DIYA 
ಸಿನಿವಾಣಿ

ಮತ್ತೆ ಒಂದಾದ ದಿಯಾ ಸ್ಟಾರ್ಸ್​ ಪೃಥ್ವಿ-ಖುಷಿ

ಸ್ಯಾಂಡಲ್​ವುಡ್​ನಲ್ಲಿ ಕಳೆದ ವರ್ಷ ತೆರೆಕಂಡ ‘ದಿಯಾ’ ಸೃಷ್ಟಿಸಿದ ಕ್ರೇಜ್ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಒಂದು ಸಿನಿಮಾದಿಂದ ಚಿತ್ರದ ಕಲಾವಿದರಾದ ಪೃಥ್ವಿ ಅಂಬರ್, ಖುಷಿ ರವಿ, ದೀಕ್ಷಿತ್ ಶೆಟ್ಟಿಗೆ ಕೈತುಂಬ ಸಿನಿಮಾ ಅವಕಾಶಗಳು ಸಿಕ್ಕಿವೆ. ಆ ಪ್ರಕ್ರಿಯೆ ಈಗಲೂ ಚಾಲ್ತಿಯಲ್ಲಿದೆ. ಈಗ ಇದೇ ‘ದಿಯಾ’ ತಂಡದಿಂದ ಹೊಸ ಸುದ್ದಿ ಹೊರಬಂದಿದೆ. ಆ ಚಿತ್ರದ ಬಳಿಕ ಮತ್ತೊಂದು ಸಿನಿಮಾದಲ್ಲಿ ಪೃಥ್ವಿ, ಖುಷಿ ಮತ್ತೆ ಒಂದಾಗುತ್ತಿದ್ದಾರೆ.

‘ದಿಯಾ’ ಸಿನಿಮಾದಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ದರ್ಶನ್ ಅಪೂರ್ವ, ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆದಿರುವುದು ಚಿತ್ರದ ನಾಯಕ ಪೃಥ್ವಿ ಎಂಬುದು ಮತ್ತೊಂದು ವಿಶೇಷ.

ಕಳೆದ ವರ್ಷ ‘ದಿಯಾ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಈ ಕಥೆ ಹುಟ್ಟಿಕೊಂಡಿತ್ತು. ಇದೀಗ ಅದೇ ಚಿತ್ರದ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ಇಡೀ ತಂಡ ತೊಡಗಿಸಿಕೊಂಡಿದೆ. ಈ ಚಿತ್ರದ ಬಗ್ಗೆ ಮಾತನಾಡುವ ಖುಷಿ, ‘ಕಳೆದ ವರ್ಷವೇ ಈ ಸಿನಿಮಾ ಮಾಡುವ ಬಗ್ಗೆ ಮಾತುಕತೆ ಆಗಿತ್ತು. ಆದರೆ, ಕರೊನಾ ಕಾರಣದಿಂದಾಗಿ ಎಲ್ಲವೂ ತಡವಾಯಿತು. ಅದಾದ ಬಳಿಕ ನಾನು ಮತ್ತು ಪೃಥ್ವಿ ಬೇರೆ ಬೇರೆ ಸಿನಿಮಾಗಳಲ್ಲಿ ಬಿಜಿಯಾದೆವು.

ಇದೀಗ ಮ್ಯೂಸಿಕಲ್ ರೊಮ್ಯಾಂಟಿಕ್ ಡ್ರಾಮಾ ಶೈಲಿಯ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದೇವೆ’ ಎಂಬುದು ಖುಷಿ ಮಾತು.