ಸಿನಿವಾಣಿ

ಅಂದಿನ ಈ ಪುಟ್ಟ ಬಾಲಕಿಯೇ ಇಂದು ಸೌತ್​ ಸಿನಿರಂಗದ ಸುಂದರಿ! ರಾಷ್ಟ್ರಪ್ರಶಸ್ತಿ ವಿಜೇತ ನಟಿಯೂ ಹೌದು | Actress Childhood Photo

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

ಇತ್ತೀಚೆಗೆ ನಟಿ ಕೀರ್ತಿ ಸುರೇಶ್​ ಅವರು ಬಹಳ ಸುದ್ದಿಯಲ್ಲಿದ್ದಾರೆ. ಒಂದು ಅವರ ಸಿನಿಮಾ ವಿಚಾರಕ್ಕಾದರೆ, ಇನ್ನೊಂದು ಅವರ ಮದುವೆ ವಿಚಾರಕ್ಕೆ. ಕೆಲವೇ ದಿನಗಳಲ್ಲಿ ಅವರ ನಟನೆಯ ಮೊದಲ ಬಾಲಿವುಡ್​ ಸಿನಿಮಾ 'ಬೇಬಿ ಜಾನ್' ಬಿಡುಗಡೆಯಾಗಲಿದೆ. ವರುಣ್​ ಧವನ್​ ನಾಯಕರಾಗಿ ನಟಿಸಿದ್ದಾರೆ. ಇದು ತಮಿಳಿನ ಥೇರಿ ಸಿನಿಮಾದ ರಿಮೇಕ್​. ಇನ್ನೊಂದೆಡೆ ಇದೇ ಡಿಸೆಂಬರ್​ನಲ್ಲಿ ಅವರ ಮದುವೆ ನಡೆಯಲಿದೆ. 15 ವರ್ಷಗಳ ಸ್ನೇಹಿತ ಆಂಟೋನಿ ಥಟ್ಟಿಲ್​ ಎಂಬುವರನ್ನು ವರಿಸಲಿದ್ದಾರೆ. ಹೀಗಾಗಿ ಕೀರ್ತಿ ಸುರೇಶ್​ ಟ್ರೆಂಡಿಂಗ್​ನಲ್ಲಿದ್ದಾರೆ.

ತಾಜಾ ಸಂಗತಿ ಏನೆಂದರೆ, ಕೀರ್ತಿ ಸುರೇಶ್​ ಅವರ ಬಾಲ್ಯದ ಫೋಟೋ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಕೀರ್ತಿ ಮುದ್ದಾಗಿ ಕಾಣಿಸುತ್ತಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ನಿಜಕ್ಕೂ ಇವರು ಕೀರ್ತಿ ಸುರೇಶ್ ಅವರೇನಾ? ಎಷ್ಟು ಮುದ್ದಾಗಿ ಕಾಣುತ್ತಿದ್ದಾರೆ ನೋಡಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಅಂದಹಾಗೆ ನಟಿ ಕೀರ್ತಿ ಸುರೇಶ್ ತಮಿಳು ಚಿತ್ರರಂಗದ ಸ್ಟಾರ್​ ನಟಿಯರಲ್ಲಿ ಒಬ್ಬರು. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್​, ಸೂರ್ಯ, ವಿಕ್ರಮ್​, ಶಿವಕಾರ್ತಿಕೇಯನ್​,​ ನಾನಿ, ಮಹೇಶ್​ ಬಾಬು ಸೇರಿದಂತೆ ಸ್ಟಾರ್​ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್​ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್​ ನಟನೆಯ ಡಬ್ಬಿಂಗ್​ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.

ಕೀರ್ತಿ ಸುರೇಶ್ ಮಲಯಾಳಂ ನಿರ್ಮಾಪಕ ಸುರೇಶ್ ಮತ್ತು ನಟಿ ಮೇನಕಾ ಅವರ ಪುತ್ರಿ. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಕೀರ್ತಿ ಮಲಯಾಳಂ ಚಿತ್ರ ಗೀತಾಂಜಲಿ ಮೂಲಕ ನಟಿಯಾಗಿ ಬಡ್ತಿ ಪಡೆದರು. ಸದ್ಯ ತಮಿಳು ಚಿತ್ರರಂಗದ ಸ್ಟಾರ್​ ನಟಿಯರಲ್ಲಿ ಒಬ್ಬರಾಗಿದ್ದಾರೆ. ತಮಿಳು ಚಿತ್ರರಂಗ ಹೊರತಾಗಿ ತೆಲುಗು, ಹಿಂದಿಯಂತಹ ಇತರ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಾ ಬಿಜಿಯಾಗಿದ್ದಾರೆ. ಕೀರ್ತಿ ಸುರೇಶ್ ತೆಲುಗಿನ “ಮಹಾನಟಿ” ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಬಂದಿತು. ಇತ್ತೀಚೆಗಷ್ಟೇ ತಮಿಳಿನಲ್ಲ “ರಘು ತಾತ” ಎಂಬ ಸಿನಿಮಾ ತೆರೆಕಂಡಿತು. ಪುರುಷರ ದಬ್ಬಾಳಿಕೆಗೆ ಮಹಿಳೆಯರು ಸವಾಲು ಹಾಕುವ ಕಥಾವಸ್ತುವನ್ನು ಈ ಚಿತ್ರ ಆಧರಿಸಿದೆ.

ಇನ್ನು ವೈಯಕ್ತಿಕ ವಿಚಾರದಿಂದಲೂ ಕೀರ್ತಿ ಸುರೇಶ್​ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಅದೇನೆಂದರೆ, ಕೀರ್ತಿ ಸುರೇಶ್ ಅವರು ಕೆಲವೇ ದಿನಗಳಲ್ಲಿ ತನ್ನ ಪ್ರಿಯಕರ ಆಂಟೋನಿ ಥಟ್ಟಿಲ್​ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊನ್ನೆಯಷ್ಟೇ ಸ್ವತಃ ಕೀರ್ತಿ ಸುರೇಶ್​ ತಮ್ಮ ಭಾವಿ ಪತಿಯನ್ನು ಪರಿಚಯಿಸಿ, ವದಂತಿಗಳಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಭಾವಿ ಪತಿಯೊಂದಿಗೆ ಇರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ದೀಪಾವಳಿ ಆಚರಣೆ ಸಂದರ್ಭದಲ್ಲಿ ಸೆರೆಹಿಡಿದಂತಹ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಕೀರ್ತಿ ಹಂಚಿಕೊಂಡಿದ್ದಾರೆ. ಆದರೆ, ಭಾವಿ ಪತಿಯ ಮುಖವನ್ನು ಬಹಿರಂಗಪಡಿಸಿಲ್ಲ. ಇಬ್ಬರು ಕ್ಯಾಮೆರಾಗೆ ಬೆನ್ನು ಮಾಡಿ ಆಗಸದಲ್ಲಿ ಬೆಳಕು ನೋಡುತ್ತಿರುವ ದೃಶ್ಯ ಫೋಟೋದಲ್ಲಿದೆ. ಆದರೆ, ಭಾವಿ ಪತಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಆಂಟೋನಿ ಜತೆಗಿನ ಕಳೆದ 15 ವರ್ಷಗಳ ಸ್ನೇಹ ಜೀವನಪೂರ್ತಿ ಇರುತ್ತದೆ. ಎಂದೆಂದಿಗೂ ಆಂಟೋನಿ-ಕೀರ್ತಿ ಒಂದೇ ಎಂದು ಕೀರ್ತಿ ಬರೆದುಕೊಂಡಿದ್ದಾರೆ. ಸದ್ಯ ಕೀರ್ತಿ ಅವರ ಈ ಪೋಸ್ಟ್ ವೈರಲ್ ಆಗಿದೆ. ಅಭಿಮಾನಿಗಳು ಮತ್ತು ಅನೇಕ ಸೆಲೆಬ್ರಿಟಿಗಳು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ಪ್ರಸ್ತುತ ರಿವಾಲ್ವರ್ ರೀಟಾ ಮತ್ತು ಬೇಬಿ ಜಾನ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೀರ್ತಿ ಸುರೇಶ್​ ಭಾವಿ ಪತಿ ಆಂಟೋನಿ ಇಂಜಿನಿಯರಿಂಗ್ ಓದಿದ್ದು, ಕೆಲಕಾಲ ವಿದೇಶದಲ್ಲಿ ಕೆಲಸ ಮಾಡಿದ್ದರು. ಸದ್ಯ ಕೇರಳದಲ್ಲಿ ಹಲವು ವ್ಯವಹಾರಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಡಿಸೆಂಬರ್​ನಲ್ಲಿ ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ. (ಏಜೆನ್ಸೀಸ್​)