ಸಿನಿವಾಣಿ

POWDER Review ; ನಗುವಿನ ಪೌಡರ್​, ಹೈ ಆಗುವ ಮ್ಯಾಟರ್​!

| ಹರ್ಷವರ್ಧನ್​ ಬ್ಯಾಡನೂರು

ಚಿತ್ರ: ಪೌಡರ್​
ನಿರ್ದೇಶನ: ಜನಾರ್ದನ್​ ಚಿಕ್ಕಣ್ಣ
ನಿರ್ಮಾಣ: ಕೆಆರ್​ಜಿ ಸ್ಟುಡಿಯೋಸ್​ ಮತ್ತು ಟಿವಿಎಫ್​
ತಾರಾಗಣ: ದಿಗಂತ್​, ಶರ್ಮಿಳಾ ಮಾಂಡ್ರೆ, ಧನ್ಯಾ ರಾಮಕುಮಾರ್​, ಅನಿರುದ್ಧ್​ ಆಚಾರ್ಯ, ರಂಗಾಯಣ ರು, ನಾಗಭೂಷಣ, ರವಿಶಂಕರ್​, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು.

"ಸಿನಿಮಾ ನೋಡಿ ಹೈ ಆಗಿ, ಡ್ರಗ್ಸ್​ ತಗೊಂಡಲ್ಲ' ಎಂಬ ಸೂಚನೆಯೊಂದಿಗೆ "ಪೌಡರ್​' ಸಿನಿಮಾ ಪ್ರಾರಂಭವಾಗುತ್ತದೆ. ಸಿನಿಮಾ ಸಾಗಿದಂತೆ ಆ ಸೂಚನೆಯೂ ಪ್ರೇಕ್ಷಕರಿಗೆ ಅರ್ಥವಾಗುತ್ತದೆ. ಯಾಕೆಂದರೆ, "ಪೌಡರ್​' ಪ್ರೇಕ್ಷಕರಲ್ಲಿ "ಲಾಜಿಕ್​ ಇಲ್ಲದೇ, ಕಾಮಿಕ್​' ಮೂಲಕ ಮನರಂಜನೆಯ ನಶೆಯೇರಿಸುವ ಸಿನಿಮಾ! ಆದರೆ, ನಟ ಜಗ್ಗೇಶ್​ ಅವರು ಹಿನ್ನೆಲೆಯಲ್ಲಿ, "ಕಥೆನ ಸುತ್ತೀಬಳಸಿ ಹೇಳಿದ್ರೂ, ನೀವು ಬುದ್ಧಿ ಬಳಸಿ ಅರ್ಥ ಮಾಡಿಕೋತೀರಾ' ಹೇಳಿದಂತೆ ಅತ್ತಿತ್ತ ಗಮನಹರಿಸದೆ 131 ನಿಮಿಷಗಳ ಕಾಲ ಸ್ಕ್ರೀನ್​ನತ್ತ ಗಮನವಿದ್ದರೆ ಸಾಕು…

ಆತ ಸೂರ್ಯ (ದಿಗಂತ್​), ಮೈಸೂರಿನ ಸೂಪರ್​ ಮಾರ್ಕೆಟ್​ನಲ್ಲಿ ಕೆಲಸ. ಅವನ ಗರ್ಲ್​ಫ್ರೆಂಡ್​​ ನರ್ಸ್​ ನಿತ್ಯಾ (ಧನ್ಯಾ). ಸೂರ್ಯನ ಗೆಳೆಯ ಕರ್ಣ (ಅನಿರುದ್ಧ್​), ಅಡ್ಡದಾರಿ ಐಡಿಯಾಗಳ ಕುಖ್ಯಾತಿ ಅವನದು. ಚೀನಾದಲ್ಲಿ ಹೊಸ ಡ್ರಗ್ಸ್​ ತಯಾರಿಸುವ ಡಾನ್​ ಬ್ರೂಸ್​ ಲೀ, ಅದನ್ನು ಭಾರತದ ಹ್ಯಾಂಡ್ಲರ್​ ಜೀವ್ಸ್​ ಮೂಲಕ ಕರ್ನಾಟಕದ ಪೆಡ್ಲರ್​ ಅಣ್ಣಾಚಿಗೆ (ರು) ಡ್ರಗ್ಸ್​ ಕಳುಹಿಸುತ್ತಾನೆ. ಇವರಿಗೆ ಕಳುಹಿಸುವ ಡ್ರಗ್ಸ್​ ಅದ್ಹೇಗೋ ಸೂರ್ಯ, ನಿತ್ಯಾ ಮತ್ತು ಕರ್ಣನಿಗೆ ಸಿಗುತ್ತದೆ. ಅದನ್ನು ಮಾರಿ ಹಣ ಗಳಿಸುವ ಪ್ಲ್ಯಾನ್​​ ಇವರದು. ಆ ಐಡಿಯಾ ಕೆಲಸ ಮಾಡುತ್ತಾ? ಅಥವಾ ಅಣ್ಣಾಚಿ ಅದಕ್ಕೆ ಅಡ್ಡಗಾಲು ಹಾಕುತ್ತಾನಾ? ಮುಂದೆ ಏನಾಗುತ್ತದೆ ಎಂಬುದೇ "ಪೌಡರ್​' ಮ್ಯಾಟರ್​!

ಡ್ರಗ್ಸ್​ ಸೇವಿಸದೆಯೂ ಹೈ ಆಗಬಹುದು ಎಂಬುದನ್ನು ನಿರ್ದೇಶಕ ಜನಾರ್ದನ್​ ಚಿಕ್ಕಣ್ಣ ಈ ಚಿತ್ರದಿಂದ ತೋರಿಸಿದ್ದಾರೆ. ಮಾದಕ ವಸ್ತುಗಳ ನಶೆಯೇರಿದರೆ ಯಾವುದೋ ಲೋಕದಲ್ಲಿ ಸಂಚರಿಸುವಂತೆ ಭಾಸವಾಗುತ್ತದೆಯೋ ಆ ಎಲ್ಲ ಲೋಕಗಳ ದರ್ಶನ ಮಾಡಿಸಿದ್ದಾರೆ. ಹೀಗಾಗಿಯೇ ಚಿತ್ರದಲ್ಲಿ ವಿಎ್​ಎಕ್ಸ್​ ಮತ್ತು ಆ್ಯನಿಮೇಷನ್​ ಕೂಡ ಹೇರಳವಾಗಿವೆ. ಅದನ್ನು ದೊಡ್ಡ ತೆರೆಯ ಮೇಲೆ ನೋಡುವುದೇ ಚಂದ. ಮೊದರ್ಲಧದಲ್ಲಿ ವೇಗವಾಗಿ ಸಾಗುವ ಕಥೆ, ದ್ವೀತಿಯಾರ್ಧದಲ್ಲಿ ನಶೆಯ ಲೋಕಕ್ಕೆ ಕೊಂಡೊಯ್ಯುತ್ತದೆ. ಆಗ ಸ್ವಲ್ಪ ನಿಧಾನವೆನಿಸಿದರೂ ಸಿನಿಮಾ ಬೋರ್​ ಅನ್ನಿಸುವುದಿಲ್ಲ. ದಿಗಂತ್​, ಧನ್ಯಾ, ಶರ್ಮಿಳಾ, ಅನಿರುದ್ಧ್​, ರಂಗಾಯಣ ರು, ರವಿಶಂಕರ್​, ನಾಗಭೂಷಣ, ಗೋಪಾಲ್​ ದೇಶಪಾಂಡೆ ನಗಿಸುವಲ್ಲಿ ಎಲ್ಲರೂ ಲೀಲಾಜಾಲ. "ಚಿತ್ರದಲ್ಲಿ ಲಾಜಿಕ್​ ಇಲ್ಲ ಬರೀ ಮ್ಯಾಜಿಕ್​' ಅಂತ ಚಿತ್ರತಂಡ ಮೊದಲೇ ಹೇಳಿತ್ತು. ಅದರಂತೆ "ಪೌಡರ್​'ನಲ್ಲಿ ಯಾವುದೇ ಮೆಸೇಜ್​ ಇಲ್ಲ, ಹಾಗಂತ ಮನರಂಜನೆಗೆ ಕೊರತೆಯಿಲ್ಲ.