ಸಿನಿವಾಣಿ

ತಲೆ ಬಾಚ್ಕೊಳಿ, POWDER ಹಾಕ್ಕೊಳಿ ; ನೋ ಲಾಜಿಕ್​, ಸಂಪೂರ್ಣ ಕಾಮಿಡಿ ಮ್ಯಾಜಿಕ್​


ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ದಿಗಂತ್​, ಶರ್ಮಿಳಾ ಮಾಂಡ್ರೆ, ಧನ್ಯಾ ರಾಮಕುಮಾರ್​ ಮತ್ತು ಅನಿರುದ್ಧ್​ ಆಚಾರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಗುಳ್ಟೂ' ಖ್ಯಾತಿಯ ಜನಾರ್ಧನ್​ ಚಿಕ್ಕಣ್ಣ ನಿರ್ದೇಶಿಸಿರುವ ಸಿನಿಮಾ "ಪೌಡರ್​'. ನಾಲ್ವರು ಗೆಳೆಯರಿಗೆ ಡ್ರಗ್ಸ್​ ಪ್ಯಾಕೇಜ್​ ಸಿಕ್ಕಿ, ಅದರಿಂದ ಶ್ರೀಮಂತರಾಗಲು ಪ್ಲಾ$್ಯನ್​ ಮಾಡುತ್ತಾರೆ. ಅವರು ಹಣ ಗಳಿಸುತ್ತಾರಾ? ಅಥವಾ ಸಮಸ್ಯೆಗೆ ಸಿಲುಕುತ್ತಾರಾ? ಎಂಬುದರ ಸುತ್ತ "ಪೌಡರ್​' ಕಥೆ ಸಾಗುತ್ತದೆ. ನಾಯಕ ದಿಗಂತ್​, "ಇದು ಒಳ್ಳೆ ಕಾಮಿಡಿ ಸಿನಿಮಾ. ಪ್ರೇಕ್ಷಕರಿಗೆ ಭರಪೂರ್ತಿ ಮನರಂಜನೆ ನೀಡಲಿದೆ' ಎಂದರು. ಅವರಿಗೆ ಧ್ವನಿಗೂಡಿಸಿದ ಶರ್ಮಿಳಾ ಮತ್ತು ಧನ್ಯಾ, "ಸಿನಿಮಾ ಚೆನ್ನಾಗಿ ಮೂಡಿಬಂದಿದೆ. 131 ನಿಮಿಷ ಥಿಯೇಟರ್​ಗಳಲ್ಲಿ ಕುಳಿತು ನಕ್ಕು ಸಂಭ್ರಮಿಸುವ ಚಿತ್ರವಿದು' ಎಂದು ಹೇಳಿಕೊಂಡರು.

""ಛೋಟಾ ಭೀಮ್​' ಆ್ಯನಿಮೇಷನ್​ ಮಾಡಿರುವ ಗ್ರೀನ್​ ಬೋಲ್ಡ್​ ಸಂಸ್ಥೆ ಚಿತ್ರಕ್ಕಾಗಿ ಒಂದು ನಿಮಿಷ ಆ್ಯನಿಮೇಷನ್​ ಮಾಡಿಕೊಟ್ಟಿದೆ. ಹಾಗೇ ನಟ ಜಗ್ಗೇಶ್​ ನರೇಷನ್​ ಕೂಡ ಅಲ್ಲಲ್ಲಿ ನಗಿಸುತ್ತದೆ. ಮೊದಲು "ಕ್ಯೂಟಿಕುರಾ', "ಟ್ಯಾಲ್ಕಮ್​ ಪೌಡರ್​' ಅಂತೆಲ್ಲ ಟೈಟಲ್​ ಪ್ಲಾ$್ಯನ್​ ಮಾಡಿದ್ದೆವು. ಆದರೆ, "ಪೌಡರ್​' ಕಥೆಗೆ ಸೂಕ್ತ ಅಂತನ್ನಿಸಿ ಈ ಟೈಟಲ್​ ಫಿಕ್ಸ್​ ಮಾಡಿದೆವು' ಎಂದು ಮಾಹಿತಿ ನೀಡುತ್ತಾರೆ ನಿರ್ಮಾಪಕ ಕಾರ್ತಿಕ್​ ಗೌಡ. ಇತ್ತೀಚೆಗಷ್ಟೆ "ಪೌಡರ್​' ಚಿತ್ರದ ಪ್ರಿ&ರಿಲೀಸ್​ ಕಾರ್ಯಕ್ರಮ ಆಯೋಜಿಸಲಾಗಿತ್ತು. ದುನಿಯಾ ವಿಜಯ್​, ಶ್ರೀಮುರಳಿ, ದಾನಿಷ್​ ಸೇಠ್​, ಐಂದ್ರಿತಾ ರೇ, ನಿರ್ದೇಶಕ ರೋಹಿತ್​ ಪದಕಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭಹಾರೈಸಿದರು. "ಪೌಡರ್​' ಇದೇ ಶುಕ್ರವಾರ (ಆ. 23) ರಾಜ್ಯಾದ್ಯಂತ ತೆರೆಗೆ ಬರಲಿದೆ.

ಟಿಕೆಟ್​ ದರ ಕಡಿತ
ಕೆಲವು ತಿಂಗಳಿಂದ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಬರುತ್ತಿಲ್ಲ, ಹೀಗಾಗಿ ಕನ್ನಡ ಸಿನಿಮಾ ಮತ್ತು ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ ಎಂಬ ಮಾತಿದೆ. ಆ ಕಷ್ಟ ನಿವಾರಣೆಗಾಗಿಯೇ ಇತ್ತೀಚೆಗಷ್ಟೆ ಕಲಾವಿದರ ಸಂದ ವತಿಯಿಂದ ಹೋಮ, ವಿಶೇಷ ಪೂಜೆಯನ್ನೂ ಆಯೋಜಿಸಲಾಗಿತ್ತು. ಇದೀಗ ಪ್ರೇಕ್ಷಕರನ್ನು ಸೆಳೆಯಲು "ಪೌಡರ್​' ತಂಡ ಹೊಸ ಐಡಿಯಾ ಮಾಡಿದೆ. ಮಲ್ಟಿಪ್ಲೆಕ್ಸ್​ಗಳಲ್ಲೂ ಟಿಕೆಟ್​ ದರವನ್ನು 150 ರೂ.ನಿಂದ 180 ರೂ.ವರೆಗೆ ನಿಗದಿಪಡಿಸಲಾಗಿದೆ. ಗೋಲ್ಡ್​ ಕ್ಲಾಸ್​ ಮತ್ತು ಪ್ರೀಮಿಯಂ ಸೀಟುಗಳಿಗೆ ಇದು ಅನ್ವಯಿಸುವುದಿಲ್ಲ.