ಇತ್ತೀಚೆಗೆ, ನಟಿ ಸುಶ್ಮಿತಾ ಸೇನ್ ಅವರು ಮುಂಬೈನ ಬಾಂದ್ರಾದಲ್ಲಿ ತಮ್ಮ ಹೆಣ್ಣುಮಕ್ಕಳಾದ ರೆನೀ ಮತ್ತು ಅಲಿಸಾ ಜತೆಗೆ ಒಂದು ಗಂಡು ಮಗುವಿನೊಂದಿಗೆ ಕಾಣಿಸಿಕೊಂಡರು. ಅವರು ಕಾಣಿಸಿಕೊಂಡ ವಿಡಿಯೋ ಸದ್ಯ ವೈರಲ್ ಆಗಿದೆ. ಇನ್ನು, ವಿಡಿಯೋದಲ್ಲಿರುವ ಮೂರನೇ ಮಗು ಆರ್ಯ ನಟಿಯ ಹೊಸ ದತ್ತುಪುತ್ರ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿದವು. ಆದರೆ, ನಟಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ವೀಡಿಯೊದಲ್ಲಿ ನಟಿ ಮೂರು ಮಕ್ಕಳೊಂದಿಗೆ ಮಾದ್ಯಮದವರಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.