South Indian Actresses in Politics 
ಸಿನಿವಾಣಿ

ಜಯಲಲಿತಾರಿಂದ ನಗ್ಮಾ, ನಮಿತಾ, ನಟಿ ರಮ್ಯಾವರೆಗೂ; ದಕ್ಷಿಣ ಭಾರತದ ರಾಜಕೀಯದಲ್ಲಿ ಅದೃಷ್ಟ ಪರೀಕ್ಷಿಸಿದ ಸ್ಟಾರ್​​​​ ಹಿರೋಯಿನ್ಸ್​​ ಇವ್ರು..South Indian Actresses

South Indian Actresses in Politics: 90ರ ದಶಕದಲ್ಲಿ ರಮ್ಯಾ, ನಟಿ ನಮಿತಾ, ನಗ್ಮಾ, ಖುಷ್ಬು ಸುಂದರ್​  ಬಹು ಬೇಡಿಕೆಯ ನಟಿಯರಾಗಿದ್ದರು. ಸಿನಿಮಾಗಳಲ್ಲಿ ನಟಿಸಿ, ಪ್ರೇಕ್ಷಕರನ್ನು  ರಂಜಿಸಿ ಫ್ಯಾನ್ಸ್​ ಸಮೂಹ ಗಳಿಸಿಕೊಂಡಿದ್ದ ಇವರು. ಬೆಳ್ಳಿ ಪರದೆಗೆ ಮಾತ್ರ ಸೀಮಿತವಾಗಿ ಉಳಿದುಕೊಂಡಿಲ್ಲ. ರಾಜಕೀಯಕ್ಕೆ ಕಾಲಿಡುವ ಅದೃಷ್ಟ ಪರೀಕ್ಷೆಯಲ್ಲಿ ಪಾಸಾದ ಕೆಲ ನಟಿಯರು ಇನ್ನು ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹಾಗಾದ್ರೆ ಬೆಳ್ಳಿ ಪರದೆಯನ್ನು ಬಿಟ್ಟು ರಾಜಕೀಯ ಜೀವನಕ್ಕೆ ಕಾಲಿಟ್ಟ ನಟಿಯರು ಯಾರು, ಈಗ ಯಾವ ಪಕ್ಷದಲ್ಲಿ ಯಾವ ಹುದ್ದೆಯಲ್ಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ  ಈ ಲೇಖನದಲ್ಲಿ ಇದೆ. 

ಜಯಲಲಿತಾ

ತಮಿಳುನಾಡಿನ ಪ್ರಭಾವಿ ರಾಜಕಾರಿಣಿಗಳಲ್ಲಿ ಜೆ ಜಯಲಲಿತಾ ಒಬ್ಬರು. ಸಿನಿಮಾಗಳಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದ್ದರೂ ಸಹ ಅವರು ಆರಿಸಿಕೊಂಡಿದ್ದು ಮಾತ್ರ ರಾಜಕೀಯವನ್ನು,. 1982ರಲ್ಲಿ ಎಂಜಿ ರಾಮಚಂದ್ರನ್​ ಅವರ ಪ್ರೇರಣೆ ಪಡೆದು ಎಐಎಡಿಎಂಕೆಯನ್ನು ಮುನ್ನಡೆಸಿದರು. 1984ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಅವರು ನಂತರ ತಮಿಳುನಾಡು ವಿಧಾನಸಭೆಗೆ ಪ್ರವೇಶಿಸಿ, ಸಾಕಷ್ಟು ಅವಮಾನಗಳನ್ನು ಅನುಭವಿಸಿ 1991ರಲ್ಲಿ ಮೊದಲ ಬಾರಿಗೆ ಸಿಎಂ ಹುದ್ದೆಗೇರಿದರು. ಅಮ್ಮ ಫಾರ್ಮಸಿ, ಅಮ್ಮಾ ಕ್ಯಾಂಟಿನ್​​ ಸೇರಿದಂತೆ ನಾನಾ ಯೋಜನೆಗಳನ್ನು ಜಾರಿ ಮಾಡಿದರು. ಇದು ದೇಶದ ಹಲವು ರಾಜ್ಯಗಳಿಗೂ ಮಾದರಿಯಾಗಿತ್ತು. 

ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ

ದಿವ್ಯ ಸ್ಪಂದನ, ರಮ್ಯಾ, ಸ್ಯಾಂಡಲ್​ ವುಡ್​ ಕ್ವೀನ್​ ಎಂದು ಕರೆಸಿಕೊಳ್ಳುವ  ರಮ್ಯಾ ಅವರು 2011ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಭಾರತೀಯ ಯುವ ಕಾಂಗ್ರೆಸ್​ಗೆ ಪಾದಾರ್ಪಣೆ ಮಾಡುವ ಮೂಲಕ 2012ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದರು. 2018ಹುದ್ದೆಯಿಂದ ಕೆಳಗಿಳಿದರು. ಸದ್ಯ ಯಾವುದೇ ಪಕ್ಷದಲ್ಲಿ ಸಕ್ರಿಯರಾಗಿಲ್ಲ. ಆದರೆ,  ಕಾಂಗ್ರೆಸ್​ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 

ಗೌತಮಿ ತಡಿಮಲ್ಲ

ತಮಿಳುನಾಡಿನ ಪ್ರಸಿದ್ಧ ನಟಿ ಗೌತಮಿ ತಡಿಮಲ್ಲ ಅವರು 25 ವರ್ಷ ಬಿಜೆಪಿ ಜೊತೆಗಿನ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಸದ್ಯ ಎಐಎಡಿಎಂಕೆ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ಅವರು ಎಐಎಡಿಎಂಕೆ ಉಪ ಪ್ರಚಾರ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. 

ರೋಜಾ ಸೆಲ್ವಮಣಿ 

1990ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ರೋಜಾ ಅವರು  ರೋಜಾ ಆಂಧ್ರಪ್ರದೇಶ ಸರ್ಕಾರದಲ್ಲಿ ಪ್ರವಾಸೋದ್ಯಮ ಸಂಸ್ಕೃತಿ ಮತ್ತು ಯುವ ಅಭಿವೃದ್ಧಿ ಸಚಿವೆಯಾಗಿ ಸೇವೆ ಸಲ್ಲಿಸಿದರು., ಪ್ರಭುದೇವ ಮತ್ತು ಇತರರೊಂದಿಗೆ ನಟಿಸಿದ್ದಾರೆ.

ಖುಷ್ಬೂ ಸುಂದರ್​ 

ಖುಷ್ಬೂ ಸುಂದರ್​ ಸಿನಿಮಾ ನಂತರ ಡಿಎಂಕೆಗೆ ಸೇರುವ ಮೂಲಕ ರಾಜಕೀಯಕ್ಕೆ ಕಾಲಿಟ್ಟರು.  2010 ರಲ್ಲಿ  ಡಿಎಂಕೆ ಸೇರಿದ ಅವರು, 2014ರಲ್ಲಿ  ತೊರೆದು ಕಾಂಗ್ರೆಸ್​ ಸೇರಿಕೊಂಡರು. ರಾಷ್ಟ್ರೀಯ ವಕ್ತಾರೆಯಾಗಿ  ಸೇವೆ ಸಲ್ಲಿಸಿದ ಖುಷ್ಬೂ ಅವರು 2020 ರಲ್ಲಿ ರಾಜೀನಾಮೆ ಕೊಟ್ಟರು. ಆನಂತರ ಬಿಜೆಪಿಗೆ ಸೇರಿದರು ಮತ್ತು ಪ್ರಸ್ತುತ ಅದರ ತಮಿಳುನಾಡು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ನಗ್ಮಾ

1990 ರ ದಶಕದಲ್ಲಿ ತಮಿಳು ಮತ್ತು ತೆಲುಗು ಹಾಗೂ ಕನ್ನಡ ಸಿನಿಮಾದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ನಟಿ ನಗ್ಮಾ ಅವರು ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯಕ್ಕೆ ಬಂದರು. 2014 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮೀರತ್ ನಿಂದ ಸ್ಪರ್ಧಿಸಿದರು. ನಟಿ ನಗ್ಮಾ ಅವರು ತಮಿಳು ನಟಿ ಜ್ಯೋತಿಕಾ ಅವರ ಸಹೋದರಿ.

ನಮಿತಾ ವಂಕವಾಲ

ಕನ್ನಡ, ತೆಲುಗು, ತಮಿಳು ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಮಿತಾ ವಂಕವಾಲ ತಮಿಳುನಾಡಿನಲ್ಲಿ ರಾಜಕೀಯಕ್ಕೆ ಕಾಲಿಟ್ಟರು.  ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿ ಪಕ್ಷದ ರಾಜ್ಯ ಕಾರ್ಯಕಾರಿ ಸದಸ್ಯರಾಗಿ ನೇಮಕಗೊಂಡರು, (ಏಜೆನ್ಸೀಸ್).