್ಜಿಬಿಟಿಕ್ಯೂ ಪರವಾದ ಸಿನಿಮಾ ಸದ್ದು ಮಾಡಿದ್ದು.
'ಡೊರೊಥಿ' ಚಿತ್ರ ಬಿಡುಗಡೆಯಾಗುವ ಮುನ್ನವೇ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ರಿಲೀಸ್ ಆದ ನಂತರ ಬಾಯ್ಕಾಟ್ ಅಭಿಯಾನವನ್ನು ಎದುರಿಸಿತ್ತು. ಸದ್ಯ ಈ ಸಿನಿಮಾದ ಒಟಿಟಿ ಸ್ಟ್ರೀಮಿಂಗ್ ಹಕ್ಕನ್ನು ನೆಟ್ಫ್ಲಿಕ್ಸ್ ಪಡೆದಿಕೊಂಡಿದ್ದು, ಕನ್ನಡ, ಮಲಯಾಳಂ, ಹಿಂದಿ, ತೆಲುಗು, ತಮಿಳಿನಲ್ಲಿ ನೋಡಬಹುದಾಗಿದೆ.
ಸಿನಿಮಾಕ್ಕೆ ಇಳಯರಾಜರ ಸಂಗೀತ ಸಂಯೋಜಿಸಿದ್ದಾರೆ. ಕಲ್ಯಾಣಿ ವಿರಂಧು, ಮುತ್ತುಮಣಿ ಹಾಡುಗಳ ಕೇಳುಗರ ಮನ ತಣಿಸಿದೆ. ಚೈತ್ರಾ ಜೆ ಆಚಾರ್ ಸೇರಿದಂತೆ ಹಲವರು ಈ ಹಾಡನ್ನು ನೆಚ್ಚಿಕೊಂಡು ಪ್ರತ್ಯೇಕವಾಗಿ ಹಾಡಿದ್ದರು. ಇನ್ನು ಕನ್ನಡದ ನಟ ಉಪೇಂದ್ರ ಅವರು ಸಿನಿಮಾ ನೋಡಿ ಹೊಗಳಿದ್ದರು
ಡೊರೋಥಿ ಸಿನಿಮಾ ರಿಲೀಸ್ ಆಗಿದ್ದಾಗಹ ಚೆನ್ನೈನಲ್ಲಿ ಪ್ರತಿಭಟನೆ ನಡೆದಿತ್ತು. ಎಕ್ಸ್ನಲ್ಲಿ ಬಾಯ್ಕಾಟ್ ಅಭಿಯಾನ ಶುರುವಾಗಿತ್ತು. ಈ ಮಧ್ಯೆಯೂ ಕೀರ್ತಿ ಸುರೇಶ್ ನಟನೆಯ ಈ ಸಿನಿಮಾಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ.
ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡದ ನಾನಿ ನಟನೆಯದ ದ ಪ್ಯಾರಡೈಸ್ ಸಿನಿಮಾ ಅ.22ರಂದು ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಸಿನಿಮಾದಲ್ಲಿ ನಾನಿ, ಕಯಾದು ಲೋಹರ್, ಮೋಹನ್ ಬಾಬು , ಸೋನಾಲಿ ಕುಲಕರ್ಣಿ, ಜುಯಲ್ ನಟಿಸಿದ್ದಾರೆ. ಭಾರತದಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರವೂ ಬುಡಕ್ಕಟ್ಟು ಸಮುದಾಯವು ಎದುರಿಸುವ ಸಮಸ್ಯೆ ಬಗ್ಗೆ, ಪೌರತ್ವ, ಹಕ್ಕು ಪಡೆದುಕೊಳ್ಳಲು ಹೋರಾಡುವ ಸುತ್ತ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಅ.22ರಂದು ನೆಟ್ಟಫ್ಲಿಕ್ಸ್ನಲ್ಲಿ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ನೋಡಬಹುದಾಗಿದೆ, (ಏಜೆನ್ಸೀಸ್).